ಬೆಂಗಳೂರು : ಬ್ರಿಟಿಷರ ವಿರುದ್ಧವಾಗಿ ಹೋರಾಟ ಮಾಡಿದವರ ವಿರುದ್ಧವಾಗಿ ಇಂದು ಬಿಜೆಪಿಯವರು ನಿಂತಿದ್ದಾರೆ ಮತ್ತು ಇವರ ಸರ್ಕಾರದ ಸಾಧನೆಗಳು ಏನೂ ಅಂತ ಹೇಳಿ ಇವರ ನೋಡೋಣ ಎಂದು ವಿಧಾನಸಭೆ ಕಲಾಪದಲ್ಲಿ ಶಾಸಕ ರಿಜ್ವಾನ್ ಹರ್ಷದ್ ಬಿಜೆಪಿಗರಿಗೆ ಪ್ರಶ್ನೆ ಮಾಡಿದ್ದಾರೆ.
ಇಂದು ಪಠ್ಯ ಕ್ರಮದಿಂದ ಟೀಪು ಸುಲ್ತಾನ್ ಕೈ ಬಿಡುವ ವಿಚಾರ ಹಿನ್ನಲೆ ಕಲಾಪದಲ್ಲಿ ಮಾತನಾಡಿದ ಅವರು ಕೇವಲ ಟೀಪು ಸುಲ್ತಾನ್ ಮಾತ್ರ ಅಲ್ಲ, ಬ್ರಿಟಿಷರ ವಿರುದ್ಧವಾಗಿ ಹೋರಾಟ ಮಾಡಿದವರ ವಿರುದ್ಧವಾಗಿ ಇಂದು ಬಿಜೆಪಿಯವರು ನಿಂತಿದ್ದಾರೆ. ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನ ವೈಭವಿಸುತ್ತಾರೆ.
ಇವರು ಬರೀ ಟಿಪ್ಪು ವಿರುದ್ದ ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನೆಹರು, ಗಾಂಧಿ ಸೇರಿದಂತೆ ಹೋರಾಟದಲ್ಲಿ ಭಾಗವಹಿಸಿದ್ದವರನ್ನ ವಿರೋಧಿಸುತ್ತಾ ಬಂದಿದ್ದಾರೆ. ಅಲ್ಲದೇ ಏಕೆ ಈ ರೀತಿ ಮಾಡ್ತಾರೆ ಅಂದ್ರೆ ಆರ್ ಎಸ್ ಎಸ್ ಮತ್ತು ಸಂಘ ಪರಿವಾರದವರು ಅಂದಿನ ಬಿಜೆಪಿಯ ಹಿಂಬಾಲಕರಾಗಿದ್ದರು.
ಒಂದು ಹೇಳ್ತಿನಿ ಟಿಪ್ಪು ಸುಲ್ತಾನ್ ಸತ್ತು ನೂರಾರು ವರ್ಷ ಕಳೆದಿದೆ , ಇಂದಿಗೂ ಕೂಡ ಟಿಪ್ಪುವಿನಿಂದ ಇವರಿಗೆ ತೊಂದರೆ ಆಗ್ತಾಯಿದೆ. ಗಾಂಧಿ ಸತ್ತು ೭೦ ವರ್ಷ ಆಗಿದೆ ಈಗಲೂ ಕೂಡ ಗಾಂಧಿಯಿಂದ ತೊಂದರೆ ಆಗಿದೆ. ಗಾಂಧಿ ಸಾವಿಗೆ ಬಿಜೆಪಿ ಕಾರಣ ಎಂಬ ಪ್ರಶ್ನೆಗೆ ಉತ್ತರಿಸಿ ಯಾವ ಸಿದ್ದಾಂತವನ್ನು ಬಿಜೆಪಿಯವರು ಹೊತ್ತುಕೊಂಡು ಓಡಾಡುತ್ತ ಇದ್ದಾರೊ ಅದೇ ಸಿದ್ದಾಂತ ಕಾರಣ ಅಲ್ವಾ.
ಸಿದ್ದಾಂತ ಇಲ್ಲದೇ ರಾಜಕಾರಣ ಮಾಡೊಕ್ಕೆ ಆಗುತ್ತಾ ? ಬಿಜೆಪಿಗೂ ಒಂದು ಸಿದ್ದಾಂತ , ಕಾಂಗ್ರೆಸ್ಗೂ ಒಂದು ಸಿದ್ದಾಂತ ? ಇದೆ .ಸಮಾಜವನ್ನು ಒಡಿಬೇಕು ರಾಜ್ಯದಲ್ಲಿ ಏನ್ ಆಗಿದೆ ಇವತ್ತು, ರಾಜ್ಯ ಸರ್ಕಾರ ಕಮಿಷನ್ ತೆಗೆದುಕೊಂಡಿದೆ ಎಂಬ ಆರೋಪವಿದೆ. ಇಂತಹ ವಿಚಾರ ಇಟ್ಕೊಂಡು ಇವರು ಜನರ ಬಳಿ ಹೋಗಲು ಆಗುತ್ತಾ ?
ಅದಕ್ಕೆ ಬಿಜೆಪಿಯವರು ಹಿಜಾಬ್ , ಟಿಪ್ಪು , ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗ ನಿಷೇಧ ಇವುಗಳು ಬಿಜೆಪಿ ಚುನಾವಣಾ ರಣತಂತ್ರವಾಗಿವೆ. ಇದು ಮಾಡೊದು ತಪ್ಪು ಅಂತ ಬಿಜೆಪಿಯವರಿಗೆ ಗೊತ್ತು ಆದ್ರೆ ಏನ್ ಮಾಡೊದು ಅಧಿಕಾರಕ್ಕೆ ಬರಬೇಕು ಅಂತ ಮಾಡ್ತಾಯಿದ್ದಾರೆ. ಇವರ ಸರ್ಕಾರದ ಸಾಧನೆಗಳು ಏನೂ ಅಂತ ಹೇಳಿ ನೋಡೋಣ ಎಂದು ಶಾಸಕ ರಿಜ್ವಾನ್ ಹರ್ಷದ್ ವಾಗ್ದಾಳಿ ನಡೆಸಿದ್ದಾರೆ.