Monday, December 23, 2024

ಗೌಡ್ರು ಮಕ್ಕಳು ಇನ್ನೂ ಬದುಕಿದ್ದಾರೆ : ಸಿಎಂ ಇಬ್ರಾಹಿಂ

ಮೈಸೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಕ್ಕಳು ಮೊಮ್ಮಕ್ಕಳು ಇನ್ನೂ ಬದುಕಿದ್ದಾರೆ. ಅವರಿಂದ ರಾಜ್ಯದಲ್ಲಿ ಸ್ವಸ್ಥ ಸಮಾಜ ಕಟ್ಟುತ್ತೇವೆ ಎಂದು ಮಾಜಿ ಎಂಎಲ್​ಸಿ ಸಿಎಂ ಇಬ್ರಾಹಿಂ ಮೈಸೂರಿನಲ್ಲಿ ಹೇಳಿದರು.

ಮೈಸೂರಿನ ಕಲಾಮಂದಿರದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಲು ಇವರು ವಿರೋಧಿಸುತ್ತಾರೆ. ಮೈಸೂರಿನ ಮಹಾರಾಜರು ಹೆಣ್ಣು ಮಕ್ಕಳು ಸ್ಕೂಲ್ ಗೆ ಹೋಗುವ ಗಾಡಿಗೆ ಪರದೆ ಹಾಕಿಸುತ್ತಿದ್ದರು. ಇದನ್ನು ಇವರು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹುಚ್ಚು ಮುಂಡೇವು ಅಧಿಕಾರಕ್ಕೆ ಬಂದು ನಮಗೆ ಹೆದರಿಸುತ್ತಿವೆ. ಗೌಡ್ರ ಮಕ್ಕಳು ಇನ್ನೂ ಬದುಕಿದ್ದಾರೆ. ಸ್ವಸ್ಥ ಸಮಾಜ ಕಟ್ಟುತ್ತೇವೆ. 1995 ರಲ್ಲಿ ಜನತಾ ಸರಕಾರ ತದ್ದಂತೆ 2023 ರಲ್ಲೂ ಸರ್ಕಾರ ತರೋಣ ಎಂದು ಹೇಳಿದರು.

RELATED ARTICLES

Related Articles

TRENDING ARTICLES