ಬೆಂಗಳೂರು : ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮಹಿಳಾ ಆಯೋಗದಲ್ಲಿ ಕೌಟುಂಬಿಕ ದೌರ್ಜನ್ಯಗಳ ದೂರುಗಳ ಸಂಖ್ಯೆ ಹೆಚ್ಚಾಗುತ್ತಿವೆ.
ನಗರ ಪ್ರದೇಶಕ್ಕೆ ಹೋಲಿಸಿದರೆ, ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ವರದಿ ಹೆಚ್ಚಾಗಿ ಕಂಡು ಬರುತ್ತಿವೆ. ನಗರ ಪ್ರದೇಶದಲ್ಲಿ ಲಿವಿಂಗ್ ರಿಲೇಷನ್ ಶಿಪ್, ಲವ್ ಅಫೆರ್, ಸೈಬರ್ ಕ್ರೈಂ ನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಎರಡು ವರ್ಷದಿಂದ ಇಲ್ಲಿಯವರೆಗೆ 4,692 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 1,890 ಪ್ರಕರಣಗಳು ಇತ್ಯರ್ಥವಾಗಿ ಮುಕ್ತಾಯವಾಗಿವೆ. 2,802 ಪ್ರಕರಣಗಳು ಚಾಲ್ತಿಯಲ್ಲಿವೆ. ಇದರಲ್ಲಿ ಮಹಿಳಾ ಆಯೋಗಕ್ಕೆ ರಕ್ಷಣೆ ಕೋರಿ ಬಂದವರು ಹೆಚ್ಚಿದ್ದಾರೆ. ಈ ಪ್ರಕರಣದಲ್ಲಿ ಆಸ್ತಿ ವಿವಾದದಿಂದ ಹಿಡಿದು ಕೆಲಸದ ಸ್ಥಳದಲ್ಲಿ ಕಿರುಕಳ ಆದಾಗ ರಕ್ಷಣೆಗಾಗಿ ಬಂದಿರುವ ಮಹಿಳೆಯರು ಇದ್ದಾರೆ.
ಯಾವ್ಯಾವ ಪ್ರಕರಣಗಳು ಎಷ್ಟೆಷ್ಟು?
ಪ್ರಕರಣ- ಸ್ವೀಕೃತಿ- ಮುಕ್ತಾಯ- ಚಾಲ್ತಿ
1) ಕೌಟುಂಬಿಕ ದೌರ್ಜನ್ಯ- 1070-330-740
2) ರಕ್ಷಣೆ- 1337-736-601
3) ವರದಕ್ಷಿಣಿ ಕಿರುಕುಳ- 227-41-186
4) ಲೈಂಗಿಕ ಕಿರುಕುಳ- 62- 17- 45
5) ಕೆಲಸದ ಸ್ಥಳದಲ್ಲಿ ಕಿರುಕುಳ- 200-34-166
6) ಪ್ರೇಮ ಪ್ರಕರಣ- 77-19-58
7) ಆಸ್ತಿ ವಿವಾದ- 160-82-78
8) ಪೊಲೀಸ್ ದೌರ್ಜನ್ಯ- 154-39-115
9) ಹಣ ವಂಚನೆ- 91-56-35
10) ಇತರೆ- 1230-515-715