ಹುಬ್ಬಳ್ಳಿ : ಸಭಾಪತಿ ಬಸವರಾಜ ಹೊರಟ್ಟಿಗೆ ನಡುಕ ಶುರುವಾಗಿದೆ. ಅವರು 20 ವರ್ಷಗಳಿಂದ ಕಟ್ಟಿರುವ ಸಾಮ್ರಾಜ್ಯ ಶೇಕ್ ಆಗ್ತಿದೆ. ಹೊರಟ್ಟಿ ವಿರುದ್ಧ ಶಿಕ್ಷಕರು ಸಿಡಿಮಿಡಿಗೊಂಡಿದ್ದಾರೆ. ಇದು ವಿಧಾನ ಪರಿಷತ್ ಸಭಾಧ್ಯಕ್ಷರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಹುಬ್ಬಳ್ಳಿ – ಧಾರವಾಡ ಪದವೀಧರರ ಕ್ಷೇತ್ರ ಜೆಡಿಎಸ್ ಬಾಹ್ಯವುಳ್ಳ ಕ್ಷೇತ್ರ.ಇದು ಸತತ 40 ವರ್ಷದಿಂದ ಜೆಡಿಎಸ್ ತೆಕ್ಕೆಯಲ್ಲಿದೆ.ಆ ಕ್ಷೇತ್ರಕ್ಕೆ ಚುನಾವಣೆಗೂ ಮುನ್ನವೇ ಕಂಟಕ ಎದುರಾಗಿದ್ದು ಸಭಾಪತಿ ಹೊರಟ್ಟಿಗೆ ನಡುಕ ಶುರುವಾಗಿದೆ. ಎಲೆಕ್ಷನ್ ಗೆಲ್ಲುವವರೆಗೆ ನಮ್ಮನ್ನು ಬಳಸಿಕೊಳ್ಳುತ್ತಾರೆ. ಗೆದ್ದ ಬಳಿಕ ಇತ್ತ ತಲೆ ಕೂಡಾ ಹಾಕುತ್ತಿಲ್ಲ.ಆದ್ರೆ,ಇದುವರೆಗೆ ನಮ್ಮ ಯಾವುದೇ ಒಂದು ಬೇಡಿಕೆಯೂ ಈಡೇರಿಲ್ಲ ಅಂತ ಹುಬ್ಬಳ್ಳಿ-ಧಾರವಾಡ ಶಿಕ್ಷಕರ ಒಕ್ಕೂಟ ಹೊರಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದೆ.
ಶಿಕ್ಷಕರಿಗೆ ಕನಿಷ್ಠ ಮೂಲ ವೇತನ ನೀಡೋಕೆ 2005ರಲ್ಲೆ ಆದೇಶ ಆಗಿದೆ. ಸರ್ಕಾರ ಈ ಆದೇಶ ಕಡ್ಡಾಯ ಮಾಡಬೇಕೆಂದು ಧಾರವಾಡ ಹೈಕೋರ್ಟ್ ಬೆಂಚ್ 2018ರಲ್ಲಿಯೇ ಹೇಳಿದೆ.ಆದರೆ ಈವರೆಗೂ ಅದು ಇನ್ನೂ ಜಾರಿಯಾಗಿಲ್ಲ.ಜೊತೆಗೆ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಅವಧಿಗೂ ಮೊದಲೇ ಶಿಕ್ಷಕರನ್ನು ವಜಾ ಮಾಡಿದ್ದಾರೆ.ಆದ್ರೆ, ಅವರಿಗೆ ನ್ಯಾಯ ಸಿಕ್ಕಿಲ್ಲ.ನಮ್ಮ ಜ್ವಲಂತ ಸಮಸ್ಯೆ ಆಗಿಯೇ ಉಳಿದಿದೆ. ಇವೆಲ್ಲ ಪರಿಹರಿಸದೇ ಇದ್ದರೆ ಶಿಕ್ಷಕರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ತಕ್ಕ ಪಾಠ ಕಲಿಸುತ್ತೇವೆ ಅಂತ ಶಿಕ್ಷಕರ ಒಕ್ಕೂಟ ಗರಂ ಆಗಿದೆ.
ಒಟ್ಟಾರೆ ಶಿಕ್ಷಕರ ಬೇಡಿಕೆ ಈಡೇರಿಸದ ಸಭಾಪತಿ ಹೊರಟ್ಟಿ ವಿರುದ್ಧ ಎಲೆಕ್ಷನ್‌ಗೂ ಮೊದಲೇ ಅಸಮಾಧಾನ ವ್ಯಕ್ತವಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕು.