Wednesday, January 22, 2025

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ..!

ಬೆಂಗಳೂರು : ವಿಧಾನಸಭೆ ಕಲಾಪ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಮೇಲೆಯೇ ಕೇಂದ್ರೀಕೃತವಾಯ್ತು. ಬಜೆಟ್ ಮೇಲಿನ ಚರ್ಚೆಗಿಂತ ಮುಂದಿನ ಚುನಾವಣೆಯಲ್ಲಿ ಗೆಲ್ಲೋರ್ಯಾರು..? ಅಧಿಕಾರ ಹಿಡಿಯೋರ್ಯಾರು ಎಂಬುದರ ಚರ್ಚೆಯೇ ಜೊರಾಗಿತ್ತು. ಜೊತೆಗೆ ಯಡಿಯೂರಪ್ಪ- ಸಿದ್ದರಾಮಯ್ಯ ಜುಗಲ್ಬಂದಿ ಎಲ್ಲರ ಗಮನ ಸೆಳೆಯಿತು.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಅದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗಿಂತ ಪಂಚರಾಜ್ಯ ಚುನಾವಣೆ ಫಲಿತಾಂಶದ ಚರ್ಚೆಯೇ ಜೋರಾಯ್ತು. ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಎಸ್‌ವೈ ಕಾಂಗ್ರೆಸ್ ನಾಯಕರನ್ನ ಕೆಣಕುವ ಪ್ರಯತ್ನ ಮಾಡಿದ್ರು. ಕಾಂಗ್ರೆಸ್ ನಾಯಕರು ಮುಂದೆ ಅಧಿಕಾರಕ್ಕೆ ಬರ್ತೇವೆಂಬ ಭ್ರಮೆಯಲ್ಲಿದ್ದೀರಾ. ಮೊದಲು ನಿಮ್ಮ ಭ್ರಮೆಯಿಂದ ಹೊರಬನ್ನಿ. ನಿಮ್ಮ ಭ್ರಮೆಯನ್ನ ನಾವು ಹುಸಿಮಾಡ್ತೇವೆ. ಪಂಚರಾಜ್ಯ ಚುನಾವಣೆ ಫಲಿತಾಂಶ ನಮಗೆ ಹುಮ್ಮಸ್ಸು ಕೊಟ್ಟಿದೆ. ಮೊದಲು ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಎಂದು ಹೇಳ್ತಿದ್ವಿ. ಈಗ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡ್ತೇವೆ, ಮುಂದೆಯೂ ನಾವೇ 130 ಸೀಟು ಗೆದ್ದು ಅಧಿಕಾರಕ್ಕೆ ಬರ್ತೇವೆಂದು ಪ್ರತಿಪಕ್ಷನಾಯಕ ಸಿದ್ದರಾಮಯ್ಯನವರನ್ನ ಯಡಿಯೂರಪ್ಪ ಕಾಳೆಲೆದರು.

ಇನ್ನು ಮಾಜಿ ಸಿಎಂ ಯಡಿಯೂರಪ್ಪ ಸಿದ್ದರಾಮಯ್ಯನವರ ಕಾಲೆಳೆದ್ರೆ, ಕಾಂಗ್ರೆಸ್‌ನ ಎಂ.ಬಿ.ಪಾಟೀಲ್ ಬಿಎಸ್‌ವೈ ಕುಟುಕುವ ಪ್ರಯತ್ನ ಮಾಡಿದ್ರು. ನೀವು ಕಾಂಗ್ರೆಸ್ ಮುಕ್ತ ಅಂತ ಹೇಳ್ತಿದ್ದೀರಾ. ಪಾಪ ಬಿಜೆಪಿ ಪಕ್ಷದಲ್ಲಿ ನಿಮ್ಮನ್ನೇ ಮುಕ್ತಮಾಡಿದ್ದಾರೆ ಅದಕ್ಕೆ ಏನಂತ ಹೇಳ್ತೀರಾ ಅಂತ ಕಿಚಾಯಿಸಿದ್ರು.

ಇನ್ನು ಯಡಿಯೂರಪ್ಪ ತಮ್ಮನ್ನ ಕಾಲೆಳೆದಿದ್ದಕ್ಕೆ ಸಿದ್ದರಾಮಯ್ಯ ಕೂಡ ಕೌಂಟರ್ ಕೊಟ್ರು. ಪಾಪ ನೀವು ಪಕ್ಷದ ಬಗ್ಗೆ ಇಷ್ಟು ಕಾಳಜಿ ಇಟ್ಕೊಂಡಿದ್ದೀರಾ. ರಾಜ್ಯ ಸುತ್ತಿ ಪಕ್ಷ ಅಧಿಕಾರಕ್ಕೆ ತರ್ತೇವೆ ಅಂತ್ತಿದ್ದೀರಾ. ಆದ್ರೆ ಮುಖ್ಯಮಂತ್ರಿಯಾಗಿದ್ದ ನಿಮ್ಮನ್ನ ಅನಗತ್ಯವಾಗಿ ಕೆಳಗಿಳಿಸಿಬಿಟ್ರಲ್ಲಾ. ಪಾಪ ನಿಮ್ಮನ್ನೇ ಮುಕ್ತ ಮಾಡಿಬಿಟ್ರಲ್ಲಾ. ಈ ನೋವಿನಿಂದ ನೀವು ಈ ರೀತಿ ಹೇಳ್ತಿರಬಹುದು. ನೀವು ರಾಜೀನಾಮೆ ಕೊಟ್ಟಾಗ ಕಣ್ಣೀರು ಹಾಕಿದ್ದನ್ನ ನಾವು ನೋಡಿದ್ದೇವೆ. ಇಂತಹ ಪರಿಸ್ಥಿತಿ ನಿಮಗೆ ಬರಬಾರ್ದಿತ್ತು ಅಂತ ಯಡಿಯೂರಪ್ಪಗೆ ತಿರುಗೇಟು ನೀಡಿದ್ರು.

ಮುಖ್ಯಮಂತ್ರಿ‌ ಸ್ಥಾನದಿಂದ ನಿಮ್ಮನ್ನ ಮುಕ್ತಮಾಡಿದ್ರು ಅನ್ನೋ ಸಿದ್ದರಾಮಯ್ಯ, ಪಾಟೀಲ್‌ ಲೇವಡಿಗೆ ಮತ್ತೆ ಬಿಎಸ್ ವೈ ತಿರುಗೇಟು ನೀಡಿದ್ರು. ನನ್ನನ್ನ ಯಾರೂ ಬಲವಂತವಾಗಿ ಕೆಳಗಿಳಿಸಲಿಲ್ಲ. ನಾನೇ ಸ್ವಯಂಪ್ರೇರಿತನಾಗಿ ರಾಜೀನಾಮೆ ಕೊಟ್ಟೆ. ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದು ನಾನೇ. ಮತ್ತೆ ಸಿಎಂ ಆಗುವ ಆಸೆ ನನಗಿಲ್ಲ. ಸಿದ್ದರಾಮಯ್ಯನವರೇ ನಿಮ್ಮನ್ನ ನೋಡಿ ದುಃಖವಾಗ್ತಿದೆ. ಇನ್ನೊಮ್ಮೆ ನೀವು ಸಿಎಂ ಆದ್ರೆ ಕಾಂಗ್ರೆಸ್ ಮುಕ್ತವಾಗುತ್ತೆ ಅಂತ ಲೇವಡಿ ಮಾಡಿದ್ರು. ನಮಗೇನೋ ಮೋದಿಯವರಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಿಮಗೆ ಯಾವ ನಾಯಕರಿದ್ದಾರೆ ಸ್ವಾಮಿ. ಅವರ ಅಡ್ರೆಸ್ಸೇ ಇಲ್ವಾಲ್ಲಾ ಅಂತ ಕಿಂಡಲ್ ಮಾಡಿದರು.

ಇನ್ನು ಕಾಂಗ್ರೆಸ್ ಬಿಜೆಪಿ ನಾಯಕರು ಲೇವಡಿ ಮಾಡಿಕೊಳ್ತಿರಬೇಕಾದ್ರೆ ಜೆಡಿಎಸ್ ನಾಯಕರು ನಾವೇನು ಕಮ್ಮಿ ಅಂತ ಎಂಟ್ರಿಯಾದ್ರು. ನಿಮ್ಮ ಹೈಕಮಾಂಡ್‌ಗಳು ದೆಹಲಿಯಲ್ಲಿವೆ. ಆದ್ರೆ, ನಮ್ಮ‌ಹೈಕಮಾಂಡ್ ಪದ್ಮನಾಭನಗರದಲ್ಲಿದೆ. ನೀವು ಏನು ಬೇಕಾದ್ರೂ ದೆಹಲಿಗೆ ಹೋಗ್ಬೇಕು.. ನಾವು ಇಲ್ಲೇ ಪರಿಹರಿಸಿಕೊಳ್ಳಬಹುದು ಅಂತ ಹೇಳುವ ಮೂಲಕ ಇಬ್ಬರ ಕಾಲೆಳೆದ್ರು. ಅಲ್ಲದೆ ರಾಜ್ಯದ ಜನರಿಗೂ ನಮ್ಮನ್ನೇ ಆಯ್ಕೆ ಮಾಡಿ ಅನ್ನೋ ಸಂದೇಶ ರವಾನಿಸಿದರು.

ಪಂಚ ರಾಜ್ಯ ಚುನಾವಣೆ ಫಲಿತಾಂಶ, ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಗಿಂತ ಹೆಚ್ಚಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಬಿಎಸ್‌ವೈ ಪರಸ್ಪರ ಲೇವಡಿ ಮಾಡುವ ಪ್ರಯತ್ನ ನಡೆಸಿದ್ರು. ಮತ್ತೆ ಹಳೆಯ ಕಲಾಪವನ್ನು ಉಭಯ ನಾಯಕರು ನೆನಪು ಮಾಡಿದ್ರು.

RELATED ARTICLES

Related Articles

TRENDING ARTICLES