Monday, December 23, 2024

“ಮಲೆನಾಡು ಕರ್ನಾಟಕ” ಘೋಷಣೆ ಮಾಡಿ: ಶಾಸಕ ಹೆಚ್ ಕೆ ಕುಮಾರಸ್ವಾಮಿ

ಇಂದು ವಿಧಾನಸಭೆಯಲ್ಲಿ ಶಾಸಕ ಹೆಚ್ ಕೆ ಕುಮಾರಸ್ವಾಮಿ “ಮಲೆನಾಡು ಕರ್ನಾಟಕ” ಘೋಷಣೆ ಮಾಡುವಂತೆ ಹೇಳಿಕೆ ನೀಡಿದ್ದಾರೆ. ಅವರು ಈ ಬಗ್ಗೆ ಹಲವು ಉದಾಹರಣೆಗಳನ್ನೂ ಸಹ ನೀಡಿದ್ದಾರೆ. ಕಿತ್ತೂರು ಕರ್ನಾಟಕ ಎಂದು ಘೋಷಣೆಯಾಗಿದೆ. ಅದೇ ರೀತಿ ಮಲೆನಾಡು ಕರ್ನಾಟಕ ಎಂದು ಘೋಷಣೆ ಮಾಡಿ ಎಂದು ಪಟ್ಟು ಹಿಡಿದು ಹೇಳಿದ್ದಾರೆ.

ಮಲೆನಾಡಿನಲ್ಲಿ ತುಂಗಾ ಭದ್ರ, ಹೇಮಾವತಿ ಜಲಾಶಯ ಸೇರಿದಂತೆ ೪೦ ಜಲಾಶಯಗಳಿವೆ. ಮಲೆನಾಡು ಯಾವುದರಲ್ಲೂ ಕಡಿಮೆಯಿಲ್ಲ. ಆದ್ದರಿಂದ ಮಲೆನಾಡು ಕರ್ನಾಟಕ ಘೋಷಣೆ ಮಾಡಬೇಕು. ಆರೇಳು ಜಿಲ್ಲೆಗಳನ್ನ ಸೇರಿಸಿ ಮಲೆನಾಡು ಕರ್ನಾಟಕ ಎಂದು ಘೋಷಣೆ ಮಾಡಿ. ಮಲೆನಾಡು ಅಭಿವೃದ್ಧಿಗೆ ವಿಶೇಷವಾಗಿ ಒತ್ತು ನೀಡಿ. ಇಲ್ಲಿ ಪ್ರತಿ ವರ್ಷ ರಸ್ತೆಗಳು ಹಾಳಾಗುತ್ತಿವೆ. ಏಕೆಂದರೆ ಇಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಅದಕ್ಕೆ ಇಲ್ಲಿ ಒಂದು ಪಾಲಿಸಿ ಘೋಷಣೆ ಮಾಡಿ. ಆಗ ಸ್ವಲ್ಪವಾದರೂ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES