Wednesday, January 22, 2025

ಮಾಜಿ ಪಿಎಂ ಹೆಚ್ಡಿಡಿ ಪತ್ನಿಗೆ ಐಟಿ ನೋಟೀಸ್ ಜಾರಿ : H D ರೇವಣ್ಣ ಆಕ್ರೋಶ

ಹಾಸನ : ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿಯಿಂದ ನೋಟೀಸ್ ಬಂದಿರುವ ಹಿನ್ನೆಲೆ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರೇವಣ್ಣ ಅವರ ತಾಯಿ ಅವರಿಗೆ ಐಟಿಯಿಂದ ನೋಟೀಸ್ ಬಂದ ಹಿನ್ನಲೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ, ಅದನ್ನು ನೋಡಬೇಕು. ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಆರ್.ಟಿ.ಒ.ದಲ್ಲಿ ನೂರು ಕೋಟಿ ಇನ್ನೂರು ಕೋಟಿ ಲೂಟಿ ಹೊಡಿತಿದ್ದಾರೆ ಅವರಿಗೇಕೆ ನೋಟೀಸ್ ನೀಡಲ್ಲ ? ಎಂದು ಗುಡುಗಿದ್ದಾರೆ.

ಇನ್ನು ಒಂದು ಎಕರೆ ಏನು, ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ, ನಾನು ಸರ್ವೆ ಮಾಡಿ‌ ಬಿಲ್ ಕೊಟ್ಟರೆ ಸರಿಯಾಗಲ್ಲ, ಆದ್ದರಿಂದ ಡಿಸಿಯವರೇ ಆ್ಯಪ್​​ನಲ್ಲಿ ಸರ್ವೆ ಮಾಡಿಸಲಿ. ನಮ್ಮ ಅಪ್ಪ, ಅಮ್ಮ ಏನಾದ್ರು‌ ಕೋಟ್ಯಾಂತರು ರೂ ಆಸ್ತಿ ಮಾಡಿದ್ದಾರ.? ನೋಟೀಸ್ ಕೊಟ್ಟಿದ್ದಾರೆ ಉತ್ತರ ಕೊಡ್ತೀವಿ. ಇದೇ ಏನು ಶಾಶ್ವತವಾಗಿ ಇರಲ್ಲ ನಮಗೂ ಕಾಲ ಬರುತ್ತದೆ.

ಏನಾದರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ ? ಡ್ರೋಣ್ ಸರ್ವೆ ಮಾಡಲಿ, ದೊಡ್ಡಪುರ, ಪಡುವಲಹಿಪ್ಪೆ ಇದೆಲ್ಲ ಕಡೆಯು ನಮ್ಮ ಆಸ್ತಿ ಇದೆ. ನಾನೇನು ಹೊಸದಾಗಿ ಆಸ್ತಿ ಮಾಡಲು ಹೋಗಿದ್ದೀನ? ನಾನೇನಾದ್ರು ಸೈಟ್ ಬ್ಯುಸಿನೆಸ್ ಮಾಡಲು ಹೋಗಿದ್ದೇನಾ ? ಎಂದು ವಾಗ್ದಾಲಿ ಮಾಡಿದ್ದಾರೆ.

ಕಾನೂನು ರೀತಿ ಏನಿದೆ ಆ ಪ್ರಕಾರ ನೋಟೀಸ್ ಕೊಡಿ, ಅದನ್ನು ಬಿಟ್ಟು ಒಂದು ಪಕ್ಷವನ್ನು ಗುರಿಯಾಗಿ ಇಟ್ಟುಕೊಂಡು ಮಾಡಲು ಹೋಗಬೇಡಿ. ಕೆಲವರು ಆರ್.ಟಿ.ಒ.ನಲ್ಲಿ ಲೂಟಿ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್‌ಗೆ ನಿಲ್ಲುತ್ತಿದ್ದಾರೆ ಅಂತಹವರಿಗೆ ನೋಟೀಸ್ ಕೊಡುತ್ತಿಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES