Monday, December 23, 2024

ಕಾಶ್ಮೀರ್ ಫೈಲ್ಸ್; ಸತ್ಯದ ಬಗ್ಗೆ ಪ್ರಧಾನಿ ಕಾಳಜಿ! ವಿರೋಧಿ ಸಿನಿಮಾಗಳಿಗೂ ಅನ್ವಯಿಸುವುದೆ?

“ಸತ್ಯವನ್ನು ನಿಜವಾದ ರೂಪದಲ್ಲಿ ದೇಶದ ಮುಂದೆ ತರುವುದರಿಂದ ದೇಶಕ್ಕೆ ಒಳಿತಾಗುತ್ತದೆ” ಹೀಗೆಂದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದ ಕಾಶ್ಮೀರ್ ಫೈಲ್ಸ್ ಎಂಬ ಚಿತ್ರದ ಬಗ್ಗೆ ಹೇಳಿದ್ದಾರೆ ಎಂದು ಹಿರಿಯ ನಟ ಅನುಪಮ್​ಖೇರ್ ಟ್ವೀಟ್ ಮಾಡಿ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ. ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಕೋಮುಭಾವನೆಯನ್ನು ಕೆರಳಿಸುವ ಚಿತ್ರವನ್ನು ಈ ಪರಿ ಹೊಗಳಿ ಅದನ್ನು ಜನರ ಮನದಲ್ಲಿ ತೂರಿಸಲು ಪ್ರಯತ್ನಿಸುವುದು ಎನ್ನುವುದರಲ್ಲಿ ಸಂಶಯವಿಲ್ಲ.

ಬಾಲಿವುಡ್ ಅಥವ ಭಾರತದ ಇತರೇ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಇದುವರೆಗೂ ಬಂದಿರುವ ಹಲವು ಚಿತ್ರಗಳ ಬಗ್ಗೆ ಬಹುಶಃ ಪ್ರಧಾನಿ ಮೋದಿಯವರಿಗೆ ತಿಳಿದಿಲ್ಲವೆನಿಸುತ್ತದೆ. ಅಂಥ ಹಲವು ಚಿತ್ರಗಳು ಸತ್ಯದ ನಿಜವಾದ ರೂಪವನ್ನು ದೇಶದ ಮುಂದೆ ಇರಿಸಿದ್ದವು ಆದರೆ ವ್ಯತ್ಯಾಸವೆಂದರೆ ಅವು ಆಡಳಿತದಲ್ಲಿನ ದೋಷಗಳನ್ನು ಎತ್ತಿ ತೋರಿಸಿದ್ದವು. ಅವುಗಳ ಒಂದು ಪಟ್ಟಿಯನ್ನು ಪ್ರಧಾನಿಯವರಿಗೆ ಕೊಟ್ಟು ಅವೆಲ್ಲವುಗಳನ್ನು ಜನರಿಗೆ ನೋಡಲು ಹೇಳಿ ಎಂದರೆ ಅದರಿಂದ ಆ ಅದ್ಭುತ ಚಿತ್ರಗಳು ಜನರಿಗೆ ತಲುಪುವಂತೆಯೂ ಆಗುತ್ತದೆ ಜೊತೆಗೆ ಸರ್ಕಾರದ ವೈಫಲ್ಯಗಳನ್ನು ಜನ ಅರಿತಂತೆಯೂ ಆಗುತ್ತದೆ. ಅದಕ್ಕೆ ಕರ್ನಾಟಕದ ಸದನದಲ್ಲಿ ಈ ಚಿತ್ರವನ್ನು ತೋರಿಸುವುದರ ವಿರುದ್ಧ ಕಾಂಗ್ರೆಸ್ ಸದಸ್ಯ ಹಾಗಾದರೆ ಇದರೆ ಜೊತೆಗೆ ವಾಟರ್ ಚಿತ್ರವನ್ನೂ ತೋರಿಸಲಿ ಎಂದಿದ್ದು.

ಆರ್ಟಿಕಲ್ 371 ತರುವಾಗ ಕೇಂದ್ರ ಸರಕಾರ ಒಂದು ವರ್ಷಗಳ ಕಾಲ ಕಾಶ್ಮೀರದಲ್ಲಿ ಮಾಧ್ಯಮವೂ ಸೇರಿದಂತೆ ವಿರೋಧ ಪಕ್ಷಗಳು, ಮಾನವ ಹಕ್ಕು ಕಾರ್ಯಕರ್ತರು ಹೀಗೆ ಎಲ್ಲರನ್ನೂ ನಿರ್ಭಂಧಿಸಿತ್ತು. ಈ ಸಮಯದಲ್ಲಿ ಬಿಬಿಸಿ ತೋರಿಸಿದ ಹಲವು ವರದಿಗಳಲ್ಲಿ ಹಾಗೂ ಅಲ್ಲಿನ ಸ್ಥಳೀಯ ಪತ್ರಕರ್ತರು ನಿರ್ಭಂಧದ ನಡುವೆಯೂ ಕಷ್ಟಪಟ್ಟು ಮಾಡಿದ ವರದಿಗಳನ್ನು ಆಧರಿಸಿ ಹೇಳುವುದಾದರೆ ಅಲ್ಲಿ ಆ ಸಮಯದಲ್ಲಿ ಬಹಳಷ್ಟು ದೌರ್ಜನ್ಯಗಳು ನಾಗರಿಕರ ಮೇಲೆ ನಡೆದವು. ಪ್ರತಿದಿನ ದುಡಿದು ತಿನ್ನುವಂಥ ಬಡ ಕೂಲಿಕರರ ಬವಣೆ ಆ ಸಮಯದಲ್ಲಿ ಹೇಳಲಾರದಂತಿತ್ತು. ಇವುಗಳನ್ನೆಲ್ಲ ಮತ್ತೊಂದು ಕಾಶ್ಮೀರ ಫೈಲ್​ನಲ್ಲಿ ಫಿಲಂ ಮಾಡಿದರೆ ನಮ್ಮ ಪ್ರಧಾನಿಗಳು ಆ ಸತ್ಯವನ್ನೂ ಒಪ್ಪಿ ಇದೇ ರೀತಿ ಅದನ್ನು ದೇಶದ ಮುಂದೆ ತಂದಿದ್ದಕ್ಕಾಗಿ ಅಭಿನಂದಿಸುತ್ತಾರೆಯೇ?

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES