Sunday, December 22, 2024

ಬೊಮ್ಮಾಯಿ ಸಂಪುಟ; ಅಮಿತ್‌ ಶಾ ಭೇಟಿ ಬಳಿಕ ಪುನಾರಚನೆ

ಮತ್ತೆ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಸಾಕಷ್ಟು ದಿನಗಳಿಂದ ವಿಳಂಬವಾಗಿದ್ದ‌ ಸಂಪುಟ ಪುನಾರಚನೆಗೆ ಇದೀಗ ಮರುಜೀವ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಬೊಮ್ಮಾಯಿ ಸಚಿವ ಸಂಪುಟ ಪುನಾರಚನೆ ಫಿಕ್ಸ್ ಎನ್ನಲಾಗ್ತಿದೆ. ಒಂದು ವೇಳೆ ಪುನಾರಚನೆಯಾದಲ್ಲಿ ಹಳೆತಲೆಗಳಿಗೆ ಕೊಕ್ ಕೊಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಪಂಚರಾಜ್ಯಗಳ ಚುನಾವಣೆ ಬಳಿಕ ಬಿಜೆಪಿಯ ದೆಹಲಿ ದೊರೆಗಳು ಫುಲ್ ಫ್ರೀಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ.. ತುಮಕೂರಿನ ಸಿದ್ದಗಂಗಾ ಮಠವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದು ಏಪ್ರಿಲ್ 1ರಂದು ಅಮಿತ್ ಶಾ ರಾಜ್ಯಕ್ಕೆ ಬರಲಿದ್ದಾರೆ. ಈ ವೇಳೆ ಶಾ ಜೊತೆ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ರಾಜ್ಯ ರಾಜಕಾರಣ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.. ಈ ಸಂದರ್ಭದಲ್ಲಿ ಸಂಪುಟ ಸರ್ಜರಿಗೆ ಶಾ ಸಮ್ಮತಿ ಕೊಟ್ಟರೆ ರಾಜ್ಯಕ್ಕೆ ಜೆಪಿ ನಡ್ಡಾ ಬರುವ ಮುನ್ನವೇ ಮೇಜರ್ ಸರ್ಜರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಹೌದು.. ಇದೀಗ ಭಾರಿ ಕುತೂಹಲ ಕೆರಳಿಸಿರುವುದು ಸಂಪುಟ ರಚನೆಯೋ..?ಪುನಾರಚನೆಯೋ ಎಂಬುದು.. ಒಂದು ವೇಳೆ ವಿಸ್ತರಣೆ ಮಾಡಿದ್ರೆ ಬರೀ ನಾಲ್ವರಿಗೆ ಮಾತ್ರ ಅವಕಾಶ ಸಿಗಲಿದೆ.. ಆದ್ರೆ, ಪುನಾರಚನೆಗೆ ವರಿಷ್ಠರು ಸೂಚಿಸಿದಲ್ಲಿ 8 ಶಾಸಕರು ಸಚಿವರಾಗೋದು ಫಿಕ್ಸ್ ಎನ್ನಲಾಗಿದೆ.. ಹೀಗಾದಲ್ಲಿ ಕೆಲ ಹಳೆಯ ತಲೆಗಳಿಗೆ ಕೊಕ್ ಸಹ ಕೊಡಬೇಕಾಗುತ್ತದೆ.. ಪುನಾರಚನೆ ಮಾಡಿದ್ರೆ ಈಶ್ವರಪ್ಪ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್ ಸೇರಿ ಕೆಲವರನ್ನು ಬೊಮ್ಮಾಯಿ ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ..

ಅರವಿಂದ್ ಬೆಲ್ಲದ್, ಯತ್ಬಾಳ್, ತಿಪ್ಪಾರೆಡ್ಡಿ, ರಾಮದಾಸ್, ಪೂರ್ಣಿಮಾ, ದತ್ತಾತ್ರೇಯ ಪಾಟೀಲ್, ರಮೇಶ್ ಜಾರಕಿಹೊಳಿ, ರಾಜುಗೌಡ, ಪಿ.ರಾಜೀವ್, ಎಂ.ಪಿ.ಕುಮಾರಸ್ವಾಮಿ ಹಾಗೂ ಕುಮಟಳ್ಳಿ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.. ಇದರ ಹೊರತಾಗಿಯೂ ಅನೇಕ ಶಾಸಕರು ಸಹ ತಮ್ಮ ಮುಖಂಡರ ಮೂಲಕ ಇನ್ನಿಲ್ಲದ ಲಾಬಿ ನಡೆಸುತ್ತಿದ್ದಾರೆ.

ಇಷ್ಟೆಲ್ಲಾ ಆಕಾಂಕ್ಷಿಗಳ ನಡುವೆ ಬಿ.ವೈ.ವಿಜಯೇಂದ್ರ ಹೆಸರೂ ಕೂಡ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿದೆ.. ಶತಾಗತಾಯ ಪುತ್ರನಿಗೆ ಅವಕಾಶ ಮಾಡಿ ಕೊಡ್ಲೇಬೇಕು ಅಂತ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ.. ಸಿಎಂ ಬೊಮ್ಮಾಯಿ ಗುರುವಿಗೆ ಕಾಣಿಕೆ ನೀಡಲು ಮುಕ್ತ ಮನಸ್ಸಿನಲ್ಲಿದ್ದಾರೆ.. ಆದ್ರೆ,ಬಿ.ಎಲ್.ಸಂತೋಷ್ ಹಾಗೂ ಕಟೀಲ್ ಸಮ್ಮತಿಸಿದ್ರೆ ಮಾತ್ರ ಹಾದಿ ಸುಗಮವಾಗಲಿದೆ.. ಇವರಿಬ್ಬರೂ ಒಪ್ಪಿದರ ಕೊನೆ ಕ್ಷಣದಲ್ಲಿ ವಿಜಯೇಂದ್ರ ಬೊಮ್ಮಾಯಿ ಸಂಪುಟ ಸೇರಿದ್ರೂ ಅಚ್ಚರಿಯಿಲ್ಲ..

ಒಟ್ಟಿನಲ್ಲಿ ಬೊಮ್ಮಾಯಿ ಸಂಪುಟ ಪುನಾರಚನೆಗೆ ಶಾಸಕರ ಒತ್ತಡ ಹೆಚ್ಚಿದ್ದು, ಇತ್ತ ಸಿಎಂ ಸಹ ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಎಲ್ಲದಕ್ಕೂ ದೆಹಲಿ ದೊರೆಗಳ ಸಮ್ಮತಿಯೇ ಫೈನಲ್..‌ ಹೀಗಾಗಿ ಅಮಿತ್ ಶಾ ರಾಜ್ಯ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ..

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES