ಬೆಂಗಳೂರು : ಹಿಂದೂಗಳು ಸೆರಗನ್ನ ಮೈಮೇಲೆ ಹಾಕುತ್ತಾರೆ, ಮುಸ್ಲಿಂ ಹೆಣ್ಣುಮಕ್ಕಳು ತಲೆಮೇಲೆ ಹಾಕುತ್ತಾರೆ ಅಷ್ಟೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೈಕೋರ್ಟ್ ಜಡ್ಜ್ ಮೆಂಟ್ ಬಂದಿರುವ ಹಿನ್ನಲೆ ನಗರದಲ್ಲಿಂದು ಮಾತನಾಡಿದ ಅವರು ಮೂಲಭೂತವಾಗಿ ಧರ್ಮಕ್ಕೆ ಹಿಜಾಬ್ ಇಂದ ಯಾವುದೇ ಅಡಚಣೆ ಇಲ್ಲ ಎಂದಿದೆ.
ಸುಪ್ರೀಂಗೆ ಹೋಗುವುದರ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಸಮಾಜದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದನ್ನ ಧರ್ಮದ ದೃಷ್ಟಿಯಿಂದ ನೋಡಬಾರದು, ಸಂವಿಧಾನದ ದೃಷ್ಠಿಯಿಂದ ನೋಡಬೇಕು. ಹೆಣ್ಣುಮಗಳು ತಿಲಕ,ವಿಭೂತಿ ಇಡುವುದು ಧರ್ಮದಲ್ಲಿಲ್ಲ ಆದರೆ ಅದು ನನಗೆ ಇಡಬೇಕೆಂಬ ಇಷ್ಟವಿದೆ ನೀವು ಬೇಡ ಅನ್ನೋಕೆ ಸಾಧ್ಯವೇ ಇದರ ಬಗ್ಗೆ ಸುಪ್ರೀಂನಲ್ಲಿ ಚಾಲೆಂಜ್ ಹಾಕಬೇಕಾಗಿದೆ.
ಇನ್ನು ತಾಯಂದಿರು ಸೆರಗು ಹಾಕುವುದು ತಪ್ಪೇ, ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆಯಿಲ್ಲ ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಹಾಗಾಗಿ ನಾವು ಸುಪ್ರೀಂಗೆ ಹೋಗುವುದಕ್ಕೆ ಅವಕಾಶವಿದೆ ಹೋಗುತ್ತೇವೆ. ಲಾಯರ್ ಮಜೀದ್ ಮೆಮನ್ ಬಾಂಬೆಯವರು ಅವರ ಜೊತೆಯೂ ನಾನು ಚರ್ಚೆ ಮಾಡಿದ್ದೇನೆ ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡ್ತಿದ್ದೇವೆ ಎಂದರು. ರಾಜ್ಯದಲ್ಲಿ ಶಾಂತಿ ಕಾಪಾಡುವುದಕ್ಕೆ ನೋಡ್ತಿದ್ದೇವೆ ಸರ್ಕಾರದ ತೀರ್ಮಾನ ಏನು ಎಂಬುದು ಸ್ಪಷ್ಟಪಡಿಸಬೇಕಾಗಿದೆ ಅಲ್ಲದೇ ಇದು ಇಲ್ಲಿಗೆ ನಿಲ್ಲುವುದಿಲ್ಲ ನಾಳೆ ಜೀನ್ಸ್,ಬೇರೆ ಉಡುಪಿನ ಬಗ್ಗೆಯೂ ಚರ್ಚೆಯಾಗಬಹುದು ಅದಕ್ಕೆ ನಾವು ಸುಪ್ರೀಂಕೋರ್ಟ್ ಗೆ ಹೋಗ್ತೇವೆ ಎಂದು ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.