Friday, January 10, 2025

ಬ್ಲ್ಯಾಕ್ ಕೋಬ್ರಾ ಜೊತೆ ಬ್ಲ್ಯಾಕ್ ಡ್ರ್ಯಾಗನ್ ಪರಿಚಯ

ಸಲಗ ಸೂಪರ್ ಹಿಟ್ ಆಗ್ತಿದ್ದಂತೆ ಟಾಲಿವುಡ್​ನಲ್ಲಿ ಸಖತ್ ಸೌಂಡ್ ಮಾಡ್ತಿರೋ ದುನಿಯಾ ವಿಜಯ್, ರವಿತೇಜಾ ಪ್ರಾಜೆಕ್ಟ್​ನ ರಿಜೆಕ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅದಕ್ಕೊಂದು ವ್ಯಾಲಿಡ್ ರೀಸನ್ ಕೂಡ ಇದೆ. ಬ್ಲ್ಯಾಕ್ ಡ್ರ್ಯಾಗನ್​ನ ಇಂಟ್ರಡ್ಯೂಸ್ ಮಾಡ್ತಿರೋ ಬ್ಲ್ಯಾಕ್ ಕೋಬ್ರಾ ಲೇಟೆಸ್ಟ್ ಖಬರ್ ನಿಮಗಾಗಿ ಕಾಯ್ತಿದೆ ನೋಡ್ಕೊಂಡ್ ಬನ್ನಿ.

ಟೈಟಲ್​ಗೆ ತಕ್ಕನಾಗಿ ಬಹಳ ಜೋರಾಗೇ ಸೌಂಡ್ ಮಾಡಿತು ಸಲಗ. ಅದ್ರ ಫೋರ್ಸ್​ಗೆ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 30 ಪ್ಲಸ್ ಕೋಟಿ ಪೈಸಾ ವಸೂಲ್ ಕೂಡ ಆಯ್ತು. ಪ್ರಪಾತದಲ್ಲಿದ್ದ ವಿಜಯ್ ದುನಿಯಾಗೊಂದು ಲೈಫ್​ಲೈನ್ ಸಿಕ್ಕಿತು. ಅಲ್ಲದೆ, ದುನಿಯಾ ವಿಜಯ್​ರಲ್ಲಿದ್ದ ಡೈರೆಕ್ಟರ್ ಕೂಡ ಎಲ್ರಿಗೂ ಪರಿಚಿತರಾದ್ರು. ಇದೀಗ ವಿಜಯ್​ಗೆ ಎಲ್ಲೆಲ್ಲೂ ಡಿಮ್ಯಾಂಡ್.

ಬಾಲಯ್ಯನಂತಹ ಲಿವಿಂಗ್ ಲೆಜೆಂಡ್ಸ್​ನಿಂದ ಹಿಡಿದು ರವಿತೇಜಾ ಅಂತಹ ಮಾಸ್ ಮಹಾರಾಜವರೆಗೂ ದುನಿಯಾ ವಿಜಯ್ ಅವ್ರೇ ಫೇವರಿಟ್ ಆಗಿಬಿಟ್ಟಿದ್ದಾರೆ. ಸದ್ಯ ಬಾಲಯ್ಯ ನಟನೆಯ NBK107ನಲ್ಲಿ ನಮ್ಮ ಸ್ಯಾಂಡಲ್​ವುಡ್ ಸಲಗ ವಿಲನ್ ಖದರ್ ತೋರುತ್ತಿದ್ದಾರೆ. ಮತ್ತೊಂದ್ಕಡೆ ರವಿತೇಜಾ ಕೂಡ ನಮ್ಮ ಸಿನಿಮಾಗೆ ನೀವೇ ವಿಲನ್ ಆಗಿ ಅಂತ ಪಟ್ಟು ಹಿಡಿದಿದ್ದಾರೆ. ಆಫರ್ ಸಿಕ್ತು ಅಂತ ಅವುಗಳಿಗೆಲ್ಲಾ ಗ್ರೀನ್ ಸಿಗ್ನಲ್ ಕೊಡದ ವಿಜಯ್, ಮತ್ತೆ ನಿರ್ದೇಶನದ ಕಡೆ ಒಲವು ತೋರಿದ್ದಾರೆ.

ಯೆಸ್..  ಸ್ಯಾಂಡಲ್​ವುಡ್​ನಲ್ಲಿ ಭೀಮನ ಯುಗಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ದುನಿಯಾ ವಿಜಯ್. ಇದೇ ಏಪ್ರಿಲ್ 18ರಂದು ಸಲಗ ಸೆಟ್ಟೇರಿದ್ದ ಬಂಡಿ ಮಾಕಾಳಮ್ಮನ ಆಲಯದಲ್ಲೇ ಒನ್ಸ್ ಅಗೈನ್ ಸಿನಿಮಾದ ಮುಹೂರ್ತ ಪೂಜೆ ಫಿಕ್ಸ್ ಆಗಿದೆ.

ಭೀಮನ ಲೋಕೇಶನ್ ಹಂಟ್ ಕೂಡ ಕಂಪ್ಲೀಟ್ ಆಗಿದ್ದು,  ಶ್ರೀಕ್ಷೇತ್ರ ಕೈವಾರ ತಾತಯ್ಯನ ಸನ್ನಿಧಿಯಲ್ಲಿ ಸ್ಕ್ರಿಫ್ಟ್ ಪೂಜೆ ಕೂಡ ನೆರವೇರಿಸಿದೆ ಚಿತ್ರತಂಡ. ಆಟೋದಲ್ಲೇ ಲೋಕೇಷನ್ ಹುಡುಕಿದ ನಿರ್ದೇಶಕ ವಿಜಯಕುಮಾರ್​ಗೆ ಸ್ಟಾರ್ ಸಂಭಾಷಣೆಕಾರ ಮಾಸ್ತಿ ಸಾಥ್ ನೀಡಿದ್ದಾರೆ.

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಎದುರು ತೊಡೆ ತಟ್ಟಲು ಬ್ಲ್ಸಾಕ್ ಡ್ರ್ಯಾಗನ್ ಎಂಟ್ರಿ ಕೊಡಲಿದ್ದಾರೆ. ಹೌದು.. ಭೀಮ ಚಿತ್ರದ ಮೂಲಕ‌ ಪ್ರಚಂಡ ಖಳನಾಯಕನನ್ನ  ಪರಿಚಯಿಸುತ್ತಿರುವ ವಿಜಯ್ ಕುಮಾರ್,  ಕಣ್ಣು ಕುಕ್ಕುವಂತಹ ಬ್ಲ್ಯಾಕ್ ಡ್ರ್ಯಾಗನ್ ಲುಕ್​ನ ಲಾಂಚ್​ ಮಾಡಿದ್ದಾರೆ.

ಸ್ಯಾಂಡಲ್​ವುಡ್ ಸಲಗ ವಿಜಯ್ ಕುಮಾರ್​ಗೆ ಈ ಬಾರಿ ಬೈರಾಗಿ ಪ್ರೊಡ್ಯೂಸರ್ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಸಾಥ್ ನೀಡ್ತಿದ್ದು, ಕೋಟ್ಯಂತರ ರೂಪಾಯಿ ಬಂಡವಾಳ ಹೂಡ್ತಿದ್ದಾರೆ. ವಿಶೇಷ ಅಂದ್ರೆ ಹೊಸ ಪ್ರತಿಭೆಗಳನ್ನೇ ಇಟ್ಟುಕೊಂಡು ಸಲಗ ಸಖತ್ ಸೌಂಡ್ ಮಾಡಿದ್ದ ವಿಜಯ್, ಇದೀಗ ಮತ್ತದೇ ತಂತ್ರಜ್ಞರೊಂದಿಗೆ ಬ್ಯಾಂಗ್ ಮಾಡಲು ಮುಂದಾಗ್ತಿದ್ದಾರೆ.

ಮಾಸ್ತಿ ಸಂಭಾಷಣೆ, ಚರಣ್ ರಾಜ್ ಮ್ಯೂಸಿಕ್, ಶಿವಸೇನ ಸಿನಿಮಾಟೋಗ್ರಫಿ ಚಿತ್ರಕ್ಕಿರಲಿದೆ. ಒಟ್ಟಾರೆ ಅಂಡರ್​ವರ್ಲ್ಡ್​ನ ಮತ್ತೊಂದು ಮುಖ ತೋರಿಸಲು ಸಜ್ಜಾಗಿರೋ ಸಲಗ ವಿಜಯ್, ಈ ಬಾರಿ ಕೂಡ ಮತ್ತಿನ್ನೇನನ್ನೋ ಹೇಳಲು ಹೊರಟಿದ್ದಾರೆ. ಈ ಬಾರಿ ಕೂಡ ಕಲ್ಟ್ ಎಲಿಮೆಂಟ್ಸ್​ನ ಟಚ್ ಮಾಡಲಿದ್ದು, ದುನಿಯಾ ವಿಜಯ್ ಪಾತ್ರ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಕಾಡ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES