Monday, December 23, 2024

ಮುಸ್ಲಿಂ ವ್ಯಾಪಾರ ಬಂದ್ ಬ್ಯಾನರ್; ಹೇಡಿಗಳು ಎಂದ ಖಾದರ್!

ಬೆಂಗಳೂರು: ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿಚಾರವಾಗಿ ವಿಧಾನಸಭೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಶೂನ್ಯವೇಳೆಯಲ್ಲಿ ಈ‌ ವಿಚಾರವನ್ನು ಪ್ರಸ್ತಾಪಿಸಿದ ಪ್ರತಿಪಕ್ಷದ ಉಪನಾಯಕ ಯು.ಟಿ ಖಾದರ್, “ಕೆಲವೊಂದು ಕಡೆ ಇತರ ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕುತ್ತಾರೆ ಇದು ಸರಿಯಲ್ಲ” ಎಂದರು.

“ಅವರ ಹೆಸರಿನಲ್ಲಿ ಹಾಕಲ್ಲ, ಅವರು ಹೇಡಿಗಳು ಹಾಗೂ ಕ್ರೂರ ಮನಸ್ಸಿನವರು. ಇದಕ್ಕೆ 95% ಯಾವ ಧರ್ಮದವ ಬೆಂಬಲ ಇಲ್ಲ” ಎಂದರು.ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ, ಸೋಮಶೇಖರ್, ರಘುಪತಿ ಭಟ್, ಸಿದ್ದು ಸವದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

“ಹಿಜಾಬ್ ವಿಚಾರವಾಗಿ ಹೈ ಕೋರ್ಟ್ ಆದೇಶ ಬಂದರೂ ಬಂದ್ ಮಾಡ್ತಾರೆ. ಖಾದರ್ ಅವರು ಬಳಸಿದ “ಹೇಡಿಗಳು” ಎಂಬ ಶಬ್ಧ ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು. “ಇಷ್ಟು ವರ್ಷ ಓಟ್ ಬ್ಯಾಂಕ್ ರಾಜಕೀಯ ಮಾಡಿದ್ದು ನೀವು, ನಾಚಿಕೆ ಆಗಬೇಕು” ಎಂದು ರೇಣುಕಾಚಾರ್ಯ ಗರಂ ಆದರು.

RELATED ARTICLES

Related Articles

TRENDING ARTICLES