Monday, December 23, 2024

ಸಿದ್ದರಾಮಯ್ಯಗೆ ಮಾತಾಡಲು ಯಾವ ಹಕ್ಕಿದೆ..? : ಸಿಎಂ ಬೊಮ್ಮಾಯಿ

ಬೆಂಗಳೂರು : ಸಿದ್ದರಾಮಯ್ಯನವರು ಸಿಎಂ ಆದಾಗ ಹಲವಾರು ಲಂಚ ಆರೋಪ ಪ್ರಕರಣಗಳು ಬೆಳಕಿಗೆ ಬಂದಿ ಬಂದಿದ್ದಾವೆ. ಅವರಿಗೆ ಈ ಬಗ್ಗೆ ಮಾತಾಡಲು ಯಾವ ಹಕ್ಕಿದೆ..? ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಸಂತೋಷ್ ಆತ್ಮಹತ್ಯೆ ಕೇಸ್ ಹಿನ್ನಲೆ ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್​​ನವರ ಭಾರೀ‌ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆತ್ಮಹತ್ಯೆ ‌ಕೇಸ್​​ನ ಸಂಪೂರ್ಣ ತನಿಖೆ ನಡೆಯಲಿದೆ. ಪ್ರಾಥಮಿಕ ಹಂತದ ತನಿಖೆಯ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಥಮಿಕ ಹಂತದ ವರದಿ ಬರೋವರೆಗೂ ಯಾವುದೇ ಕ್ರಮಗಳಿಲ್ಲ ಮತ್ತು ರಾಜೀನಾಮೆಯು ಇಲ್ಲ ಎಂದು ಸ್ಪಷ್ಟನೆ ನೀಡಿದರು

ಇನ್ನು ಇದೇ ವೇಳೆ ಸಿದ್ದರಾಮಯ್ಯನವರು ಸಿಎಂ ಆದಾಗ ಹಲವಾರು ಲಂಚ ಆರೋಪ ಪ್ರಕರಣಗಳು ಬೆಳಕಿಗೆ  ಬಂದಿದ್ದಾವೆ. ಬಿಡಿಎದಲ್ಲೇ ದೊಡ್ಡ ಹಗರಣ ಸೇರಿದಂತೆ ಹಲವಾರು ಆರೋಪಗಳು ಅವರ ಮೇಲೆ ಬಂದಿದ್ದವು. ಈಗ ಅವರಿಗೆ ಈ ವಿಚಾರದ ಬಗ್ಗೆ ಮಾತಾಡಲು ಯಾವ ಹಕ್ಕಿದೆ..? ಎಂದು ವಾಗ್ದಾಳಿ ನಡೆಸಿದರು.

ಅದುವಲ್ಲದೇ ಅವರು ಒಂದು ಜವಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಏನಾದರೂ ಫೆಸಿಫಿಕ್ ಕೇಸ್​​ಗಳು ಇದ್ದರೆ  ಹೇಳಲಿ, ತನಿಖೆ ಮಾಡಿಸ್ತೀವಿ. PWD, ಆರೋಗ್ಯ ಇಲಾಖೆ ಯಾವುದೇ ಕಮಿಷನ್ ಆರೋಪ ಇದ್ದರು ಸರೀ ಫೆಸಿಫಿಕ್ ಆರೋಪ ಇದ್ತೆ ಅದಕ್ಕೆ ಉತ್ತರನೂ ಕೊಡಬಹುದು, ಪ್ರತಿಕ್ರಿಯೆನೂ ಕೊಡಬಹುದು. ಮತ್ತು ಗುತ್ತಿಗೆದಾರರ ಬಳಿ ಏನೇ ದಾಖಲೆ ಇದ್ರೂ ಕೊಡೋಕೆ ಹೇಳಿ, ಅದನ್ನು ನಾವು ತನಿಖೆ ಮಾಡಿಸ್ತೀವಿ ಎಂದು ವಿಪಕ್ಷಗಳಿಗೆ ಸಿಎಂ ಕಿಡಿಕಾರಿದರು.

RELATED ARTICLES

Related Articles

TRENDING ARTICLES