Monday, December 23, 2024

ಅದ್ದೂರಿಯಾಗಿ ನೆರವೇರಿತು ವಿಶ್ವವಿಖ್ಯಾತ ಬ್ರಹ್ಮರಥೋತ್ಸವ‌

ಹಾಸನ : ಈ ವರ್ಷವೂ ವಿಶ್ವಪ್ರಸಿದ್ಧ ಬೇಲೂರಿನ ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ದೇವರಿಗೆ ಹರಕೆ ಹೊತ್ತವರು ಅಲಂಕೃತ ರಥಕ್ಕೆ ಹಣ್ಣು – ಜವನ ಎಸೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು‌.ಪ್ರತಿವರ್ಷದಂತೆ ಬ್ರಹ್ಮರಥೋತ್ಸವ ಚಾಲನೆಗೂ ಮುನ್ನ ಮುಸ್ಲಿಂರ ಪವಿತ್ರ ಧರ್ಮಗ್ರಂಥ ಖುರಾನ್ ಪಠಣ ಮಾಡಲಾಯ್ತು. ದೊಡ್ಡ ಮೇದೂರಿನ ಖಾದ್ರಿ ವಂಶಸ್ಥರು ಖುರಾನ್ ಪಠಿಸಿದ ನಂತರವೇ ರಥವನ್ನ ಎಳೆಯಲಾಗುತ್ತದೆ.

ಸರ್ವಧರ್ಮಿಯರು ಸಹಬಾಳ್ವೆಯಿಂದ ಬಾಳಬೇಕು ಎಂಬ ಸಂದೇಶ ಸಾರಲು ಹೊಯ್ಸಳ ಅರಸರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದೇ ವೇಳೆ ಅಲಂಕೃತ ರಥದ ಮೇಲೆ ಶುಭ ಸೂಚಕವಾದ ಹದ್ದು ಹಾರಲಿದೆ. ಈ ಸಂದರ್ಭ ಕಣ್ತುಂಬಿಕೊಂಡಂತೆ ಬೇಡಿದ್ದು ಈಡೇರಲಿದೆ ಎಂಬ ನಂಬಿಕೆ ಇರುವುದರಿಂದ ಹೆಚ್ಚಿನ ಭಕ್ತರು ನೆರೆಯುತ್ತಾರೆ. ಮಾಜಿ‌ ಸಚಿವ ಹೆಚ್.ಡಿ. ರೇವಣ್ಣ ಸೇರಿ ಪ್ರಮುಖರು ಚನ್ನಕೇಶವನ ದರ್ಶನ ಪಡೆದ್ರು.

ಜಾತ್ರೆ ಆರಂಭಕ್ಕೆ ಹದಿನೈದು ದಿನ ಬಾಕಿ ಇರುವಾಗಲೇ ವಿಶ್ವಹಿಂದೂ ಪರಿಷದ್ ಮುಖಂಡರು ಹಿಂದೂಯೇತರರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದೆಂದು‌ ಮನವಿ ಕೂಡಾ ಸಲ್ಲಿಸಿದ್ರು. ಆದ್ರೆ ತಾಲೂಕು ಆಡಳಿತ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಪುರಸಭೆಯಿಂದ ವ್ಯಾಪಾರಕ್ಕೆ ಬಿಡ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಧರ್ಮದವರೂ ಜಾತ್ರೆಯ ವ್ಯಾಪಾರದಲ್ಲಿ ಖುಷಿಯಾಗಿ ಭಾಗಿಯಾಗಿದ್ರು.
ಬೇಲೂರಿನ ಚನ್ನಕೇಶವನ ರಥೋತ್ಸವದ ಮತ್ತೊಂದು ವಿಶೇಷವೆಂದ್ರೆ ಬಹುತೇಕ ಕಡೆಗಳಲ್ಲಿ ರಥೋತ್ಸವ ಒಂದೇ ದಿನಕ್ಕೆ ಮುಗಿದ್ರೆ ಇಲ್ಲಿ ಎರಡು ದಿನ ನಡೆಯುತ್ತೆ. ಒಟ್ನಲ್ಲಿ, ಚನ್ನಕೇಶವ ದೇವರ ಮಹಿಮೆಗೆ ಮಾರು ಹೋಗಿ ರಥೋತ್ಸವದಲ್ಲಿ ಭಾಗಿಯಾದ ಭಕ್ತರು ಬಿಸಿಲನ್ನೂ ಲೆಕ್ಕಿಸದೇ ಸರತಿ ಸಾಲಲ್ಲಿ ನಿಂತು ದರ್ಶನ ಪಡೆದ್ರು.

RELATED ARTICLES

Related Articles

TRENDING ARTICLES