ಬೆಂಗಳೂರು : ಎಲ್ಲಾ ಸಮಾಜಗಳು ಹೊಂದಾಣಿಕೆಯಿಂದ, ಪ್ರೀತಿಯಿಂದ, ಶಾಂತಿಯಿಂದ ಒಂದಾಗೋದಕ್ಕೆ ಪ್ರೋತ್ಸಾಹ ಮಾಡಬೇಕು. ಆದರೆ ಇಲ್ಲಿ ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದು ಅದನ್ನು ಜೀವಂತವಾಗಿ ಇಡೋ ಅಂತಾ ಕೆಲಸವಾಗುತ್ತಿದೆ ಎಂದು ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಧರ್ಮದವರು ಶಾಂತಿಯಿಂದ ಒಂದಾಗೋದಕ್ಕೆ ಪ್ರೋತ್ಸಾಹ ಮಾಡಬೇಕು. ಅದು ಬಿಟ್ಟು ಶಾಂತಿ ಸುವ್ಯವಸ್ಥೆ ಕೆಡೆಸುವ ಕೆಲಸ ಮಾಡಬಾರದು. ಅದರಿಂದ ನಮಗೇ ಏನೋರಾಜಕೀಯವಾಗಿ ಲಾಭ ಬರುತ್ತೆ ಅಂತಾ ಯೋಚನೆ ಮಾಡಿ ಮಾತಾಡೋದನ್ನು ನಾನು ಖಂಡಿಸುತ್ತೇನೆ. ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದು ಅದನ್ನು ಜೀವಂತವಾಗಿ ಇಡೋದು ತಪ್ಪಾಗುತ್ತದೆ ಎಂದು ಕಿಡಿಕಾರಿದರು.
ಅದುವಲ್ಲದೇ, ವ್ಯಾಪಾರ ನಿಷೇಧ ಅಂತಾರೆ, ಮತ್ತೊಂದು ಹಲಾಲ್ ಅಂತಾರೆ. ಇದರಿಂದ ಬಡವರ ಜೀವನಕ್ಕೆ ತೊಂದರೆ ಆಗ್ತಿದೆ. ಇದರಲ್ಲಿ ಸರ್ಕಾರ ಮೌನವಾಗಿದೆ ಎಂಬುದನ್ನು ನಾನು ಒಪ್ಪಲ್ಲ. ಆದರೆ ಇದನ್ನು ಬೆಳೆಸುವ ರೀತಿ ಯಾರು ನಡೆದುಕೊಳ್ಳಬಾರದು ಎಂದರು.
ಇನ್ನು ಸುಮಲತಾ ಅಂಬರೀಶ್ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ನನ್ನ ಜಿಲ್ಲೆಗೆ ಪಕ್ಷೇತರ ಅಭ್ಯರ್ಥಿ. ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ರಿಂದ ಈ ಬಗ್ಗೆ ಚರ್ಚೆ ಆಗಿದೆ. ನನ್ನ ಜಿಲ್ಲೆಗೆ ಏನೇನು ಅಭಿವೃದ್ಧಿ ತರಬಹುದು ಎಂಬುದು ಅಷ್ಟೇ ನನ್ನ ಯೋಚನೆಯಾಗಿದೆ. ಅದೇ ರೀತಿ ಜಿಲ್ಲೆಯ ಕೆಲಸಗಳ ಬಗ್ಗೆ ಸಿಎಂ ಅವರ ಜೊತೆ ಚರ್ಚೆ ಮಾಡಿದ್ದೇನೆ ಮಾಹಿತಿ ನೀಡಿದರು.
ಯಾವುದೋ ಒಂದು ಪಾರ್ಟಿಗೆ ಸೇರಿಕೊಳ್ಳಲು ಟೆಕ್ನಿಕಲ್ ಪ್ರಾಬ್ಲಮ್ ಇದೆ. ಅದು ಬಿಟ್ಟರೆ ನನ್ನ ಪಕ್ಷೇತರರಾಗಿ ಸ್ಪರ್ಧೆ ಮಾಡುವಂತೆ ಜನರು ಕೇಳಿದ್ದಾರೆ. ಅದರಂತೆ ನಾನು ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ಇವಾಗ ಯಾವುದಾದರೂ ಪಾರ್ಟಿಗೆ ಹೋಗಬೇಕು ಅಂದರೆ, ಅದನ್ನು ಮಂಡ್ಯ ಜನರ ಕೇಳಿ ತೀರ್ಮಾನ ಮಾಡಬೇಕು ಅದು ಬಿಟ್ಟು ನನ್ನ ನಿರ್ಧಾರವೇ ಒಂದೇ ಆಗಿರೋದಿಲ್ಲ ಎಂದು ಹೇಳಿದರು.
ಅಭಿಷೇಕ್ ಅಂಬರೀಶ್ ಸ್ಪರ್ಧೆ ವಿಚಾರ ಹಿನ್ನಲೆ ಅಭಿಷೇಕ್ ಸ್ಪರ್ಧೆ ಬಗ್ಗೆ ಜನರ ಒತ್ತಡ ಇದೆ. ಅವನು ಹೋದ ಕಡೆಯಲ್ಲಾ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡ್ತಿದ್ದಾರೆ. ಆದರೆ ಅದು ಅಭಿಷೇಕ್ಗೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ಅಭಿಷೇಕ್ ಸ್ಪರ್ಧೆ ಬಗ್ಗೆ ಸುಮಲತಾ ಅವರು ಪರೋಕ್ಷವಾಗಿ ಸುಳಿವು ನೀಡಿದರು.