Monday, December 23, 2024

ಹೈಕೋರ್ಟ್ ತೀರ್ಪಿನ ನಂತರವೂ ಮುಂದುವರಿದ ಹಿಜಾಬ್ ಗದ್ದಲ

ನಿನ್ನೆಯ ವಿಧಾನಸಭೆ ಕಲಾಪದಲ್ಲಿ ಹಿಜಾಬ್ ಸಂಘರ್ಷ ವಿಚಾರ ಪ್ರತಿಧ್ವನಿಸಿತು. ಹೈಕೋರ್ಟ್ ಸಮವಸ್ತ್ರ ಕಡ್ಡಾಯಮಾಡಿದ್ರೂ ಪ್ರತಿಭಟನೆಗಳು ಮುಂದುವರೆದಿವೆ. ಹೀಗಾಗಿ ಗದ್ದಲವೆಬ್ಬಿಸುವವರ ಮೇಲೆ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ರವಾನಿಸಿದೆ. ಇದ್ರ ಜೊತೆ ಸದನದಲ್ಲಿ ಕೆಲವು ಗಂಭೀರ ವಿಷಯಗಳೂ ಪ್ರಸ್ತಾಪವಾದ್ವು.

ಕೋರ್ಟ್ ತೀರ್ಪಿನ ನಂತರವೂ ಹಿಜಾಬ್ ಗದ್ದಲ ಮುಂದುವರಿದಿದೆ. ಇದ್ರ ಬಗ್ಗೆ ವಿಧಾನ‌ಸಭೆಯ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲಾಯಿತು. ಬಿಜೆಪಿ ಶಾಸಕ ರಘುಪತಿ ಭಟ್ ತೀರ್ಪು ಪ್ರಶ್ನಿಸಿ ಪ್ರತಿಭಟಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಿ, ಪರೀಕ್ಷೆ ತಪ್ಪಿಸಿಕೊಂಡಿರುವ ಮಕ್ಕಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಬೇಡಿಕೆ ಇಟ್ರು. ಇದಕ್ಕೆ ಪೂರಕವಾಗಿ ಜಗದೀಶ್ ಶೆಟ್ಟರ್ ಕೂಡ ಧ್ವನಿಗೂಡಿಸಿದ್ರು. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದು ಬಿಟ್ಟು ಈ ರೀತಿ ಬೀದಿಗಿಳಿಯುವುದು ಸರಿಯಲ್ಲ ಅಂತ ಅಸಮಾಧಾನ ಹೊರಹಾಕಿದ್ರು.

ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ ನ್ಯಾಯಾಲಯಕ್ಕೆ ಅಗೌರವ ತೋರಿಸಬೇಕೆಂಬ ಕಾರಣಕ್ಕೆ ಬಂದ್ ಕರೆದಿಲ್ಲ. ಪ್ರತಿಭಟಿಸುವುದು ಸಂವಿಧಾನದ ಹಕ್ಕು, ಶಾಂತಿಯುತವಾಗಿ ಮಾಡಿದರೆ ಅದಕ್ಕೆ ಸಮಸ್ಯೆಯೇನಿಲ್ಲ ಅಂತ ಸಮರ್ಥಿಸುವ ಪ್ರಯತ್ನ ಮಾಡಿದ್ರು. ಇನ್ನು ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ ಮಧ್ಯಂತರ ತೀರ್ಪು ಬರುವ ಮುನ್ನ ಯಾವ ಮಕ್ಕಳು ಅರಿಯದೆ ಇದಕ್ಕೆ ಬಂದಿದ್ದಾರೋ ಅಂತವರಿಗೆ ಪರೀಕ್ಷೆಗೆ ಅವಕಾಶ ಮಾಡಿಕೊಡ್ತೇವೆ. ತೀರ್ಪಿನ ನಂತರವೂ ಗದ್ದಲ ಮಾಡಿದವರಿಗೆ ಅವಕಾಶ ಕೊಡುವುದು ಸಾಧ್ಯವಿಲ್ಲ ಅಂತ ಕಡ್ಡಿತುಂಡು ಮಾಡಿದಂತೆ ಹೇಳಿದ್ರು.

ಇನ್ನು ಇತ್ತೀಚೆಗೆ ಕೃಷಿಯಲ್ಲೂ ಆಧುನಿಕ ಯಂತ್ರೋಪಕರಣಗಳು ಬಳೆಕಯಾಗ್ತಿವೆ. ಕಟಾವು ಮಾಡಿ ಬೀಜ ಬೇರ್ಪಡಿಸುವ ಕೆಲಸಗಳನ್ನ ಯಂತ್ರಗಳು ಮಾಡ್ತಿವೆ. ಆದ್ರೆ, ಯಂತ್ರಗಳ ಬಳಕೆ ಗೊತ್ತಿಲ್ಲದೆ ರೈತರು ಸಾವನ್ನಪ್ಪುವ ಸಂಖ್ಯೆ ಬೀದರ್,ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿದೆ ಅಂತ ಸದನದಲ್ಲಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಆತಂಕ ವ್ಯಕ್ತಪಡಿಸಿದ್ರು. ಈ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಶಿಯಂತ್ರಗಳಿಗೆ ಸಿಲುಕಿ ಸಾವನ್ನಪ್ಪಿದರೆ ಪರಿಹಾರ ಇಲ್ಲ. ಆದ್ರೂ ಸಿಎಂ ಜೊತೆ ಚರ್ಚಿಸಿ ಪರಿಹಾರ ಕೊಡಿಸುವ ಪ್ರಯತ್ನ ಮಾಡ್ತೇನೆಂದು ಉತ್ತರಿಸಿದ್ರು..

ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರದಲ್ಲಿ ದಲಿತರೇ ಹೆಚ್ಚಿದ್ದಾರೆ..ಅವರ ಅಭಿವೃದ್ಧಿಗೆ ಐಟಿಐ ಕಾಲೇಜೊಂದನ್ನ ನೀಡಿ ಅಂತ  ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸರ್ಕಾರವನ್ನ ಒತ್ತಾಯಿಸಿದ್ರು. ಈ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಈಗಾಗಲೇ ರಾಜ್ಯದಲ್ಲಿ ೨೭೫ ಐಟಿಐ ಕಾಲೇಜುಗಳಿವೆ..ಇವುಗಳಿಗೆ ವಿದ್ಯಾರ್ಥಿಗಳು ದಾಖಲಾಗೋದು ಕಡಿಮೆಯಿದೆ. ಅಲ್ಲದೆ ಐಟಿಐ ಕಾಲೇಜು ಹೊಸದಾಗಿ ಕೊಡಬೇಕಾದರೆ ೨ ಎಕರೆ ಜಮೀನು ಇರ್ಬೇಕು..ಹಾಗಾಗಿ ಜಮೀನಿಲ್ಲದೆ ನಿಮಗೆ ಕೊಡಲು ಬರಲ್ಲ ಅಂದ್ರು..ಅದಕ್ಕೆ ಪ್ರತಿಯಾಗಿ ಸರ್ಕಾರಿ ಶಾಲೆ ಬಳಿ ಒಟ್ಟು ೫ ಎಕರೆ ಇದೆ. ಅದ್ರಲ್ಲಿ ಎರಡೂವರೆ ಎಕರೆ ಭೂಮಿ ಇದೆ ಕೊಡಿ ಎಂದು ಆಗ್ರಹಿಸಿದ್ರು..ಅಖಂಡ ಮಾತಿಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪರಿಶೀಲಿಸುವ ಭರವಸೆ ನೀಡಿದ್ರು.

ಪುನೀತ್ ರಾಜ್‌ಕುಮಾರ್‌ ಹುಟ್ಟುಹಬ್ವವಾಗಿದ್ದರಿಂದ ವಿಧಾನ ಸಭೆಯಲ್ಲಿ ಸಹ ಪವರ್ ಸ್ಟಾರ್ ಸದ್ದು ಮಾಡಿದ್ರು..‌ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಪುನೀತ್ ರಾಜ್‍ಕುಮಾರ್‌ಗೆ ಶುಭಾಶಯಗಳನ್ನು ತಿಳಿಸಿದ್ರು.

ಬಸವರಾಜ್, ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES