Thursday, May 15, 2025

ಸಿದ್ದು ಸಿಎಂ ಆಗಿದ್ರು ಅನ್ನೋಕೆ ನಾಚಿಕೆ: ಸಿ ಟಿ ರವಿ

ಬೆಂಗಳೂರು : ಚಂದ್ರು ಕೊಲೆ ಸಂಬಂಧ ಅವರ ತಾಯಿ ಹೇಳಿಕೆ ಕೇಳಿದ್ದೇನೆ. ಬೈಕ್ ಅಪಘಾತದಿಂದ ಯಾರಿಗೂ ಪೆಟ್ಟಾಗಿಲ್ಲ, ಯಾರಿಗೂ ಡ್ಯಾಮೇಜ್ ಆಗಿಲ್ಲ. ಭಾಷೆಯೂ ಒಂದು ನೆಪವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದರಲ್ಲಿ ಕೋಮು ಕದಡುವ ವಿಚಾರ ಎಲ್ಲಿದೆ? ಕೊಲೆ ಮಾಡುವ ಮಾನಸಿಕ ಸ್ಥಿತಿ ಯಾಕಿದೆ? ಸತ್ಯ ಹೇಳುವುದರಿಂದ ಯಾವ ಕೋಮು ಕದಡಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹೇಳಿಕೆ ನೋಡಿದರೆ ಅವರು ನಮ್ಮ ರಾಜ್ಯದ ಸಿಎಂ ಆಗಿದ್ದರು ಎಂದು ಹೇಳೋಕೆ ನಾಚಿಕೆ ಆಗುತ್ತದೆ. ಸಿದ್ದರಾಮಯ್ಯ ಕಾಲ ಕಾಲಕ್ಕೆ ಸತ್ಯ ಹೇಳುವ ಟೀಮ್ ಅನ್ನು ಇಟ್ಟುಕೊಳ್ಳಬೇಕು ಎಂದು ಸಿ ಟಿ ರವಿ ವಿರೋಧ ಪಕ್ಷದ ನಾಯಕ ಸಿದ್ದು ವಿರುದ್ಧ ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES