Wednesday, November 6, 2024

ಕಮಲಕಲಿಗಳ ಟ್ವೀಟ್‌ಗೆ ದಳಪತಿ ಠಕ್ಕರ್..!

ಬೆಂಗಳೂರು : ರಾಜ್ಯದಲ್ಲಿ ಒಂದಿಲ್ಲೊಂದು ಧರ್ಮಸಂಘರ್ಷಗಳು ಭುಗಿಲೇಳುತ್ತಿದ್ದು, ದಳ, ಕಮಲ ಕೆಸರೆರಚಾಟ ತಾರಕಕ್ಕೇರಿದೆ. ಕಮಲ ಕಲಿಗಳ ಟ್ವೀಟ್‌ಗೆ ಕೆರಳಿ ಕೆಂಡವಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಮೊಣಚು ಮಾತುಗಳಿಂದಲೇ ಸ್ಟ್ರಾಂಗ್‌ ಕೌಂಟರ್‌ ಕೊಟ್ಟಿದ್ದಾರೆ. ಏತನ್ಮಧ್ಯೆ ದಳಪತಿಗೆ ಕಮಲ ನಾಯಕರು ಕೂಡ ಪ್ರತಿದಾಳಿ ನಡೆಸಿದ್ದಾರೆ.

ಕೇಸರಿ ಪಡೆ ವಿರುದ್ಧ ದಳಪತಿ ಮತ್ತೆ ಗುಡುಗಿದ್ದಾರೆ.. ಟ್ವೀಟ್ ಮೂಲಕ ಗಾಳಿಪಟ ಎಂದಿದ್ದ ರಾಜ್ಯ ಬಿಜೆಪಿ‌ ನಾಯಕರ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. 2023ರಲ್ಲಿ ಈ ಗಾಳಿಪಟದ ಪವರ್ ಏನು ಎಂದು ತೋರಿಸುವೆ ಎಂದು ಹೆಚ್‌ಡಿಕೆ ಗುಡುಗಿದರು.

ಹಲಾಲ್, ಹಿಜಾಬ್, ಅಜಾನ್ ಇವುಗಳ ಬಗ್ಗೆ ಸುಖಾಸುಮ್ಮನೆ ವಿವಾದ ಸೃಷ್ಟಿಸಲು ಕೆಲವರು ಮುಂದಾಗಿದ್ದಾರೆ.. ಇಂತಹ ವಿಷಯಗಳು ಬಂದಾಗ ಹಿಂದೆ ಮನಮೋಹನ್ ಸಿಂಗ್‌ಗೆ ಮೌನಿ ಎಂದು ಬಿಜೆಪಿಯವರು‌ ಹೇಳ್ತಿದ್ರು. ಆದ್ರೆ, ಇದೀಗ ಇದೆಲ್ಲಾ ನಡೆಯುತ್ತಿದ್ರೂ ಸಿಎಂ ಬೊಮ್ಮಾಯಿ ನೋಡಿದ್ರೂ ನೋಡದಂತೆ ಮೌನಿಯಾಗಿದ್ದಾರೆ.. ‌ಹೀಗಾಗಿ‌ ಬೊಮ್ಮಾಯಿಗೆ‌ ಮೌನಿ ಬೊಮ್ಮಾಯಿ ಎಂದು ಕರೆಯಬೇಕು ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ರು.. ಜೊತೆಗೆ ನಾನು ಸಹ ಕೇಸರಿ‌ ಶಾಲು ಹಾಕಿಕೊಂಡು ಬರುವೆ, ಬನ್ರಪ್ಪ ಹೋರಾಡೋಣ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಬಗ್ಗೆ ಎಂದು ವಿಶ್ವಹಿಂದೂ ಪರಿಷತ್ ಗೆ ಕುಮಾರಸ್ವಾಮಿ ಸವಾಲು ಹಾಕಿದ್ರು..

ಶೋಭಾ ಕರಂದ್ಲಾಜೆ ಏಪ್ರಿಲ್ ಫೂಲ್ :

ಇನ್ನು ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಹೆಚ್‌.ಡಿ.ಕುಮಾರಸ್ವಾಮಿ, ಈ ಪರಿಸ್ಥಿತಿ ಹೀಗೆ ಮುಂದುವರೆದ್ರೆ ಬಿಜೆಪಿ ಸರ್ವನಾಶವಾಗಿ ರಾಜ್ಯ ಬಿಜೆಪಿ ಮುಕ್ತವಾಗುತ್ತೆ ಎಂದು ಗುಡುಗಿದ್ರು. ಇತ್ತ ಮೋದಿ ಅಧಿಕಾರದ ಅವಧಿಯಲ್ಲಿ ಯಾವುದೇ ಕೋಮು ಗಲಾಭೆಯಾಗಿಲ್ಲ ಎಂಬುದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಇದು ಶೋಭಾ ಕರಂದ್ಲಾಜೆ ಮಾಡಿರುವ ಏಪ್ರಿಲ್ ಫೂಲ್ ಎಂದು ಕುಟುಕಿದ್ದಾರೆ.

ಇನ್ನು ಕುಮಾರಸ್ವಾಮಿಯ ವಾಗ್ದಾಳಿಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ರು. ನಾನು ರೈತರ ಪರ ರೈತರ ಪರ ಎನ್ನುವ ಕುಮಾರಸ್ವಾಮಿ ಎಂದಾದರೂ ಕೃಷಿ ಸಚಿವರಾಗಿದ್ರಾ..? ಅಥವಾ ಇವರ ಮನೆಯವರು ಆಗಿದ್ರಾ ಎಂದು‌ ಸಚಿವ ಅಶ್ವತ್ಥ್‌ನಾರಾಯಣ್ ಹೆಚ್ಡಿಕೆ ವಿರುದ್ದ ಗುಡುಗಿದ್ರು..

ಒಟ್ಟಿನಲ್ಲಿ ಇಷ್ಟೂ ದಿನ‌ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿ ಬಿಜೆಪಿಯ ಬಿ.ಟೀಂ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಹೆಚ್ಡಿಕೆ ಇಂದು ಬಿಜೆಪಿ ವಿರುದ್ಧವೇ ತಿರುಗಿ ಬೀಳುವ ಮೂಲಕ ಬಿ.ಟೀಂ ಅಪಖ್ಯಾತಿಯಿಂದ ಹೊರಬರಲು ಮುಂದಾಗಿರೋದು ವಿಶೇಷ.

RELATED ARTICLES

Related Articles

TRENDING ARTICLES