Monday, December 23, 2024

ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಅಗತ್ಯ : ಯು ಟಿ ಖಾದರ್

ಬೆಂಗಳೂರು : ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆಗೆ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಗೆ ವಿಪಕ್ಷ ಉಪನಾಯಕ ಯು ಟಿ ಖಾದರ್ ಆಗ್ರಹಿಸಿದರು.

ಅನೇಕ ವರ್ಷಗಳಿಂದ ಕೆಲ ಘಟನೆಗಳು ಯಾವ ಸಂದೇಶ ನೀಡಿವೆ ಅಂತ ಎಲ್ಲರೂ ಯೋಚನೆ ಮಾಡಬೇಕು. ರಾಜ್ಯದ ಖ್ಯಾತಿ ಈ ಘಟನೆಗಳಿಂದ ಬದಲಾಗುವ ಆತಂಕ ಇದೆ. ಕಾನೂನು ಸುವ್ಯವಸ್ಥೆ ಸರಿ ಇದ್ರೆ ಮಾತ್ರ ಆ ಪ್ರದೇಶ ಸರಿ ಇರುತ್ತೆ. ಹಲವು ಘಟನೆಗಳನ್ನು ನಾವು ನೋಡಿದ್ದೀವಿ. ರಾಜ್ಯದಲ್ಲಿ ಮಕ್ಕಳು, ಹಿರಿಯರಿಗೆ ವೃದ್ಧರಿಗೆ ನೆಮ್ಮದಿಯ, ಧೈರ್ಯದ ವಾತಾವರಣ ಇಲ್ಲ. ಹಾಗಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES