ಲಕ್ನೊ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 49 ವರ್ಷದ ಯೋಗಿ ಆದಿತ್ಯನಾಥ್ ಇಂದು 2ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಲಕ್ನೋದ ಏಕಾನಾ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ವೈಭವಯುತ ಪ್ರಮಾಣವಚನ ಸಮಾರಂಭಕ್ಕೆ ಲಕ್ಷಾಂತರ ಜನರನ್ನು ಸೇರಿಸಲಾಗಿತ್ತು.
ವೇದಿಕೆಯ ಮೇಲೆ ಯೋಗಿಯ ಪದಗ್ರಹಣಕ್ಕೆ ಸಾಕ್ಷಿಯಾಗಿ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಮೋದಿಯ ಜೊತೆಗೆ ಬಿಜೆಪಿ ಹೈಕಮಾಂಡ್ ಎನಿಸಿಕೊಳ್ಳುವ ಜೆ.ಪಿ.ನಡ್ಡಾ, ರಾಜನಾಥಸಿಂಗ್, ಅಮಿತ್ ಷಾ ಮೊದಲಾದವರು ಭಾಗವಹಿಸಿದ್ದರು. ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಪ್ರತಿಜ್ಷಾವಿಧಿ ಭೋದಿಸಿದರು. ಕೇಶವ್ ಪ್ರಸಾದ್ ಮೌರ್ಯ DCM ಆಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜಕೀಯಕ್ಕೆ ಸಂಬಂಧವೇ ಇಲ್ಲದ ಹಲವಾರು ಉದ್ಯಮಿಗಳೂ ಸಹ ಈ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರಲ್ಲಿ ಕೋಟ್ಯಾಧೀಶ್ವರ ಮಹೇಂದ್ರ ಸಹ ಸೇರಿದ್ದು ವಿಶೇಷವಾಗಿತ್ತು. ಸಿನಿಮಾ ನಟರಲ್ಲಿ ಅಕ್ಷಯ್ಕುಮಾರ್, ಅನುಪಮ್ಖೇರ್, ಕಂಗನಾರಣೌತ್ ಸೇರಿದಂತೆ ಹಲವಾರು ನಟನಟಿಯರು ಭಾಗವಹಿಸಿದ್ದರು. 5 ಮಹಿಳೆಯರಿಗೆ ಮಂತ್ರಿಗಿರಿ ಪಟ್ಟವನ್ನು ಈ ಸಮಯದಲ್ಲಿ ನೀಡಲಾಯಿತು. ಸಚಿವರಾಗಿ ಧರ್ಮಪಾಲ ಸಿಂಹ, ಭೂಪೇಂದ್ರ ಸಿಂಗ್ ಚೌಧರಿ ಮುಂತಾದವರು ಪ್ರಮಾಣವಚನ ಸ್ವೀಕರಿಸಿದರು.