Wednesday, January 22, 2025

ಬೆಳ್ಳಿತೆರೆ ಮೇಲೆ ಕರುನಾಡ ‘ಬಂಗಾರ’ದ ಕಥೆ ಅನಾವರಣ

ಬೆಳ್ಳಿತೆರೆ ಮೇಲೆ ಕರುನಾಡ ‘ಬಂಗಾರ’ದ ಕಥೆ ಅನಾವರಣ. ಮಧ್ಯೆರಾತ್ರಿಯಿಂದಲೇ ಓಪನ್ ಆಯ್ತು ನರಾಚಿಯ ಗೇಟ್ಸ್. ಇದು KGF ಚಾಪ್ಟರ್ 2 ಅಲ್ಲ.. ಇಂಡಸ್ಟ್ರಿ ನಯಾ ಚಾಪ್ಟರ್. 10,600 ಸ್ಕ್ರೀನ್ಸ್.. 45 ಸಾವಿರ ಶೋ.. 150 ಕೋಟಿ ಕಲೆಕ್ಷನ್..? ಪವರ್ ಟಿವಿಯಲ್ಲಿ ಫಸ್ಟ್ ಡೇ ಫಸ್ಟ್ ಶೋ ಕಂಪ್ಲೀಟ್ ರಿವ್ಯೂ. ಇದೇ ಇವೊತ್ತಿನ ಫಿಲ್ಮಿ ಪವರ್ ವಿಶೇಷ ರಾಕಿಂಗ್ ರಿಪೋರ್ಟ್​.

ದಿ ವೆಯ್ಟ್ ಈಸ್ ಓವರ್. ಪ್ರೈಡ್ ಆಫ್ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 2 ಕೊನೆಗೂ ಬೆಳ್ಳಿಪರದೆ ಬೆಳಗಿದೆ. ಇಷ್ಟಕ್ಕೂ ಚಿತ್ರದ ಕಥೆ ಏನು..? ರಾಕಿಭಾಯ್ ಹವಾ ಹೇಗಿದೆ..? ನೀಲ್ ಮೇಕಿಂಗ್ ಮಸಲತ್ತು ಎಂಥದ್ದು ಅನ್ನೋದ್ರ ಜೊತೆ ಫಸ್ಟ್ ಡೇ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ಅನ್ನೋದ್ರ ಡಿಟೈಲ್ಡ್ ಪವರ್​ಫುಲ್ ರಿವ್ಯೂ ರಿಪೋರ್ಟ್​ ನಿಮ್ಮ ಮುಂದೆ.

ಕನ್ನಡ ಚಿತ್ರರಂಗದ ಆಲ್​ಟೈಮ್ ಮಾಸ್ಟರ್​ಪೀಸ್ ಸಿನಿಮಾ ಕೆಜಿಎಫ್ ಚಾಪ್ಟರ್ 1 ತೆರೆಕಂಡು ನಾಲ್ಕು ವರ್ಷಗಳಾಯ್ತು. ಇಂದಿನವರೆಗೆ ಅದ್ರ ಸೀಕ್ವೆಲ್ ಸಿನಿಮಾದ ಮೇಲಿನ ನಿರೀಕ್ಷೆ ಮಾತ್ರ ಬೆಟ್ಟದಂತೆ ಹಾಗೆಯೇ ಇತ್ತು. ಆದ್ರೀಗ ಬೆಳ್ಳಿತೆರೆ ಮೇಲೆ ಕರುನಾಡಿನ ಬಂಗಾರದ ಕಥೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ಅನಾವರಣಗೊಂಡಿದೆ. ಮಧ್ಯೆ ರಾತ್ರಿಯಿಂದಲೇ ವಿಶ್ವದಾದ್ಯಂತ ನರಾಚಿಯ ಗೇಟ್ಸ್ ಓಪನ್ ಆಗಿವೆ.

ಇದು ಕೆಜಿಎಫ್ ಚಾಪ್ಟರ್ 2 ಅಲ್ಲ, ಭಾರತೀಯ ಚಿತ್ರರಂಗದ ಹೊಸ ಚಾಪ್ಟರ್ ಅಂತಲೇ ಎಲ್ಲರೂ ಮಾತಾಡ್ತಿದ್ದಾರೆ. ವಿಶ್ವದ 75ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 10 ಸಾವಿರದ ಆರನೂರಕ್ಕೂ ಅಧಿಕ ಸ್ಕ್ರೀನ್ಸ್​ನಲ್ಲಿ 45 ಸಾವಿರ ಶೋಗಳಿಂದ ಬಿಗ್ ಸ್ಕ್ರೀನ್ ಬ್ಯಾಂಗ್ ಮಾಡಿದ್ದಾರೆ ರಾಕಿಭಾಯ್. ಇಷ್ಟಕ್ಕೂ ಸಿನಿಮಾ ಹೇಗಿದೆ..? ಕಥೆ ಏನು..? ಆರ್ಟಿಸ್ಟ್ ಪರ್ಫಾಮೆನ್ಸ್​ಗೆ ಎಷ್ಟು ಮಾರ್ಕ್ಸ್ ಸಿಕ್ತು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ಕೆಜಿಎಫ್-2 ಸ್ಟೋರಿಲೈನ್

ನರಾಚಿಯ ರಾಕ್ಷಸ ಗರುಡನನ್ನ ಎತ್ತಲು ಸುಪಾರಿ ಪಡೆದು ಮುಂಬೈನಿಂದ ಬಂದ ರಾಕಿ, ನುಡಿದಂತೆ ನಡೆದು, ಗರುಡನ ರುಂಡ ಚೆಂಡಾಡಿದ್ರು. ಮುಂದೇನಾಯ್ತು ಎಲ್ ಡೊರಾಡೋ ಕಥೆ ಅನ್ನೋ ಕುತೂಹಲಕ್ಕೆ ಈಗ ಚಾಪ್ಟರ್ 2 ಉತ್ತರ ನೀಡಿದೆ. ಚಿನ್ನದ ನಾಡಲ್ಲಿ ರಾಕಿ ಹೊಸ ಸಾಮ್ರಾಜ್ಯ ಕಟ್ಟುತ್ತಾನೆ. ಸುಪಾರಿ ಯಾರಿಂದ ಪಡೆದ್ರೋ ಅವ್ರನ್ನೇ ಬ್ಯುಸಿನೆಸ್ ಪಾಟ್ನರ್​ಗಳನ್ನಾಗಿಸಿಕೊಳ್ತಾನೆ. ರಾಕಿ ಗೋಲ್ಡ್ ಬ್ಯುಸಿನೆಸ್ ಜೊತೆ ಅವ್ರ ಲೈಫ್, ಲೈಫ್ ಸ್ಟೈಲ್ ಎಲ್ಲವೂ ಬದಲಾಗುತ್ತೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋ ಬದಲು ಹಾಸಿಗೆಯನ್ನೇ ದೊಡ್ಡದು ಮಾಡಿಕೊಂಡಿದ್ದಾನೆ. ಬೌಂಡರಿ ಹಾಕ್ಕೊಂಡು ಜೀವಿಸೋ ವ್ಯಕ್ತಿತ್ವ ನನ್ನದಲ್ಲ, ಇಡೀ ವರ್ಲ್ಡ್​ ನನ್ನ ಟೆರಿಟರಿ ಅಂತ ಅಬ್ಬರಿಸ್ತಾನೆ. ಅಮ್ಮನಿಗೆ ಕೊಟ್ಟ ಭಾಷೆ ಹಾಗೂ ನಂಬಿದವರಿಗಾಗಿ ನೆತ್ತರ ಕೋಡಿ ಹರಿಸ್ತಾನೆ. ಸ್ವಯಂ ಘೋಷಿತ ಇಂಡಿಯನ್ ಸಿಇಒ ಆಗಿ ಕಮಾಲ್ ಮಾಡಿ, ಚಿನ್ನದ ಮೋಹದಲ್ಲಿ ಸಿಲುಕಿಕೊಳ್ತಾನೆ. ಆದ್ರೆ ಆ ಚಿನ್ನದ ನಾಡು ನಂದು ಅಂತ ಅಧೀರನ ಎಂಟ್ರಿ ಆಗುತ್ತೆ. ಸಿಬಿಐ, ಪೊಲೀಸ್, ಪ್ರಧಾನಿ ರಮಿಕಾ ಸೇನ್ ಹೀಗೆ ಇಡೀ ವ್ಯವಸ್ಥೆ ಅವನ ವಿರುದ್ಧ ತಿರುಗಿ ಬೀಳುತ್ತೆ. ನಂತ್ರ ಏನಾಗುತ್ತೆ ಅನ್ನೋದೇ ಚಿತ್ರದ ಕಥಾನಕ.

ಪಂಚ್ ಡೈಲಾಗ್ಸ್.. ಕಿಲ್ಲಿಂಗ್ ಲುಕ್ಸ್​ನ ತೂಫಾನ್ ರಾಕಿ..!

ಕೆಜಿಎಫ್ ಮೊದಲ ಭಾಗದಲ್ಲಿ ಯಶ್ ಧೂಳಿನ ಸಾಮ್ರಾಜ್ಯದಲ್ಲಿ ಕೂಲಿಕಾರನಾಗಿ ಕಾಣಿಸಿಕೊಂಡಿದ್ರು. ಆದ್ರೀಗ ಈ ಬಾರಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಅದ್ರಲ್ಲೂ ಶಿಳ್ಳೆ- ಚಪ್ಪಾಳೆ ತರಿಸೋ ಅಂತಹ ಹೈ ವೋಲ್ಟೇಜ್ ಪಂಚ್ ಡೈಲಾಗ್ಸ್ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಿವೆ.

ಆ್ಯಕ್ಷನ್ ಬ್ಲಾಕ್ಸ್​​ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಾರೆ ಯಶ್. ಅದ್ರಲ್ಲೂ ರಾಕಿ ಸ್ಟೈಲು ಮ್ಯಾನರಿಸಂ ಪ್ರೇಕ್ಷಕರಿಂದ ಶಿಳ್ಳೆ- ಚಪ್ಪಾಳೆ ತರಿಸಲಿದೆ. ನಟನೆಯಲ್ಲಿ ಒಂದು ಗತ್ತು, ಆ ಪಾತ್ರದಲ್ಲಿ ಗಾಂಭೀರ್ಯ ಸಿನಿಮಾದ ಹೈಲೈಟ್ ಆಗಿದೆ.

ನರಾಚಿಯಲ್ಲಿ ರಾಕಿಭಾಯ್​ನ ಅಸಲಿ ಎದುರಾಳಿ ಅಧೀರನ ಪಾತ್ರದಲ್ಲಿ ಬಾಲಿವುಡ್ ಬಡೇ ಭಾಯ್ ಸಂಜಯ್ ದತ್ ಮಿಂಚು ಹರಿಸಿದ್ದಾರೆ. ಡಿಫರೆಂಟ್ ಗೆಟಪ್​ನಲ್ಲಿ ಸಂಜುಬಾಬಾ ಡೆಡ್ಲಿ ಹಾಗೂ ಡೇರಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಇನ್ನು ಪ್ರಧಾನಿ ರಮಿಕಾ ಸೇನ್ ರೋಲ್​ನಲ್ಲಿ ರವೀನಾ ಟಂಡನ್ ಆಟಿಟ್ಯೂಡ್ ಅಲ್ಟಿಮೇಟ್ ಆಗಿದ್ದು, ಪಾತ್ರದ ಗಮ್ಮತ್ತು ಸಖತ್ ಥ್ರಿಲ್ಲಿಂಗ್ ಆಗಿದೆ.

ಮೊದಲ ಭಾಗಕ್ಕಿಂತ ಬಹುದೊಡ್ಡ ಪಾತ್ರ ಪೋಷಿಸಿರೋ ನಾಯಕನಟಿ ಶ್ರೀನಿಧಿ ಶೆಟ್ಟಿ, ನೋಡುಗರ ಗಮನ ಸೆಳೆಯುತ್ತಾರೆ. ರಾಕಿ ಌಕ್ಷನ್ ಗ್ರಾಮರ್​ಗೆ ಈಕೆಯ ಗ್ಲಾಮರ್ ಸಾಥ್ ನೀಡಿದ್ದು, ಕ್ಲೈಮ್ಯಾಕ್ಸ್​ನಲ್ಲಿ ನೋಡುಗರ ಕಣ್ಣು ಒದ್ದೆಯಾಗಿಸ್ತಾರೆ.

ಉಳಿದಂತೆ ಗರುಡ ರಾಮ್, ಅವಿನಾಶ್, ಲಕ್ಕಿ ಲಕ್ಷ್ಮಣ್, ಅಚ್ಯುತ್, ವಸಿಷ್ಠ, ಮಾಳವಿಕಾ, ಟಿಎಸ್ ನಾಗಾಭರಣ, ರಾವು ರಮೇಶ್, ಅಯ್ಯಪ್ಪ, ಹರೀಶ್ ರಾಯ್ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪ್ರಕಾಶ್ ರೈ ವಾಯ್ಸ್ ಚಿತ್ರಕ್ಕೆ ಪ್ಲಸ್ ಆಗಿದ್ದು, ಎಲ್ ಡೊರಾಡೋ ನಿರೂಪಣಾ ಶೈಲಿ ಇಂಪ್ರೆಸ್ಸೀವ್ ಆಗಿದೆ.

ಕೆಜಿಎಫ್- 2 ಪ್ಲಸ್ ಪಾಯಿಂಟ್ಸ್

  • ಯಶ್ ಪರ್ಫಾಮೆನ್ಸ್
  • ರಿಚ್ ಮೇಕಿಂಗ್
  • ರವಿ ಬಸ್ರೂರು ಬ್ಯಾಗ್ರೌಂಡ್ ಮ್ಯೂಸಿಕ್
  • ಭುವನ್ ಗೌಡ ಸಿನಿಮಾಟೋಗ್ರಫಿ
  • ಶಿವಕುಮಾರ್ ಆರ್ಟ್​ ವರ್ಕ್​
  • ತಾಯಿ ಸೆಂಟಿಮೆಂಟ್
  • ಸಂಜಯ್ ದತ್, ರವೀನಾ ಟಂಡನ್ ನಟನೆ
  • ಪವರ್​ಫುಲ್ ಡೈಲಾಗ್ಸ್
  • ಌಕ್ಷನ್ ಬ್ಲಾಕ್ಸ್
  • ಚಾಪ್ಟರ್ 3ರ ಹಿಂಟ್

ಕೆಜಿಎಫ್-2 ಮೈನಸ್ ಪಾಯಿಂಟ್ಸ್

  • ಅತಿಯಾದ ಗುಂಡಿನ ಮೊರೆತ
  • ಅವಶ್ಯಕತೆಗೂ ಮೀರಿದ ಡೈಲಾಗ್ಸ್
  • ಕರ್ಕಶ ಅನಿಸೋ ಹಿನ್ನೆಲೆ ಸಂಗೀತ
  • ಫ್ಯಾನ್ ಗಾಳಿಗಾಗಿ ಚಾಪರ್ ಹಾರಿಸೋದು
  • ಹಾಸ್ಯಕ್ಕೆ ಸ್ಪೇಸ್ ನೀಡದಿರೋದು
  • ಸಂಕಲನ ಪಕ್ವವಾಗಿ ಆಗಿಲ್ಲ

ಕೆಜಿಎಫ್-2ಗೆ ಪವರ್ ಟಿವಿ ರೇಟಿಂಗ್: 3.5/5

ಕೆಜಿಎಫ್- 2 ಫೈನಲ್ ಸ್ಟೇಟ್​ಮೆಂಟ್

ಮೇಕಿಂಗ್ ಮೇಲೆ ಫೋಕಸ್ ಮಾಡಲು ಹೋಗಿ ಪ್ರಶಾಂತ್ ನೀಲ್ ಅಲ್ಲಲ್ಲಿ ಲಾಜಿಕ್​ಗಳನ್ನ ಮಿಸ್ ಮಾಡಿದ್ದಾರೆ ಅನಿಸುತ್ತೆ. ಆದ್ರೆ ಕನ್ನಡ ಚಿತ್ರರಂಗದ ಮಟ್ಟಿಗೆ ಇದು ನಿಜಕ್ಕೂ ಮಾಸ್ಟರ್​ಪೀಸ್ ಸಿನಿಮಾ. ಬಿಗ್ ಸ್ಕೇಲ್​ನಲ್ಲಿ ಸಿನಿಮಾ ಮಾಡುವಾಗ ಎಲ್ಲವನ್ನೂ ಬ್ಯಾಲೆನ್ಸ್ ಮಾಡೋದು ಕಷ್ಟಸಾಧ್ಯ. ಹಾಗಾಗಿಯೇ ಇಲ್ಲಿ ಯಶ್ ಒನ್ ಮ್ಯಾನ್ ಶೋ ಅನಿಸಲಿದೆ. ಸಂಜಯ್ ದತ್, ರವೀನಾ ಟಂಡನ್​ರನ್ನ ಇನ್ನೂ ಪರಿಣಾಮಕಾರಿಯಾಗಿ ಬಳಸಬಹುದಿತ್ತು. ಆದ್ರೆ ನೀಲ್- ರಾಕಿಭಾಯ್ ಮಾನ್​ಸ್ಟರ್ ಮಾಸ್ಟರ್​ಮೈಂಡ್ಸ್​​ ಅನ್ನೋದು ಪ್ರೂವ್ ಆಗಿದೆ. ಒಂದಷ್ಟು ಶಾಟ್ಸ್ ನಿಜಕ್ಕೂ ನೋಡುಗರಿಗೆ ಸಿಕ್ಕಾಪಟ್ಟೆ ಥ್ರಿಲ್ ನೀಡುತ್ತೆ.

ಯಶ್- ಸಂಜಯ್ ದತ್​ರ ಕೌಂಟರ್, ಎನ್​ಕೌಂಟರ್ ಡೈಲಾಗ್ಸ್ ಹಾಗೂ ಌಕ್ಷನ್ ಸೀಕ್ವೆನ್ಸ್​ಗಳು ನೋಡುಗರನ್ನ ಸೀಟ್​ನ ಎಡ್ಜ್​ನಲ್ಲಿ ಕೂರಿಸಲಿದೆ. ವಿಶ್ಯುವಲ್ ಟ್ರೀಟ್ ಕೊಡೋ ಎಮೋಷನಲ್ ಹಾಗೂ ಌಕ್ಷನ್ ಜರ್ನಿ ಇದಾಗಿದ್ದು, ಕ್ಲೈಮ್ಯಾಕ್ಸ್​ನಲ್ಲಿ ಕೆಜಿಎಫ್ 3 ಹಿಂಟ್ ಕೂಡ ನೀಡಲಾಗಿದೆ. ಇದು ನಿಜಕ್ಕೂ ಯಶ್ ಫ್ಯಾನ್ಸ್​ನ ಹುಮ್ಮಸ್ಸು ಉತ್ಸಾಹವನ್ನು ದ್ವಿಗುಣಗೊಳಿಸಿದ್ದು, ಮಗದೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಜಿಎಫ್ ರಾರಾಜಿಸೋ ಮನ್ಸೂಚನೆ ನೀಡಿದೆ. ಒಟ್ಟಾರೆ ಈ ವೀಕೆಂಡ್ ಸಿನಿಮಾ ನೋಡಲು ಬಯಸೋರಿಗೆ ಕೆಜಿಎಫ್ ಬೆಸ್ಟ್ ಚಾಯ್ಸ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES