ಚಿತ್ರದುರ್ಗ: ಚಳ್ಳಕೆರೆ HPPC ಕಾಲೇಜು ಪ್ರಯೋಗಾಲದಲ್ಲಿ ಬೃಹತ್ ಗಾತ್ರದ ಹಾವು ಪ್ರತ್ಯಕ್ಷವಾಗಿದ್ದನ್ನು ನೋಡಿ ಅಲ್ಲಿನ ಸಿಬ್ಬಂದಿ ವಿದ್ಯಾರ್ಥಿಗಳು ಹೌಹಾರಿದ ಪ್ರಕರಣ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ಪ್ರಯೋಗಾಲಯದ ಕೊಠಡಿಗೆ ಹಾವು ಹೊಕ್ಕಿತ್ತು.
ಹಾವು ಪ್ರತ್ಯಕ್ಷವಾಗಿದ್ದರಿಂದ ಕೆಲ ಕಾಲ ಕಾಲೇಜಿನ ಲ್ಯಾಬ್ ನಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಹೀಗೆ ಬಂದಿದ್ದ ಅನಪೇಕ್ಷಿತ ಅತಿಥಿಯನ್ನು ಉರಗರಕ್ಷಕ ಸ್ನೇಕ್ ಸ್ವಾಮಿ ಸೆರೆ ಹಿಡಿದಿದ್ದಾರೆ. ಹಾವು ಸೆರೆ ಹಿಡಿಯುತ್ತಿದ್ದಂತೆಯೇ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ ಸ್ನೇಕ್ ಸ್ವಾಮಿ.