ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೆಂದ್ರ, ಮತ್ತು ಸಿ ಟಿ ರವಿ ರಾಜ್ಯದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಿದ್ದಾರೆ, ಇವರಿಬ್ಬರು ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಯನ್ನು ಸಿಎಂ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಬೇಕು ಎಂದು ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೃಹ ಸಚಿವರು ಮಾಡೋದೆಲ್ಲ ಮಾಡಿ ಸಂಜೆ ಅಪಾಲಜಿ ಕೊಡೋದು ಸರಿಯಲ್ಲ. ಮೊದಲು ಕಾಂಗ್ರೆಸ್ನವರು ರೇಪ್ ಮಾಡಿದರು ಅಂದರು. 7 ಗಂಟೆ ಮೇಲೆ ಹೆಣ್ಣುಮಕ್ಕಳು ಹೇಗೆ ಓಡಾಡ್ತಾರೆ ಅಂದ್ರು. ಇಂತಹ ಹೇಳಿಕೆಗಳನ್ನ ಪದೇ ಪದೇ ಕೊಟ್ಟು ಜನರನ್ನ ಪ್ರಚೋದಿಸುವ ಕೆಲಸ ಮಾಡ್ತಿದ್ದಾರೆ. ಪೊಲೀಸರು ಗೃಹ ಸಚಿವರ ಮೇಲೆ ಕ್ರಮ ಜರುಗಿಸಬೇಕು. ಹೀಗೆ ಒಂದು ಉತ್ತಮ ಸ್ಥಾನದಲ್ಲಿದ್ದು ಹೋಂ ಮಿನಿಸ್ಟರ್ ಈ ರೀತಿ ಹೇಳಿದ್ರೆ ಹೇಗೆ ? ಇಂತವರನ್ನ ಯಾಕೆ ಸಂಪುಟದಲ್ಲಿ ಇಟ್ಟುಕೊಳ್ತೀರಾ ಎಂದು ಸಿಎಂ ಬೊಮ್ಮಾಯಿಗೆ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಇನ್ನು ಮಂಡ್ಯ ಹುಡುಗಿ ಬಗ್ಗೆ ಯಾವುದೋ ಸಂಘಟನೆ ಹೇಳಿಕೆ ನೀಡಿದೆ ನಾನು ಅವರ ಹೇಳಿಕೆ ಖಂಡಿಸುತ್ತೇನೆ. ಯಾರು ಕೂಡ ನಮ್ಮ ದೇಶದ ಆಂತರಿಕ ವಿಚಾರವಾಗಿ ಮಾತನಾಡಬಾರದು. ನಮ್ಮ ದೇಶದಲ್ಲಿ ಸಂವಿಧಾನ ಇದೆ. ಅದನ್ನು ಬೇರೆ ಯಾರ ಕಡೆಯಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ಆ ಸಂಘಟನೆ ಮೂಗು ತೂರಿಸುವ ಕೆಲಸ ಮಾಡಬಾರದು. ಇದು ಕಾಂಗ್ರೆಸ್ ಪಕ್ಷದ ನಿಲುವು ಎಂದು ಡಿಕೆಶಿವಕುಮಾರ್ ಹೇಳಿದರು.