ಬೆಂಗಳೂರು: ಯು.ಟಿ ಖಾದರ್‌ಗೆ ವಿಪಕ್ಷ ಉಪ ನಾಯಕ ಸ್ಥಾನ ನೀಡೋ ವಿಚಾರಕ್ಕೆ ಸಂಬಂದಿಸಿದ್ದಂತೆ ಮಾತನಾಡಿದ ಸಿಎಂ ಇಬ್ರಾಹಿಂ, ಇಷ್ಟು ದಿನ ಮುಸ್ಲಿಮರು ಕಾಣಲಿಲ್ವಾ? ನಾನು ಧ್ವನಿ ಎತ್ತಿದ ಬಳಿಕ ಯು.ಟಿ ಖಾದರ್‌ಗೆ ಸ್ಥಾನ ಕೊಡಬೇಕಾಯ್ತಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ನಾನು ಕಮ್ಯುನಲ್, ಕರೆಪ್ಟ್ ಅಂತ ಯಾರೂ ಕರೆದಿಲ್ಲ ,RSS ಕೂಡ ನನ್ನನ್ನ ಕಮ್ಯೂನಲ್ ಅಂತ ಕರೆದಿಲ್ಲ ನಾನು ನಾಗ್ಪುರದಲ್ಲಿ ಕೂಡ ಭಾಷಣ ಮಾಡಿ ಬಂದಿದ್ದೆ ಪ್ರಶಾಂತ್ ಭೂಷಣ್ ಕಡೆಯವರು ಬಂದು ನನ್ನ ಭೇಟಿ ಮಾಡಿದ್ರು, ಇಲ್ಲಿ AAP ಬರೋದಿಲ್ಲ ಇಲ್ಲಿ ಕಸಪೊರಕೆ ಒಂದೆರಡು ಸಾಕಾಗಲ್ಲ ಇಲ್ಲಿ ಅವರು ಪಕ್ಷ ಕಟ್ಟೋದಕ್ಕೆ ಸಾಧ್ಯವಿಲ್ಲ ಎಂದಿದೆ ಎಂದ್ರು.
ಇನ್ನು ಖಾದರ್ ಸ್ಥಾನ ನೀಡಿದ್ರೆ, ಇಬ್ರಾಹಿಂ ಕಾಂಗ್ರೆಸ್‌ನಲ್ಲಿ ಉಳೀತಿದ್ರಾ ಅನ್ನೋ ಪ್ರಶ್ನೆಗೆ ಉತ್ತರಿಸಿ, ಖಾದರ್ ಚೆಡ್ಡಿ ನನಗೆ ಆಗಲ್ಲ, ನನ್ನದು ದೊಡ್ಡ ಸೈಜ್ ಅಂತ ಇಬ್ರಾಹಿಂ ಹಾಸ್ಯ ಮಾಡಿದ್ರು. ಕಾಂಗ್ರೆಸ್ ಮುಂದೆ ಸೋತ್ರೆ ಯಾರು ಕಾರಣ ಅನ್ನೋ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ ಕಾಂಗ್ರೆಸ್ ಮುಂದೆ ಸೋತ್ರೆ ನಾನೇ ಕಾರಣ I am a leader ಎಂದ್ರು.