ಬೆಂಗಳೂರು: ನಾನು ಜಾತ್ಯತೀತ ವ್ಯಕ್ತಿ, ಸಂವಿಧಾನದ ಬಗ್ಗೆ ಗೌರವವಿದೆ. ಸಂವಿಧಾನ ಪಾಲಿಸುವ ವ್ಯಕ್ತಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಬುಧವಾರ ಹೇಳಿದರು.
ವಿಧಾನಸೌಧ ಮುಂಭಾಗದಲ್ಲಿಂದು ನಕಲಿ ಜಾತಿ ಪ್ರಮಾಣ ಪಡೆದಿರುವ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಜಾತಿ ಪ್ರಮಾಣ ಪತ್ರವನ್ನು ಪಡೆದಿಲ್ಲ, ನಿನ್ನೆ ನಾನು ಸದನದಲ್ಲಿ ಇರಲಿಲ್ಲ, ನಮ್ಮ ಸ್ನೇಹಿತರು ಗೂಳಿಹಟ್ಟಿ ಶೇಕರ್ ಪ್ರಸ್ತಾಪಿಸಿದ್ದಾರೆ ಎಂದರು.
ಇನ್ನು ನಾನು ಯಾವುದೇ ಬೇರೆ ಧರ್ಮದ ಸಭೆಯಲ್ಲಿ ಭಾಗವಹಿಸಿಲ್ಲ,ಬೆಂಬಲ ಕೊಟ್ಟಿಲ್ಲ. ಇಲ್ಲಿ ರೇಣುಕಾಚಾರ್ಯ ಸುಪುತ್ರಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ನನ್ನ ಮಗಳಿಗೆ ನನ್ನ ಸಹೋದರರು ಜಾತಿ ಪತ್ರ ಕೊಡಿಸಿದ್ದರು ಅದನ್ನು ನಾನು ವಾಪಸ್ ಕೊಡಿಸಿದ್ದೇನೆ. ಹಿಂದೆ ಗುಲ್ಬರ್ಗದಲ್ಲಿ ನನ್ನ ಸಹೋದರರು ಸ್ಪರ್ಧೆ ಮಾಡಿದಾಗ ಗೋವಿಂದ ಕಾರಜೋಳ ಹೇಳಿದಾಗ ಆ ನಾಮಪತ್ರ ಎಸ್ಸಿ ಮೀಸಲಾತಿ ಒಳಗೆ ಒಂದೇ ಒಂದು ಸವಲತ್ತು ಪಡೆದಿದ್ದರು. ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಎಂದಿಗೂ ಸಮಾಜಕ್ಕೂ ದ್ರೋಹ ಬಗೆಯಲ್ಲ, ಅಂಬೇಡ್ಕರ್ ಸಂವಿಧಾನದ ವಿರುದ್ದವಾಗಿ ನಾನು ನಡೆದುಕೊಂಡಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.