Monday, November 25, 2024

ಚಂದ್ರು ಹಂತಕನಿಗೆ ಕೊಲೆ ಉದ್ದೇಶವೇ ಇರಲಿಲ್ಲವಂತೆ

ರಾಜ್ಯದಲ್ಲಿ ಧರ್ಮ ದಂಗಲ್‌ ಜೋರಾಗ್ತಿದೆ.. ಈ ಮಧ್ಯೆ ನಡೆದ ಚಂದ್ರು ಹತ್ಯೆ ಕೇಸ್‌ ವಿಚಾರವಾಗಿ ರಾಜಕೀಯ ಹೈಡ್ರಾಮಾ ನಡೀತಿದೆ.. ರಾಜಕೀಯ ನಾಯಕರ ಮಾತುಗಳನ್ನು ನಂಬ ಬೇಕೋ..? ಬೇಡವೋ..? ಗೊತ್ತಾಗ್ತಿಲ್ಲ.. ಈ ಮಧ್ಯೆ, ಕಾಂಗ್ರೆಸ್‌ ಲೀಡರ್‌ ಜಮೀರ್‌ ಅಹ್ಮದ್‌ ಖಾನ್‌ ಕೊಟ್ಟಿರೋ ಹೇಳಿಕೆ ನೋಡಿದ್ರೆ, ನಗಬೇಕೋ ..? ಅಳಬೇಕೋ ಗೊತ್ತಾಗದಂತೆ ಆಗಿದೆ.. ಹಾಗೆ ಮಾತಾಡಿದ್ದಾರೆ ಈ ಸಾಹೇಬ್ರು.

ಕೇಳಿದ್ರಲ್ಲಾ..ಚಂದ್ರು ಕೊಂದವನಿಗೆ ಕೊಲೆ ಮಾಡುವ ಇಂಟೆನ್ಷನ್ ಇರಲಿಲ್ಲವಂತೆ.. ಚುಚ್ಚಿದಾಗ ನರ ಕಟ್ಟಾಗಿ ಸತ್ತು ಹೋದ್ನಂತೆ.. ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್‌ ಭಾಷಣದ ಪರಿ ಇದು. ಆದ್ರೂ, ನಂದು ಒಂದು ಇರಲಿ ಅಂತ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ಇತ್ತ, ಪೋಲಿಸ್ ಇಲಾಖೆ ಸತ್ಯಾಂಶ ಏನಿದೆ ಅದನ್ನು ಹೊರಗಡೆ ತರುತ್ತದೆ. ಕಠಿಣ ಕೇಸ್‌ಗಳನ್ನು ಹಾಕಿ ಅವರ ಮೇಲೆ ಪ್ರಕರಣ ದಾಖಲು ಮಾಡಲು ಅವಕಾಶ ಕೊಡಬೇಕು..ಕೊಲೆ ವಿಚಾರದಲ್ಲೂ ಗೃಹ ಸಚಿವರು ದ್ವಂದ್ವ ಹೇಳಿಕೆ ಕೋಡ್ತಾರೆ ಅಂತ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಮತ್ತೆ ಆಕ್ರೋಶ ಹೊರ ಹಾಕಿದ್ದಾರೆ.

ಹಿಂದೂ ಸಮಾಜ ವಿಶಾಲವಾಗಿದೆ.. ಚಂದ್ರುಗೆ ಭಾಷೆ ಬರಲ್ಲ ಅಂತ ಕೊಂದ್ರಲ್ಲ.. ಇದು ಸರಿಯಲ್ಲ.. ಚಂದ್ರು ಕ್ರೈಸ್ತ ಮತಕ್ಕೆ ಕನ್ವರ್ಟ್‌ ಆಗಿದ್ದಾರೆ.. ಸತ್ಯವೆಂದರೇ ಅವನು ನಮ್ಮವನು ಅಂತ ಸಂತೋಷ್‌ ಗುರೂಜಿ ಹೇಳಿದ್ದಾರೆ.
ಇನ್ನು, ಗೌರಿಪಾಳ್ಯದ ಚಂದ್ರು ಕೊಲೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.. ನಿನ್ನೆ ಎಂಎಲ್ ಸಿ ರವಿಕುಮಾರ್ ಕಮಿಷನರ್ ಹೇಳಿದ್ದು ಸುಳ್ಳು ಎನ್ನುವ ಮೂಲಕ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದ್ದಾರೆ. ಇದೀಗ ರವಿಕುಮಾರ್ ಹೇಳಿಕೆಯನ್ನ ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಚಂದ್ರು ಕೊಲೆ ಆಗಿದೆ.. ಆದ್ರೆ, ಅದ ಹಿಂದಿರುವ ಸತ್ಯ ತನಿಖೆಯಿಂದ ಬರಬೇಕಿದೆ ಆದ್ರೆ, ಈ ರಾಜಕೀಯ ನಾಯಕರ ಮಾತುಗಳು ಕೇಳ್ತಿದ್ರೆ, ಗೊಂದಲ ಉಂಟಾಗ್ತಿದೆ.. ಯಾವುದ ಸತ್ಯ..? ಯಾವುದು ಸುಳ್ಳು ಅನ್ನೋದು ಜನರಿಗೆ ಗೊತ್ತಾಗದ ರೀತಿ ಆಗ್ತಿದೆ.. ಇನ್ನಾದ್ರೂ, ಅಮಾಯಕ ಹತ್ಯೆಯ ವಿಚಾರದಲ್ಲಿ ಸರ್ಕಾರವಾಗ್ಲಿ. ವಿಪಕ್ಷಗಳಾದ್ರೂ ಅರಿತು ಮಾತಾಡಿದ್ರೆ ಜನರಿಗೂ ಒಂದಿಷ್ಟು ಸತ್ಯದ ಅರಿವಾಗಬಹುದು.

RELATED ARTICLES

Related Articles

TRENDING ARTICLES