Monday, December 23, 2024

ಅಪ್ಪು ಅಭಿಮಾನಿಯಿಂದ ಉಚಿತ ಹೇರ್​ಕಟಿಂಗ್

ನಾಲತವಾಡ:ಅಭಿಮಾನಿಗಳಿಗೆ ಇಂದು ಅಪ್ಪು ಹುಟ್ಟುಹಬ್ಬದ ಸಂಭ್ರಮ. ಜೊತೆಗೆ ಜೇಮ್ಸ್ ಬಿಡುಗಡೆಯ ಸಂಭ್ರಮ. ಈ ಸಂಭ್ರಮವನ್ನು ಎಲ್ಲಾ ವಯೋಮಾನದವರೂ ತಮ್ಮ ತಮ್ಮ ಇಷ್ಟಕ್ಕನುಸಾರವಾಗಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಗುಬ್ಬಿಯ ಅಜ್ಜಿ ಪುರಿ ಬತ್ತಾಸಿನಲ್ಲಿ ಹಾರ ಮಾಡಿ ತಂದರೆ, ನಾಲತವಾಡದ ಅಭಿಮಾನಿಯೊಬ್ಬ ಅಪ್ಪು ಅಭಿಮಾನಕ್ಕಾಗಿ ಒಂದಿಡೀ ದಿನ ಉಚಿತ ಹೇರ್​ಕಟಿಂಗ್ ಮಾಡುತ್ತಿದ್ದಾರೆ.

ಹೌದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಅಪ್ಪು ಅಭಿಮಾನಿ, ಅಪ್ಪು ಹೇರ ಸಲೂನ ಮಾಲೀಕ ಪ್ರಕಾಶ ಶಹಾಪೂರ ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ಫ್ರೀ ಹೇರ ಕಟಿಂಗ ಕೈಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು “ನಾನು ಅಪ್ಪು ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ. ಅವರನ್ನು ಜೀವಿತ ಅವಧಿಯಲ್ಲಿ ಭೇಟಿ ಮಾಡಬೇಕೆಂಬ ನನ್ನ ಕನಸಾಗಿತ್ತು. ಆದರೆ ಅವರನ್ನು ಭೇಟಿ ಮಾಡಲು ಆಗಿಲ್ಲ. ಆ ನೋವು ನನ್ನ ಜೀವನದುದ್ದಕ್ಕೂ ಇರುತ್ತದೆ” ಎಂದು ಭಾವುಕವಾಗಿ ಹೇಳಿದ್ದಾರೆ. ಉಚಿತ ಹೇರ್ ಕಟಿಂಗ್ ಸೇವೆ ಪಡೆಯಲು ಮಕ್ಕಳು ಹಾಗೂ ಯುವಕರು ಬೆಳಗ್ಗೆಯಿಂದಲೆ ಅಂಗಡಿಯ ಮುಂದೇ ಸರತಿಯಿಂದ ಕುಳಿತ ದೃಶ್ಯ ಕಂಡು ಬಂತು.

RELATED ARTICLES

Related Articles

TRENDING ARTICLES