Monday, January 6, 2025

ಅಂದು ಸಲಾಂ ರಾಕಿಭಾಯ್ ಇಂದು ತೂಫಾನ್ ಥ್ರಿಲ್

ಕೆಜಿಎಫ್ ರಿಲೀಸ್ ಆದ ಬರೋಬ್ಬರಿ ಮೂರು ವರ್ಷದ ಬಳಿಕ ಅದ್ರ ಸೀಕ್ವೆಲ್ ರಿಲೀಸ್​ಗೆ ಸಕಲ ತಯಾರಿ ನಡೆಯುತ್ತಿದೆ. ಮಾಸ್ಟರ್​ಮೈಂಡ್​ಗಳ ಮಾಸ್ಟರ್​ಪೀಸ್ ಸಿನಿಮಾ ಮೊದಲ ಭಾಗದ ಹತ್ತು ಪಟ್ಟು ಇಂಪ್ರೆಸ್ಸೀವ್ ಆಗಿರಲಿದ್ದು, ತೂಫಾನ್ ಬರೋ ಮನ್ಸೂಚನೆ ಕೊಟ್ಟಿದೆ. ರಾಕಿಭಾಯ್ ರಾಕಿಂಗ್​ ಎಂಟ್ರಿ ಕುರಿತ ಇನ್​ಸೈಡ್ ಸ್ಟೋರಿ ನೋಡಿ.

250 ಕೋಟಿ ಬಾಕ್ಸ್ ಆಫೀಸ್ ಇತಿಹಾಸ ಸೃಷ್ಠಿಸಿದ ಕೆಜಿಎಫ್ ಸಿನಿಮಾ, ವರ್ಲ್ಡ್​ ಸಿನಿದುನಿಯಾಗೆ ಕನ್ನಡ ಸಿನಿಮಾಗಳ ಗತ್ತು, ಕನ್ನಡ ಮೇಕರ್​ಗಳ ಗಮ್ಮತ್ತನ್ನು ಅರ್ಥೈಸಿತ್ತು. ಇದೀಗ ಎಲ್ಲೆಲ್ಲೂ ಕೆಜಿಎಫ್ ಭಾಗ ಎರಡರದ್ದೇ ಸದ್ದು ಗದ್ದಲ. ಪರಭಾಷಿಗರೂ ಸಹ, ಬಕಪಕ್ಷಿಗಳಂತೆ ರಾಕಿಭಾಯ್ ಸಾಮ್ರಾಜ್ಯವನ್ನು ಕಣ್ತುಂಬಿಕೊಳ್ಳೋಕೆ ಕಾತರರಾಗಿದ್ದಾರೆ.

ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ನಿರ್ಮಾಣದ ಹಾಗೂ ಪ್ರಶಾಂತ್ ನೀಲ್ ನಿರ್ದೇಶಕದ ಕೆಜಿಎಫ್ 2 ಟೀಸರ್ ಬರೋಬ್ಬರಿ 244 ಮಿಲಿಯನ್ ವೀವ್ಸ್​ನಿಂದ ಹಾಲಿವುಡ್ ಮಂದಿತ ನಿದ್ದೆಗೆಡಿಸಿದೆ. ಬಾಲಿವುಡ್ ಮಂದಿ ಅಂತೂ ಮೊದಲ ಭಾಗಕ್ಕೇ ದಂಗಾಗಿದ್ರು. ಇದೀಗ ಮಾನ್​ಸ್ಟರ್ ಡೈರೆಕ್ಟರ್, ಗ್ಯಾಂಗ್​ಸ್ಟರ್ ಌಕ್ಟರ್ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ.

ಕೊರೋನಾದಿಂದ ಲೇಟ್ ಆದ್ರೂ ಸಿಕ್ಕಾಪಟ್ಟೆ ಲೇಟೆಸ್ಟ್ ಆಗಿ ಬರಲಿದೆ ಕೆಜಿಎಫ್ 2. ಇದೇ ಏಪ್ರಿಲ್ 14ಕ್ಕೆ ವಿಶ್ವದಾದ್ಯಂತ ರಾಕಿಭಾಯ್ ಕಿಂಗ್​ಡಮ್ ದೊಡ್ಡ ಪರದೆ ಆವರಿಸಲಿದೆ. ಕೆಜಿಎಫ್ ಬಂದು ಮೂರು ವರ್ಷ ಕಳೆದ್ರೂ ಅದ್ರ ಕ್ರೇಜ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಇದೀಗ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಚಿತ್ರತಂಡ, ಪ್ರಮೋಷನಲ್ ಌಕ್ಟಿವಿಟೀಸ್​ನ ಜೋರಾಗಿ ಮಾಡ್ತಿದೆ.

ಮಾರ್ಚ್​ 27ಕ್ಕೆ ಕೆಜಿಎಫ್ ಸೀಕ್ವೆಲ್​ನ ಟ್ರೈಲರ್ ಲಾಂಚ್​ಗೆ ಮುಹೂರ್ತ ಫಿಕ್ಸ್ ಮಾಡಿದೆ ಟೀಂ. ಆದ್ರೆ ಅದಕ್ಕೂ ಮುನ್ನ ಆಲ್ಬಂನ ಫಸ್ಟ್ ಸಾಂಗ್​ನ ರಿವೀಲ್ ಮಾಡ್ತಿದೆ. ಅದೇ ತೂಫಾನ್ ಸಾಂಗ್. ಹೌದು.. ಇದು ಹೀರೋ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ರಾಕಿಭಾಯ್ ರಾಕಿಂಗ್ ಎಂಟ್ರಿ ತೂಫಾನ್ ರೇಂಜ್​ಗಿರಲಿದೆಯಂತೆ.

ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿರೋ ತೂಫಾನ್ ಸಾಂಗ್ ಕನ್ನಡದ ಜೊತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ ಆಗ್ತಿದೆ. ನರಾಚಿ ಸಾಮ್ರಾಜ್ಯದಲ್ಲಿ ಹುಡ್ಗರು ತೂಫಾನ್​ಗಾಗಿ ಎದುರು ನೋಡ್ತಿರೋ ಸ್ಟಿಲ್ ಫೋಟೋನೇ ಅತೀವ ನಿರೀಕ್ಷೆ ಮೂಡಿಸಿದೆ. ಇದೇ ಮಾರ್ಚ್​ 21ರ ಬೆಳಗ್ಗೆ 11.7ಕ್ಕೆ ಈ ಸಾಂಗ್ ಲಾಂಚ್ ಆಗ್ತಿದ್ದು, ಮ್ಯೂಸಿಕ್ ಮಾಂತ್ರಿಕ ಬಸ್ರೂರ್ ಈ ಬಾರಿ ಯಾವ ಬಗೆಯ ಟ್ಯೂನ್ಸ್​ನಿಂದ ಹಾವಳಿ ಇಡ್ತಾರೆ ಅನ್ನೋದು ಕಾದು ನೋಡಬೇಕಿದೆ.

ಸಂಜಯ್ ದತ್, ರವೀನಾ ಟಂಡನ್, ವಸಿಷ್ಠ ಸಿಂಹ, ಪ್ರಕಾಶ್ ರೈ, ರಾವು ರಮೇಶ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಹೀಗೆ ಬಹುದೊಡ್ಡ ತಾರಾಗಣವಿರೋ ಕೆಜಿಎಫ್ 2, ಈ ಬಾರಿ ಸಾವಿರ ಕೋಟಿ ದೋಚಿದ್ರೂ ಅಚ್ಚರಿಯಿಲ್ಲ. ಕಾರಣ ಕೆಜಿಎಫ್ ಚಿತ್ರಕ್ಕಿಂತ ಹತ್ತು ಪಟ್ಟು ಜೋರಿರಲಿದೆಯಂತೆ ಈ ಬಾರಿಯ ಸೀಕ್ವೆಲ್ ಗೈರತ್ತು. ಒಟ್ಟಾರೆ ನೀಲ್- ರಾಕಿಭಾಯ್ ಈ ಬಾರಿಯೂ ಕಮಾಲ್ ಮಾಡೋದ್ರಲ್ಲಿ ಡೌಟೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES