Wednesday, January 22, 2025

ದಾಂಪತ್ಯದಲ್ಲಿ ಕಲಹ: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ವ್ಯಕ್ತಿ ಆತ್ಮಹತ್ಯೆ

ತುಮಕೂರು: ಕಳೆದು 6 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಬಟ್ಟೆ ಸೌಂಡ್​​​ ಮಾಡಿ, ಪ್ರೀತಿಸಿ ಮದುವೆ ಆಗಿದ್ದ ಶಂಕರಪ್ಪ (45) ಎಂಬುವವರು ನೇಣು ಬೀಗಿದುಕೊಂಡು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಬಳಿಕ ಅಕ್ಕಿಮರಿ ಪಾಳ್ಯದ ಬಳಿ ಈ ಘಟನೆ ನಡೆದಿದೆ.

ಶಂಕರಪ್ಪ ಅವರು 25 ವರ್ಷದ ಯುವತಿ ಮೇಘನಾ ಅವರನ್ನು ಮದುವೆ ಆಗಿದ್ದರು. ಈ ಮದುವೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಮದುವೆ ಆಗಿತ್ತು. ಆದರೆ, ಈಗ ಶಂಕರಪ್ಪ ಅವರು ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹುಲಿಯೂರು ದುರ್ಗ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES