Saturday, December 28, 2024

ತಾಜ್ ಹೋಟೆಲ್​ನಲ್ಲಿ ಹೆಚ್​ಡಿಕೆ ರಾಸಲೀಲೆಯಾಡಿಕೊಂಡಿದ್ದರು: ಸಿ.ಪಿ.ಯೋಗೇಶ್ವರ್

ರಾಮನಗರ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗಿಶ್ವರ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಈ ಹೇಳಿಕೆ ನೀಡಿರುವ ಸಿಪಿವೈ “ಹೆಚ್.ಡಿ.ಕೆ 14 ತಿಂಗಳು ಸಿಎಂ ಆಗಿದ್ದ ವೇಳೆ ರಾಸಲೀಲೆ ಆಡಿಕೊಂಡಿದ್ದರು, ಹೆಚ್​ಡಿಕೆ ಈ ರೀತಿ ರಾಸಲೀಲೆಯಾಡಿದ್ದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ” ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದ ವೇಳೆ ಚನ್ನಪಟ್ಟಣಕ್ಕೆ ಬರ್ತಿರಲಿಲ್ಲ. ಆದರೆ ಈಗ ಮಾತ್ರ ಚನ್ನಪಟ್ಟಣ ತಾಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು ನಾಟಕ ಮಾಡ್ತಿದ್ದಾರೆ ಎಂದು ಹೇಳಿದ ಸಿಪಿವೈ ಮುಂದುವರೆದು ನನ್ನಿಂದ ಯಾಕೆ ಹೆಚ್​ಡಿಕೆ ಅಣಿಮುತ್ತುಗಳನ್ನು ಕೇಳುತ್ತೀರಾ.. ಅವರನ್ನು ನೇರಾನೇರ ನನ್ನ ಮುಂದೆ ಕೂರಿಸಿ. ವೈಯುಕ್ತಿಕ ಮತ್ತು ಸಾರ್ವಜನಿಕ ವಿಷಯಗಳನ್ನು ಬಹಿರಂಗವಾಗಿ ಮಾತಾಡೋಣ. ಹೆಚ್​ಡಿಕೆ ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ನನ್ನ ಬಗ್ಗೆ ಏಕವಚನದಲ್ಲಿ ಮಾತಾಡಿದ್ರೆ ನಾನೂ ಕೂಡ ಏಕವಚನದಲ್ಲಿ ಮಾತಾಡ್ತೀನಿ. ರಾಸಲೀಲೆ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿ, ಅವರು ಹೇಳದಿದ್ರೆ ನಾನು ಹೇಳ್ತೀನಿ ಎಂದು ಹೆಚ್​ಡಿಕೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

RELATED ARTICLES

Related Articles

TRENDING ARTICLES