Wednesday, November 6, 2024

ಯಾರಾಗ್ತಾರೆ ಸಂಪುಟದಿಂದ ಔಟ್..?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಪುಟ ಸರ್ಜರಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸ ಕ್ಯಾಬಿನೆಟ್ ಕಗ್ಗಂಟಿಗೆ ಕೈ ಹಾಕಿರುವ ಸಿಎಂ ವರಿಷ್ಠರ ಮುಂದೆ ಪ್ರಸ್ತಾವನೆಯನ್ನ ಸಲ್ಲಿಸಿದ್ದಾರೆ. ಹಾಗಾದ್ರೆ ಖಾಲಿ ಸ್ಥಾನಗಳ ಭರ್ತಿಯ ಬಗ್ಗೆ ಹೈಕಮಾಂಡ್ ನಿರ್ಧಾರವೇನು..? ಹೊಸ ಸಂಪುಟ ಸರ್ಜರಿಯ ಬಗ್ಗೆ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಏನು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದೆ.. ಹೀಗಾಗಿ ಕಮಲ ಪಾಳಯದಲ್ಲಿ ಭರ್ಜರಿ ತಯಾರಿ ನಡೆದಿದೆ.. ಇದ್ರ ಜೊತೆಗೆ ಸಂಪುಟ ಸರ್ಜರಿಗೆ ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ ಬಾಕಿ ಉಳಿದಿರುವ ಸಚಿವ ಸ್ಥಾನ ಭರ್ತಿ ಹಾಗೂ ಸಂಪುಟ ಪುನಾರಚನೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ಹೈಕಮಾಂಡ್ ನಾಯಕರು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಏಪ್ರಿಲ್ 16 ಹಾಗೂ 17 ರಂದು ನಡೆಯುವ ಕೋರ್ ಕಮಿಟಿ ಸಭೆ ನಂತ್ರ ನೋಡೋಣ ಎಂದಿದ್ದು ಮಂತ್ರಿ ಪಟ್ಟಕ್ಕಾಗಿ ಕಾದುಕುಳಿತ್ತಿದ್ದ ಶಾಸಕರಿಗೆ ಮತ್ತೆ ನಿರಾಸೆ ಉಂಟು ಮಾಡಿದಂತಾಗಿದೆ.

ಸದ್ಯ ದೆಹಲಿಯಿಂದ ವಾಪಸ್‌ ಆಗಿರುವ ಸಿಎಂ ಬೊಮ್ಮಾಯಿ ಮುಂದೆ ಸಾಕಷ್ಟು ಅಡೆತಡೆಗಳಿವೆ ಅನ್ನೋ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆಗ್ತಿದೆ. ಇನ್ನೇನು ಎಲೆಕ್ಷನ್ ತಯಾರಿಯಲ್ಲಿರುವಾಗ ಸಚಿವ ಸಂಪುಟ ವಿಸ್ತರಣೆ ಆದ್ರೆ, ಸ್ಥಾನ ಸಿಗದವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಇದ್ರ ಜೊತೆಗೆ ಪಕ್ಷ ಬದಲಾವಣೆ ಆದ್ರೆ ಏನ್ ಮಾಡೋದು ಅನ್ನೋದು ಕೂಡ ಸಿಎಂಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಸದ್ಯ ಕ್ಯಾಬಿನೆಟ್ ವಿಸ್ತರಣೆ ಯಾವಾಗ ಮಾಡೊದು ಯಾರನ್ನ ಕೈಬಿಡಬೇಕು ಯಾರನ್ನು ತೆಗೆದುಕೊಳ್ಳಬೇಕು ಅನ್ನೋದು ಹೈಕಮಾಂಡ್ ಅಂಗಳದಲ್ಲಿದೆ. ಏಪ್ರಿಲ್ 16-17 ರಂದು ಹೊಸಪೇಟೆಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಲ್ಲಿದ್ದು, ಆ ನಂತ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು ಆ ಬಳಿಕ ಚರ್ಚೆ ಮಾಡೋಣ ಎಂದು ಜೆ.ಪಿ.ನಡ್ಡಾ ಸಿಎಂ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದಾರೆ.

ಈ ಬಾರಿ ಸಂಪುಟ ದೊಡ್ಡ ಮಟ್ಟದಲ್ಲಿ ಪುನಾರಚನೆಯಾಗುತ್ತದೆ ಎಂಬ ಸುದ್ದಿ ಜೋರಾಗಿದೆ. ಹೀಗಾಗಿ, ಕೆಲ ಹಿರಿಯ ಸಚಿವರಲ್ಲಿ ಆತಂಕ ಮನೆ ಮಾಡಿದೆ. ತಮ್ಮ ಮಂತ್ರಿ ಕುರ್ಚಿಯನ್ನ ಭದ್ರಪಡಿಸಿಕೊಳ್ಳಲು ಈಗಾಗಲೇ ಕೆಲ ಆಕಾಂಕ್ಷಿಗಳು ಸೇರಿದಂತೆ ಹಿರಿಯ ನಾಯಕರು, ಸಚಿವರು ದೆಹಲಿಯನ್ನು ತಲುಪಿದ್ದಾರೆ. ಮಂತ್ರಿಗಿರಿ ಉಳಿಸಿಕೊಳ್ಳುವ ಕಸರತ್ತು ಕೆಲವರದ್ದಾದ್ರೆ, ಈ ಬಾರಿ ಸಚಿವ ಸ್ಥಾನ ಪಡೆಯಲೇಬೇಕು ಅಂತ ಡಿಸೈಡ್ ಮಾಡಿ ಹಿರಿಯ ಕೇಂದ್ರ ನಾಯಕರ ಜೊತೆ ಮೀಟಿಂಗ್ ಮಾಡ್ತಿದ್ದಾರೆ

ಕೆಲವು ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂದು ಈಗಾಗ್ಲೇ ಹೈಕಮಾಂಡ್ ನಾಯಕರು ಡಿಸೈಡ್ ಮಾಡಿದೆ. ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್, ಉಮೇಶ್ ಕತ್ತಿ, ಪ್ರಭು ಚೌಹಾಣ್, ಆರ್.ಅಶೋಕ್, ಗೋವಿಂದ ಕಾರಜೋಳ ಅವರನ್ನು ಕೈಬಿಡುವ ಸಾಧ್ಯತೆ ಎಂದು ಬಿಜೆಪಿ ವಲಯದಲ್ಲೇ ಭಾರಿ ಚರ್ಚೆಯಾಗ್ತಿದೆ.

ಪಕ್ಷದ ನಾಯಕರ ವಿರುದ್ದ ಅಸಮಧಾನ ವ್ಯಕ್ತಪಡಿಸಿ, ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಸ್ಥಾನಕ್ಕೆ ಹೆಸರು ಕೇಳಿ ಬಂದಿದ್ದ ಅರವಿಂದ ಬೆಲ್ಲದ್, ಮಾಜಿ ಸಿಎಂ ಪುತ್ರ ವಿಜಯೇಂದ್ರ, ಪೂರ್ಣಿಮಾ ಶ್ರೀನಿವಾಸ್, ರಾಮದಾಸ್, ರಾಜೀವ್ ಹೆಸರು ಕೇಳಿಬರ್ತಿದೆ. ಮತ್ತೆ ರಮೇಶ್ ಜಾರಕಿಹೊಳಿ, ಸಿ.ಪಿ ಯೋಗೇಶ್ವರ್ ಸಚಿವ ಸಂಪುಟದಲ್ಲಿ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ

ಒಟ್ನಲ್ಲಿ ಒಂದಲ್ಲ ಒಂದು ಸಂಕಷ್ಟಕ್ಕೆ ಗುರಿಯಾಗಿರುವ ಸಿಎಂಗೆ ಚುನಾವಣೆ, ಕ್ಯಾಬಿನೆಟ್ ದೊಡ್ಡ ತಲೆ ನೋವಾಗಿದೆ. ಇತ್ತ ಕೋರ್ ಕಮಿಟಿ ಸಭೆಯ ನಂತ್ರ ಸಂಪುಟ ಸರ್ಜರಿಗೆ ಮುಂದಾಗಿರುವ ಹೈಕಮಾಂಡ್ ನಾಯಕರ ಪಟ್ಟಿಯಲ್ಲಿ ಮಂತ್ರಿ ಭಾಗ್ಯ ಯಾರಿಗೆ ಒಲಿದು ಬರಲಿದೆ..? ಯಾರನ್ನು ಕೈ ಬಿಡಲಿದೆ ಅಂತ ಕಾದುನೋಡ್ಬೇಕಾಗಿದೆ..

RELATED ARTICLES

Related Articles

TRENDING ARTICLES