ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಟ್ವಿಟರ್ ಖಾತೆಯಾದ @CMofKarnataka ಖಾತೆಯನ್ನು ಕೆಲವು ನಿಮಿಷಗಳ ಕಾಲ ಕೆಲವು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.
ಬೆಳಗ್ಗೆ 6.15 ರಿಂದ 6.19ರ ವರೆಗೂ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ಈ ಸಮಯದಲ್ಲಿ ನೂರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಪೋಸ್ಟ್ಮಾಡಿದ್ದಾರೆ. ಆದರೆ, ಈ ಕುರಿತು ಸಿಎಂ ಕಚೇರಿ ಯಾವುದೇ ದೂರು ನೀಡಿಲ್ಲ. ಪೋಸ್ಟ್ ಪಿನ್ ಮಾಡುವಾಗ ಆಡ್ಮಿನ್ಗೆ ಮೆಸೇಜ್ ಹೋಗಿದ್ದು ಆಡ್ಮಿನ್ ನಂತರ ಸಿಎಂ ಖಾತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೂ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ ಸಿಎಂ ಟ್ವೀಟ್ ಫಾಲೋವರ್ಸ್.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂಬ ವೈಯಕ್ತಿಕ ಟ್ವಿಟರ್ ಖಾತೆಯನ್ನು ಪ್ರತ್ಯೇಕವಾಗಿ ಹೊಂದಿದ್ದಾರೆ. ಹಾಗೂ ಹ್ಯಾಕ್ ಆಗಿರುವುದು CM of Karnataka ಎಂಬ ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆ ಆಗಿದೆ. ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯೇ ಹ್ಯಾಕ್ ಆಗಿರುವುದು ಅಚ್ಚರಿ ಮೂಡಿಸಿದೆ. ಸಿಎಂ ಆಫ್ ಕರ್ನಾಟಕ ಎಂಬ ಮುಖ್ಯಮಂತ್ರಿಯ ಅಧಿಕೃತ ಖಾತೆಯನ್ನು ಕರ್ನಾಟಕದ ಮುಖ್ಯಮಂತ್ರಿ ಆದವರು ಬಳಸುತ್ತಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರೊಫೈಲ್ ಚಿತ್ರದೊಂದಿಗೆ ಆ ಖಾತೆ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ ಮುಖ್ಯಮಂತ್ರಿ ಆಗಿರುವವರ ಖಾತೆ ಅದಾಗಿದೆ.
ಪೋಸ್ಟ್ಗಳನ್ನು ಪೋಸ್ಟ್ ಮಾಡುವಾಗ ಇತ್ತೀಚೆಗೆ ಖಾತೆ ತೆರೆದವರ ಪ್ರೊಫೈಲ್ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಲಾಗಿತ್ತು. ನಂತರ ಸುದ್ದಿ ತಿಳಿದ ಕೇವಲ ಮೂರೇ ನಿಮಿಷಗಳಲ್ಲಿ ಎಲ್ಲ ಟ್ವೀಟ್‌ಗಳನ್ನು ಅಳಿಸಿಹಾಕಿ ಖಾತೆ ಸರಿಪಡಿಸಿದ್ದಾರೆ ಸಿಬ್ಬಂದಿ ವರ್ಗದವರು.