ಮಂಗಳೂರು :ಉಡುಪಿಯಲ್ಲಿ ಟೆಂಪಲ್ ರನ್ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಮತ್ತು ನಾಳೆ ಮಂಗಳೂರು ಪ್ರವಾಸ ಕೈಗೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಭಾಗ ಮಟ್ಟದ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿರುವ ಮುಖ್ಯಮಂತ್ರಿಗೆ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಎದುರಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಮಲ ನಾಯಕರು ರಾಜ್ಯದ ಬೇರೆ ಬೇರೆ ಕಡೆ ಮೂರು ತಂಡಗಳ ರೀತಿಯಲ್ಲಿ ಕಾರ್ಯಕರ್ತರು ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ. ಸೋಮವಾರ ಕೃಷ್ಣನಗರಿ ಉಡುಪಿಯಲ್ಲಿ ಪ್ರವಾಸ ಮುಗಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಮಂಗಳೂರು ಪ್ರವಾಸದಲ್ಲಿ ಇದ್ದಾರೆ. ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಬೊಮ್ಮಾಯಿ, ಕರಾವಳಿಯಲ್ಲಿ ಭುಗಿಲೆದ್ದ ಧರ್ಮಸಂಘರ್ಷದ ವಿಚಾರವಾಗಿ ಕೂಡ ಚರ್ಚೆ ನಡೆಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಸಿಎಂ, ಕೆಲವರು ಪ್ರಚೋದನೆ ಮಾಡೋ ಕೆಲಸ ಮಾಡ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಗಮನಿಸಲು ಹೇಳಿದ್ದೇನೆ ಎಂದಿದ್ದಾರೆ.
ಇನ್ನು, ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಕೇಸ್ ರಾಷ್ಟ್ರ ಮಟ್ಟ್ದಲ್ಲಿ ಚರ್ಚೆ ಆಗ್ತಿದೆ.ಈ ಪ್ರಕರಣದಲ್ಲಿ ಸಚಿವ ಕೆ. ಎಸ್. ಈಶ್ವರಪ್ಪ ಹೆಸರು ಕೇಳಿ ಬಂದಿದ್ದು ಮುಂದೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಸೂಚನೆಗಳಿವೆ. ಹೀಗಾಗಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ. ಸಂತೋಷ್ ಪಾಟೀಲ್ ದೇಹ ಉಡುಪಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಈಗಷ್ಟೇ ನಡೆಯುತ್ತಿದೆ. ಎಲ್ಲವನ್ನೂ ತನಿಖೆ ನಡೆಸುತ್ತೇವೆ ಎಂದರು.
ಎರಡು ದಿನಗಳ ಕಾಲ ಕರಾವಳಿಯಲ್ಲಿ ಪ್ರವಾಸದಲ್ಲಿರುವ ಸಿಎಂಗೆ ಸಚಿವ ಬಿ.ಶ್ರೀರಾಮಲು,ಸಚಿವ ಸುನೀಲ್,ಕೋಟಾ ಶ್ರೀನಿವಾಸ ಪೂಜಾರಿ,ಅಂಗಾರ ಸೇರಿ ಕಮಲ ನಾಯಕರು ಸಾಥ್ ನೀಡಿದ್ದಾರೆ.