ಬೆಂಗಳೂರು: ರಾಜ್ಯದ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿ ಮದ್ಯ ಖಾಲಿ ಖಾಲಿಯಾಗಿದೆ. ನೂತನ ಸಾಫ್ಟ್‌ವೇರ್ web indent ಅಪ್ಡೇಟ್ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗ್ತಿಲ್ಲ. ಕಳೆದ ಐದು ದಿನದಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಕೆಲ ಅಂಗಡಿಗಳಲ್ಲಿ ಅಲ್ಪ ಸ್ಪಲ್ಪ ಎಣ್ಣೆ ಇದ್ದು,ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಇನ್ನು ಇದರಿಂದ ಸರ್ಕಾರಕ್ಕೆ 800 ಕೋಟಿ ನಷ್ಟವಾದ್ರೆ, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ಸುಮಾರು 600 ಕೋಟಿಯಷ್ಟು ಲಾಸ್ ಆಗಿದೆ ಅನ್ನೋ ಮಾಹಿತಿ ಇದೆ.
ನೂತನ ಸಾಫ್ಟ್‌ವೇರ್ web indent ಮನೆಯಲ್ಲಿ ಕುಳಿತುಕೊಂಡು ಬಿಲ್ ಮಾಡಿ ಮದ್ಯವನ್ನು ಅಂಗಡಿಗೆ ತರಿಸಿಕೊಳ್ಳಬಹುದು.ಆದ್ರೆ,ತಾಂತ್ರಿಕ ದೋಷದಿಂದ ಬಿಲ್ ಜನರೇಟ್ ಆಗ್ತಿಲ್ಲ. ಹೀಗಾಗಿ ಹಳೆಯ ಪದ್ಧತಿ ಅಂದ್ರೆ KSBCL ಕಚೇರಿಯಲ್ಲಿ ಬಿಲ್ ಮಾಡಿ ಮದ್ಯ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಬೆಂಗಳೂರು ಬಾರ್ ಆ್ಯಂಡ್ ಅಸೋಸಿಯೇಷನ್ ಕಾರ್ಯದರ್ಶಿ ಕರುಣಾಕರ್ ಹೆಗ್ಡೆ, ಕಳೆದ 5 ದಿನಗಳಿಂದ ಯಾವುದೇ ಮದ್ಯ ಸಪ್ಲೈ ಆಗ್ತಿಲ್ಲ. ರಾಜ್ಯಾದ್ಯಂತ ಒಟ್ಟು11ಸಾವಿರಕ್ಕೂ ಹೆಚ್ಚು ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿವೆ. ಹೀಗಾಗಿ ಈ ಕೂಡಲೇ ವೆಬ್ ಇಂಡೆಂಟ್ ಸರಿಪಡಿಸಿ ಎಂದು ಒತ್ತಾಯಿಸಿದ್ರು.
ರಾಜ್ಯದಲ್ಲಿ ಮದ್ಯದಲ್ಲಿ ವ್ಯತ್ಯಯ ಆಗಿದ್ರೆ ಮತ್ತೊಂದೆಡೆ ಎಣ್ಣೆಪ್ರಿಯರಿಗೆ ಕಿಕ್ ಇಳಿಸುವ ಸುದ್ದಿ ಹೊರಬಿದ್ದಿದೆ. ಮದ್ಯಪಾನ ಮಾಡಿದ್ರೆ ಕಿಕ್ ಏರುತ್ತದೆ. ಆದ್ರೆ,ಮದ್ಯಪ್ರಿಯರಿಗೆ ಬಿಯರ್ ರೇಟ್ ಹೆಚ್ಚಳದಿಂದ ಬೆಲೆ ಏರಿಕೆ ಶಾಕ್ ತಟ್ಟಲಿದೆ. ಬಿಯರ್ ಉತ್ಪಾದನೆ ಕಂಪನಿಗಳಿಂದ ಬಿಯರ್ ಪ್ರಿಯರಿಗೆ ದರ ಏರಿಕೆ ಆಗಲಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದ ಬಾರ್ಲಿ ಆಮದು ಆಗ್ತಿತ್ತು.
ಬಾರ್ಲಿ ಸೇರಿ ಬಿಯರ್ ಉತ್ಪಾದನೆಗೆ ಬಳಸುವ ಅಗತ್ಯವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಪ್ರತಿ ಲೀಟರ್ ಬಿಯರ್ ಮೇಲೆ 5 ರಿಂದ 10 ರೂಪಾಯಿ ಏರಿಕೆ ಕಂಡಿದ್ದು, ಏಪ್ರಿಲ್ 10ರಿಂದ ಎಲ್ಲಾ ಬ್ರ್ಯಾಂಡ್ಗಳ ಬಿಯರ್ ದರ ಏರಿಕೆ ಕಾಣಲಿದೆ.
ಇನ್ನು ಹೊಸ ಅಪ್ಲಿಕೇಷನ್ ಮೂಲಕ ತೊಂದ್ರೆ ಆಗಿದೆ.ಇತ್ತ ಬೆಂಗಳೂರಿನ ಮದ್ಯದಂಗಡಿಗಳಲ್ಲಿ ಮದ್ಯ ಇಲ್ಲದೆ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಸಾಫ್ಟ್‌ವೇರ್ ಸರಿಪಡಿಸಬೇಕು.ಇಲ್ಲದಿದ್ರೆ ಇನ್ನಷ್ಟು ಸಮಸ್ಯೆ ಎದುರಾಗಲಿದೆ ಅಂತ ಮಾಲೀಕರು ಹೇಳ್ತಿದ್ದಾರೆ.
ಹೊಸ ಸಾಫ್ಟ್‌ವೇರ್ ಎಡವಟ್ಟಿಗೆ ಸರಕಾರದ ಬೊಕ್ಕಸಕ್ಕೆ 800 ಕೋಟಿ ಲಾಸ್ ಆಗಿದ್ರೆ, ಇತ್ತ ಮದ್ಯಪ್ರಿಯರಿಗೆ ಮಾತ್ರ ಗುರುವಾರ ಎಣ್ಣೆ ಸಿಗುತ್ತೋ ಇಲ್ವೋ ಅಂತ ಟೆನ್ಷನ್ ಶುರುವಾಗಿದೆ.