Monday, December 23, 2024

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ

ಮೈಸೂರು: ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಬಟ್ಟೆ ಬ್ಯಾಗ್ ಖರೀದಿ ಹಗರಣ ಆರೋಪದಲ್ಲಿ ಸಂಕಷ್ಟ ಎದುರಾಗಿದ್ದು, ಹಗರಣದ ತನಿಖೆಗೆ ಸರ್ಕಾರದ ಆದೇಶ ಹೊರಡಿಸಿದೆ.

ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳ ಖರೀದಿಸಲು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೂರ್ವಾನುಮತಿ ಇಲ್ಲದೆ 14.71 ಲಕ್ಷ ಬ್ಯಾಗ್‌ಗಳ ಖರೀದಿ ಮಾಡಿರುವ ಆರೋಪವಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 10-13 ರೂ.ಗಳಿಗೆ ಸಿಗುವ ಪ್ರತಿ ಬ್ಯಾಗ್‌ಗೆ 52 ರೂ. ಕೊಟ್ಟು ಖರೀದಿ ಮಾಡಲಾಗಿತ್ತು. ಈ ಆರೋಪವನ್ನು ಮಾಜಿ ಸಚಿವ, ಜೆಡಿಎಸ್​ ಶಾಸಕ ಸಾ.ರಾ ಮಹೇಶ್​ ಅವರು ಮಾಡಿದ್ದರು.

ರೋಹಿಣಿ ಸಿಂಧೂರಿ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಿದ್ದಾರೆ ಎಂದು ಶಾಸಕ ಸಾ.ರಾ ಮಹೇಶ್ ಅವರು ಮಾಡಿದ್ದರು. ಜೊತೆಗೆ ಈ ಹಗರಣ ತನಿಖೆ ಆಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

RELATED ARTICLES

Related Articles

TRENDING ARTICLES