Thursday, January 23, 2025

ಅನುಕಂಪ ಗಿಟ್ಟಿಸಿವುದು ಯಾವಾಗಲೂ ನಡೆಯಲ್ಲ – ನಿಖಿಲ್​ ಕುಮಾರಸ್ವಾಮಿ

ಮಂಡ್ಯ: ಯಾರೋ ಏನೋ ಹೇಳಿಬಿಟ್ಟರು ಅಂತ ಅನುಕಂಪ ಗಿಟ್ಟಿಸಿವುದು ಯಾವಾಗಲೂ ನಡೆಯಲ್ಲ ಸಂಸದೆ ಸುಮಲತಾ ಅವರು ಆತ್ಮಾವಲೋಕನ ಮಾಡ್ಕೊಳಬೇಕು ಎಂದು ನಿಖಿಲ್​ ಕುಮಾರಸ್ವಾಮಿ ಅವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ಗೆ ಟಾಂಗ್​ ಕೊಟ್ಟಿದ್ದಾರೆ.

ಮಂಡ್ಯದಲ್ಲಿಂದು ಮಾತನಾಡಿದ ಅವರು, ಪ್ರತಿ ಸಂದರ್ಭದಲ್ಲಿಯೂ ಶಾಸಕರನ್ನ ದೂರುವುದು ಸರಿಯಲ್ಲ. ಸಂಸದರಾದ ನಂತರ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಏನು(?) ಅನ್ನೊದನ್ನ ಅವರೇ ಪ್ರಶ್ನೆ ಮಾಡಿಕೊಳ್ಳಬೇಕು. ಗೆದ್ದಿರುವ ಶಾಸಕರು ಜನರು ಆಯ್ಕೆ ಮಾಡಿರುವ ಶಾಸಕರು. ಇವತ್ತು ಒಂದು ಬಾರಿ ಆಯ್ಕೆಯಾದ ಶಾಸಕರಲ್ಲ, ನಾಲ್ಕು ಬಾರಿ ಶಾಸಕರಾದಂತವರು ಎಂದರು.

ಇನ್ನು ಅಭಿವೃದ್ಧಿಯಾಗಿಲ್ಲ ಅನ್ನೊದನ್ನ ಜನರು ಪ್ರಶ್ನೆ ಮಾಡ್ತಾರೆ. ಇವರನ್ನ ಪ್ರಶ್ನೆ ಮಾಡುವವರು ಯಾರು ಆಗಾದ್ರೆ. ಪ್ರತಿ ಸಂದರ್ಭದಲ್ಲಿ ಕಾಲು ಕೆರ್ಕೊಂಡು, ಜಗಳ ಬರೋದು ಸರಿಯಲ್ಲ ಎಂದು ಸಂಸದೆಗೆ ತಿರುಗೇಟು ನೀಡಿದ್ದಾರೆ.

ಇನ್ನು ಯಾರೋ ಏನೋ ಅಂದಬಿಟ್ರು, ಯಾರೋ ಏನೋ ಅಂದಬಿಟ್ರು ಅಂತ ಸಿಂಪತಿ ಗೀಟಿಸ್ಕೊಳೋಕ್ಕೆ ನಡೆದುಕೊಳ್ಳೋದು ಯಾವಾಗ್ಲೂ ನಡೆಯೋದಿಲ್ಲ, ಜನಗಳ ಬಳಿ ನಿಂತು ಕೆಲಸ ಮಾಡ್ಲಿ. ಇನ್ನು 2024ರ ವರೆಗೆ ಅವರ ಅವಧಿ ಇದೆ ಮುಂದುವರಿಸಲಿ ಎಂದು ಜೆಡಿಎಸ್​​ ಯುವಘಟದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಅವರು ಹೇಳಿದರು.

RELATED ARTICLES

Related Articles

TRENDING ARTICLES