Wednesday, January 22, 2025

ಗೃಹ ಸಚಿವರು ಎಣ್ಣೆ ಕುಡಿಯಲ್ಲ, ಗಾಂಜಾ ಹೊಡಿತಾರೆ – ಬಿ.ಕೆ ಹರಿಪ್ರಸಾದ್​​ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಅರಬೆಂದ ಗೃಹ ಸಚಿವ ಇದ್ದಾನೆ ಎಂದು ಆರಗ ಜ್ಞಾನೇಂದ್ರ ವಿರುದ್ಧ ಪರಿಷತ್​ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್​ ಅವರು ಹರಿಹಾಯ್ದರು.

ಇಂದು ಫ್ರೀಡಂಪಾರ್ಕ್​ನಲ್ಲಿ ಬೆಲೆ ಏರಿಕೆ ವಿರೋಧಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್​​ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಅವನು (ಗೃಹ ಸಚಿವ ಆರಗ ಜ್ಞಾನೇಂದ್ರ) ಯಾವಾಗಲೂ ನಶೆಯಲ್ಲಿ ಇರೋ ತರ ಮಾತನಾಡುತ್ತಾನೆ. ಎಣ್ಣೆ ಕುಡಿಯಲ್ಲ ಅನಿಸುತ್ತದೆ. ಆದರೆ, ಗಾಂಜಾ ಹೊಡಿತಾರೆ ಅನಿಸುತ್ತದೆ. ಹೀಗಾಗಿ ಏನ್​ ಮಾತನಾಡ್ತಾನೆ, ಅವನಿಗೆ ತಿಳಿಯೋದಿಲ್ಲ ಎಂದು ಗುಡುಗಿದರು.

ಇವತ್ತು ದೇಶದಲ್ಲಿ ಬೆಲೆ ಏರಿಕೆ ಆಗುತ್ತಿದೆ ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್​​ ಶಾ ಮಾತಾನಾಡಿಲ್ಲ. ಆದರೆ, ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟ್ಟಿದ್ದಾರೆ. ನಾವು ಅದಕ್ಕೆ ಬಗ್ಗಬಾರದು ನಮ್ಮ ಮಾತೃ ಭಾಷೆ ಕನ್ನಡ. ಗಡಿಪಾರದವರ ಮಾತು‌ ಕೇಳುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಅಲ್ಲದೇ, ಹಿಂದೂ ಬೇರೆ, ಹಿಂದುತ್ವ ಬೇರೆ. ಹಿಂದುತ್ವ ಅಂದರೆ ಹಿಂಸೆ ಮತ್ತು ದೌರ್ಜನ್ಯ ಅನ್ನೋದನ್ನ ತಿಳಿದುಕೊಳ್ಳಿ ಮತ್ತು ಸ್ವಾಮಿವಿವೇಕಾನಂದ, ಇಂದಿರಾಗಾಂಧಿ ಇವರೆಲ್ಲಾ ಹಿಂದೂ ಆಗಿದ್ದರು. ಸಹಿಷ್ಣುತೆಯೇ ಹಿಂದೂ ಧರ್ಮ. ಆದರೆ, ಗೋವಾಲ್ಕರ್ ಆಗಲಿ, ಸಾವರ್ಕಾರ್ ಆಗಲಿ ಹಿಂದೂ ಧರ್ಮವನ್ನು ಅನುಸರಿಸಿಲ್ಲ ಎಂದು ಬಿಜೆಪಿ ವಿರುದ್ಧ ಬಿ.ಕೆ ಹರಿಪ್ರಸಾದ್​​​ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES