Monday, December 23, 2024

ಪುನೀತ್​​ಗೆ​​​​ ಮರಣೋತ್ತರ ಗೌರವ ಡಾಕ್ಟರೇಟ್​​ ಪ್ರದಾನ : ಪತ್ನಿ ಅಶ್ವಿನಿ ಭಾವುಕ

ಬೆಂಗಳೂರು : ಮೈಸೂರು ವಿವಿಯಿಂದ ದಿವಂಗತ ನಟ ಪುನೀತ್ ರಾಜ್​​ಕುಮಾರ್​​​ಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್​​ ಪ್ರಧಾನ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂದು  (ಮಾರ್ಚ್ 22 ) 102ನೇ ಘಟಿಕೋತ್ಸವ ಸಮಾರಂಭ ನಡೆಯುತ್ತಿದ್ದು, ಈ ಬಾರಿ ಘಟಿಕೋತ್ಸವದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಅನ್ನು ಘೋಷಣೆ ಮಾಡಲಾಗಿತ್ತು.

ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕುಲಪತಿ ಪ್ರೊ. ಹೇಮಂತ್ ಕುಮಾರ್​​ರವರಿಂದ ಪುನೀತ್ ರಾಜ್‍ ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ವೇಳೆ ಅವರು ಕೆಲಕಾಲ ಭಾವುಕಗೊಂಡಿಲ್ಲದೇ,  ಸಭಾಂಗಣದಲ್ಲಿರುವ ಪ್ರತಿಯೊಬ್ಬರು ಭಾವುಕಗೊಂಡರು.

ಇನ್ನು  ಈ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು 46 ವರ್ಷಗಳ ಹಿಂದೆ ಮೈಸೂರು ವಿವಿ ನೀಡಿತ್ತು ಎಂಬುದು ಸ್ಮರಣೀಯ.

RELATED ARTICLES

Related Articles

TRENDING ARTICLES