ಹುಬ್ಬಳ್ಳಿ : ಬಿಜೆಪಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸವನ್ನು ಬಹಳ ಚೆನ್ನಾಗಿಯೆ ಮಾಡುತ್ತಿದ್ದಾರೆ, ಹಾಗಾಗಿಯೇ ಧರ್ಮದ ಹೆಸರಿನ ಪದ್ದತಿಯನ್ನು ಎಳೆದು ಜನರ ದಾರಿ ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಮುಸ್ಲಿಂರ ಆಜಾನ್ ಮತ್ತು ಮಾವಿನ ಹಣ್ಣಿನ ವಿಚಾರ ಹಿನ್ನಲೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸವನ್ನು
ಮಾಡುತ್ತಿದ್ದಾರೆ ಚುನಾವಣೆ ಹತ್ತಿರ ಬರುತ್ತಿದೆ ಜನರ ಮುಂದೆ ಹೋಗೋಕೆ ಅವರ ಬಳಿ ಸಾಧನೆ ಇಲ್ಲ ಅದನ್ನ ಮರೆಮಾಚೋಕೆ ಧಾರ್ಮಿಕ ವಿಚಾರಕ್ಕೆ ಮುಂದಾಗಿದ್ದಾರೆ. ಈಗ ಮಸೀದಿಯಲ್ಲಿ ಮೈಕ್ ಬಳಸೋದು ವಿಷಯ ಈಗ ಬಂದಿದೆ.
ಇನ್ನು ಮಾವಿನ ಹಣ್ಣು ಹಿಂದೂ ಮುಸ್ಲಿಂ ಬಹಳ ವರ್ಷದಿಂದ ವ್ಯಾಪಾರ ಮಾಡ್ತಿದ್ದಾರೆ. ನಮ್ಮೂರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣು ಕೊಡುತ್ತಿದ್ದೀವಿ . ಮತಗಳ ಕೃಢೀಕರಣ ಮಾಡಬೇಕು ಅಂತ ಹೀಗೆ ಧರ್ಮದ ಹೆಸರಿನ ಮೇಲೆ ಪದ್ದತಿಯನ್ನು ತಂದು ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ಎಲ್ಲಾ ಹುನ್ನಾರ ಜನರಿಗೆ ಗೊತ್ತಾಗುತ್ತೆ, ಜಾತ್ರೆಗಳಲ್ಲಿ ಸಹ ಎಲ್ಲರೂ ವ್ಯಾಪಾರ ಮಾಡುತ್ತಿದ್ದರು ಎಂದರು.
ಹಲಾಲ್ ಮುಸ್ಲಿಂರು ಕಟ್ ಮಾಡಿದ್ದೆ ನಾವು ತಿನ್ನೋದು, ತಿನ್ನದೆ ಇರುವವರು ಹೀಗೆ ಮಾಡುತ್ತಿದ್ದಾರೆ. ಅವರ ನಂಬಿಕೆ ಹಲಾಲ್ ಮಾಡೋದು ಕುರಿಗಳಲ್ಲಿ ರಕ್ತ ಇರಬಾರದು ಅನ್ನೋದಕ್ಕೆ. ನಾವು ಕುರಿ ಕಡಿದರೆ ಅವರನ್ನೇ ಕರೆಸಿ ಕ್ಲಿನ್ ಮಾಡಿಸುತ್ತಿದ್ದೀವಿ ಎಂದು ಹೇಳಿದರು.
ಅದುವಲ್ಲದೇ ಈಗ ಒಂದಾದ ಮೇಲೆ ಒಂದರಂತೆ ಬೆಲೆ ಏರಿಕೆಯನ್ನು ಮಾಡುತ್ತಲೇ ಇದ್ದಾರೆ, ಅದರ ಬಗ್ಗೆ ಯಾಕೆ ಯಾರು ಮಾತಡುತ್ತಿಲ್ಲ, ಗೊಬ್ಬರ ಸಹ ಏರಿಕೆ ಆಗಿದೆ, ಗ್ಯಾಸ್, ಅಡುಗೆ ಎಣ್ಣೆ, ಎಲ್ಲವೂ ಜಾಸ್ತಿ ಆಗಿದೆ. ಈ ಎಲ್ಲದರ ಬಗ್ಗೆ ಮಾತನಾಡಬಾರದು ಎಂದೇ ಧಾರ್ಮಿಕ ಭಾವನೆಯನ್ನು ಕೆರಳಿಸುವಂತದನ್ನು ಮಾಡುತ್ತಿದ್ದಾರೆ, ಇದನ್ನು ನಾವು ಖಂಡಿಸುತ್ತೇವೆ ಎಂದು ಕಿಡಿಕಾರಿದರು.
ಇನ್ನು ಇದೇ ವೇಳೆ ಗೌರಿಪಾಳ್ಯ ಚಂದ್ರು ಹತ್ಯೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರೇ ಇರಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಹರ್ಷ ಕೊಲೆಯಾದಗಲೂ ಹೇಳಿದ್ದೇ ಯಾರದ್ದೇ ಕೊಲೆಯಾದ್ರು ನಾನು ಖಂಡಿಸುತ್ತೇನೆ. ಹಿಂದೂ ಸತ್ತರೂ ಜೀವ, ಮುಸ್ಲಿಂ ಸತ್ತರೂ ಜೀವವೇ. ನರಗುಂದದಲ್ಲಿ ಮುಸ್ಲಿಂ ಹತ್ಯೆ ಆದಾಗ ಯಾಕೆ 25 ಲಕ್ಷ ಕೊಟ್ಟಿಲ್ಲ ? ಹರ್ಷನನ್ನು ಕೊಂದವರನ್ನ ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ ?
ಹಾಗೆ ಮುಸ್ಲಿಂ ಯುವಕರ ಹತ್ಯೆಯಾದವರಿಗೂ ಶಿಕ್ಷೆಯಾಗಲಿ ? ಎಂದು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಉರ್ದು ಬರಲ್ಲ ಅನ್ನೋ ಕಾರಣಕ್ಕೆ ಹತ್ಯೆ ಆಗಿದೆ ಅನ್ನೋ ಗೃಹ ಸಚಿವರ ಹೇಳಿಕೆ ಹಿನ್ನಲೆ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರಗೆ ಅನುಭವವೇ ಇಲ್ಲ. ಅವರಿಗೆ ಇಲಾಖೆ ಹ್ಯಾಂಡಲ್ ಮಾಡೋಕೆ ಬರಲ್ಲ. ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಅಷ್ಟೊತ್ತಿಗೆ ಯಾಕ್ ಹೋಗಿದರು ಅಂತ ಹೇಳಿಕೆ ಕೊಟ್ಟರು. ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ ಏನ್ರಿ ಇವರು..? ಸಿಎಂ ಸಹ ಅವರಿಗೆ ಕುಮ್ಮಕ್ಕು ಕೊಡುತ್ತಾರೆ. ನಾವು ಅವರಂತೆ ಸುಳ್ಳು ಹೇಳಲ್ಲ, ನಾವು ಸತ್ಯ ಹೇಳಿಕೊಂಡು ಜನರ ಮುಂದೆ ಹೋಗ್ತೀವಿ ಬೋಗಸ್ ಧರ್ಮ ಪ್ರಚಾರವನ್ನು ನಾವು ಮಾಡುವುದಿಲ್ಲ ಎಂದು ಆಡಳಿತ ಪಕ್ಷದ ನಾಯಕರ ವಿರುದ್ಧ ಗುಡುಗಿದರು.