ಚಾಮರಾಜನಗರ: ಎಲ್ಲಾ ಮುಸ್ಲಿಂರು ಕೆಟ್ಟವರಲ್ಲ, ಎಲ್ಲಾ ಹಿಂದೂಗಳು ಒಳ್ಳೆಯವರೂ ಅಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿಂದು ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಿಸದವರು ದೇಶದ್ರೋಹಿಗಳು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಹಿ ಘಟನೆಗಳನ್ನು ಮರೆಯಬೇಕು, ನಾವೆಲ್ಲಾ ಒಟ್ಟಾಗಿ ಹೋಗಬೇಕು. ಹಳೇಯ ಕಹಿ ಘಟನೆಗಳು ಮರುಕಳಿಸಬಾರದು ಎಂದು ಚಿತ್ರ ನಿರ್ಮಾಣ ಮಾಡಲಾಗಿದೆ, ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲಾ ಎಂದರು.
ಇನ್ನು ನಾನೂ ಕೂಡ ಮುಸ್ಲಿಂರನ್ನು ಚಲನಚಿತ್ರಗಳಿಗೆ ಕರೆದುಕೊಂಡು ಹೋಗ್ತಾ ಇರ್ತೀನಿ. ಎಲ್ಲಾ ಮುಸ್ಲಿಂರು ಕೆಟ್ಟವರಲ್ಲ- ಎಲ್ಲಾ ಹಿಂದೂಗಳು ಒಳ್ಳೆಯವರಲ್ಲ ಎಂದು ನುಡಿದರು.
ಇನ್ನು ಫ್ಯಾಮಿಲಿ ಪಾಲಿಟಿಕ್ಸ್ ಬ್ರೇಕ್ ಹಾಕುವ ಮೋದಿ ಚಿಂತನೆಗೆ ಪ್ರತಿಕ್ರಿಯಿಸಿ, ರಾಜಕಾರಣವನ್ನೇ ಹೆಚ್ಚು ನೆಚ್ಚಿಕೊಂಡಿಲ್ಲ, ನನ್ನ ಮಗನ ಹಣೆಬರಹದಲ್ಲಿ ಬ್ರಹ್ಮ ಬರೆದಿದ್ದರೇ ಎಂಎಲ್ಎ ಆಗುತ್ತಾನೆ. ಇಲ್ಲದಿದ್ದರೇ ಇಲ್ಲ. ಆದರೆ, ಮೋದಿ ರೀತಿಯ ನಾಯಕರನ್ನು ಪಡೆದಿದ್ದಕ್ಕೇ ನಾವೆಲ್ಲರೂ ಹೆಮ್ಮೆ ಪಡಬೇಕೆಂದು ಎಂದರು. ಇದೇ ವೇಳೆ, ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಜಾರಿ ಚಿಂತನೆ ಬಗ್ಗೆ ಪ್ರತಿಕ್ರಿಯಿಸಿ, ತಾನಿನ್ನೂ ಆ ವಿಚಾರದಲ್ಲಿ ಎಲ್ ಬೋರ್ಡ್, ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದರು.