Thursday, January 23, 2025

ಮಹಿಳಾ ವಿಶ್ವಕಪ್; ಬಾಂಗ್ಲಾ ವಿರುದ್ಧ ಮಿಥಾಲಿ ಪಡೆ ಭರ್ಜರಿ ಗೆಲುವು

ಹ್ಯಾಮಿಲ್ಟನ್‌ನ ಸೆಡ್ಡಾನ್: 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಭಾರತ ಮಹಿಳಾ ತಂಡ ಇಂದು ಗೆಲ್ಲುವುದರೊಂದಿಗೆ ಸೆಮಿ ಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿತು.

ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮಿಥಾಲಿ ಪಡೆ ಮೊದಲು ಬ್ಯಾಟಿಂಗ್ ಮಾಡಿ 230 ರನ್ನುಗಳ ಗುರಿಯನ್ನು ನೀಡಿತ್ತು. ನಂತರ ಬ್ಯಾಟ್ ಮಾಡಿದ ಬಾಂಗ್ಲಾ ಬ್ಯಾಟರ್​ಗಳು ಭಾರತೀಯ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದರು. ಭಾರತದ ಸ್ಪಿನ್ ಬೌಲರ್ ಸ್ನೆಹ ರನ 30 ರನ್ ನೀಡಿ 4 ಅಮೂಲ್ಯ ವಿಕೆಟ್​ಗಳನ್ನು ಉರುಳಿಸುವುದರ ಮೂಲಕ ಬಾಂಗ್ಲಾ ಬ್ಯಾಟರ್​ಗಳ ಟೊಂಕ ಮುರಿದರು.

ಬಾಂಗ್ಲಾ ಬ್ಯಾಟರ್​​ಗಳು ಕೇವಲ 119 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಮಹಿಳಾ ತಂಡ ಬರೋಬ್ಬರಿ 110 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಆಡಿರುವ ಆರು ಪಂದ್ಯಗಳಲ್ಲಿ ತಲಾ ಮೂರರಲ್ಲಿ ಸೋಲು-ಗೆಲುವು ಕಂಡು ಅಂಕಪಟ್ಟಿಯಲ್ಲಿ 6 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿ ಸೆಮೀಸ್ ಕನಸು ಜೀವಂತವಾಗಿ ಉಳಿಸಿಕೊಂಡಿದೆ.

RELATED ARTICLES

Related Articles

TRENDING ARTICLES