Wednesday, January 22, 2025

ಬಹಳ ಶುದ್ಧ ಹಸ್ತದವರು ಯಾತ್ರೆ ಹೊರಟಿದ್ದಾರೆ: ಸಿಎಂ ಬೊಮ್ಮಾಯಿ

ಬೆಂಗಳೂರು : ಪವಿತ್ರ ಹಸ್ತದವರು, ಬಹಳ ಶುದ್ಧ ಹಸ್ತದವರು ಯಾತ್ರೆಗೆ ಹೊರಟಿದ್ದಾರೆ ಮತ್ತು ಅವರ ಬೀರುವಿನಲ್ಲಿ ಎಷ್ಟೊಂದು ಭ್ರಷ್ಟಾಚಾರದ ಅಸ್ಥಿ ಪಂಜರಗಳು ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ವ್ಯಂಗವಾಡಿದರು.

ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಆರೋಪ ಇದೆ. ಇದು ತನಿಖೆ ಆಗ್ತಾ ಇದ್ದು, ಪೋಸ್ಟ್ ಮಾರ್ಟಮ್ ಕೂಡ ಮಾಡಲಾಗಿದೆ. FSL ವರದಿ ಆಧಾರದ ಮೇಲೆ ಸೈಂಟಿಫಿಕ್ ಆಗಿ ಏನ್ ನಡಿತಿದೆ ಅಂತ ಗೊತ್ತಾಗುತ್ತದೆ ಎಂದರು.

ಸಿದ್ದರಾಮಯ್ಯ ಜಾರ್ಜ್ ವಿಚಾರಕ್ಕೆ ಪ್ರತಿಕ್ರಿಯಿಸಿ ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು, ಡೆತ್ ನೋಟ್ ಇತ್ತು. ಆವಾಗ ಅವರ ವಿರುದ್ಧ FIR ಆಗಿತ್ತಾ..? ಮುಚ್ಚಾಕುವ ಪ್ರಯತ್ನ ಆಗಿಲ್ವಾ..? ಬಳಿಕ ಕೋರ್ಟ್​ನಿಂದ ಆದೇಶ ಬಂದ ಮೇಲೆ Fir ಆಯ್ತು. ಆ ವೇಳೆಯಲ್ಲಿ ಅವರ ಮನೆಯವರು ಕೋರ್ಟ್​ಗೆ ಹೋಗಬೇಕಾದ ಪರಿಸ್ಥಿತಿ ಬಂದಿತು.

ನಾವು ಮನೆಯವರ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣ ತನಿಖೆಯಲ್ಲಿ ಏನೆಲ್ಲ ಬರುತ್ತೆ ಅದರ ಆಧಾರದ ಮೇಲೆ ಮುಂದಿನ ಸೆಕ್ಷನ್ ಹಾಕ್ತೀನಿ. ಕಾಂಗ್ರೆಸ್ ನಾಯಕರು ಅವರೇ ಲಾಯರ್ ಆಗಬೇಕು, ಅವರೇ ಜಡ್ಜ್ ಆಗಬೇಕು ಅಂತಾರೆ ಇದೆಲ್ಲ ನಡೆಯಲ್ಲ. ನೀವು ಏನೆಲ್ಲಾ ಮುಚ್ಚಾಕ್ಕಿದ್ದೀರಿ ಅಂತ ಜನಕ್ಕೆ ಗೊತ್ತು ಎಂದು ಕಿಡಿಕಾರಿದರು.

ಕಾಂಗ್ರೆಸ್ ಪ್ರವಾಸ ವಿಚಾರಕ್ಕೆ  ಪ್ರತಿಕ್ರಿಯಿಸಿ ಪ್ರವಾಸ ಮಾಡಲಿ ಪ್ರಶ್ನೆ ಇಲ್ಲ. ಅವರು ಬಹಳ ಶುದ್ಧ ಹಸ್ತದವರು, ಪವಿತ್ರ ಹಸ್ತದವರು, ಇವರು ಕಮಿಷನ್ ಬಗ್ಗೆ ಮಾತಾಡುತ್ತಾರೆ. ಬಹಳ ಶುದ್ಧ ಹಸ್ತದವರು ಯಾತ್ರೆಗೆ  ಹೊರಟಿದ್ದಾರೆ. ಈಗಾಗಲೇ ಜನಕ್ಕೆ ಗೊತ್ತಾಗಿದೆ. ಮತ್ತು ಅವರ ಬೀರುನಲ್ಲಿ ಭ್ರಷ್ಟಾಚಾರದ ಎಷ್ಟೊಂದು ಅಸ್ಥಿ ಪಂಜರ ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ. ಯಾವುದು ಕೂಡ ಜನರಿಗೆ ಪ್ರಯೋಜನ ಆಗಲ್ಲ ಎಂದು ವ್ಯಂಗವಾಡಿದರು.

RELATED ARTICLES

Related Articles

TRENDING ARTICLES