ಪಂಜಾಬ್: ಪಂಜಾಬ್ ಮತದಾರನ ಈ ತೀರ್ಪಿನಿಂದಾಗಿ ಕಂಪಿಸಿರುವ ಸಿಧು ಟ್ವಿಟ್ ಮಾಡಿ ಮತದಾರ ಪ್ರಭುವಿನ ಈ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಜನರ ಧ್ವನಿ ದೇವರ ಧ್ವನಿಯಿದ್ದಂತೆ. ಪಂಜಾಬ್ ಜನತೆಯ ಈ ತೀರ್ಪನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇನೆ. ಆಪ್ಗೆ ಅಭಿನಂದನೆಗಳು ಎಂದು ಸಿಧು ಟ್ವೀಟ್ ಮಾಡಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಇಂದು ಈ ಟ್ವಿಟ್ ಮಾಡಲು ಕಾರಣವಾಗಿದ್ದೇ ಪಂಜಾಬ್ ಕಾಂಗ್ರೆಸ್ ನಾಯಕರ ಒಳಜಗಳ. ಪಂಜಾಬ್ನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಿಂಗಳುಗಳಿಂದ ನಡೆಸಿದ ನಾಯಕತ್ವದ ಕಚ್ಚಾಟದ ಫಲಿತಾಂಶ ಇದೀಗ ಹೊರಬಿದ್ದಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದ ಭಾರಿ ತಿಕ್ಕಾಟದಲ್ಲಿ ಸಿಧುಗೆ ತಿರುಗಿಬಿದ್ದಿದ್ದ ಪೂರ್ವ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಕ್ಷವನ್ನೇ ತ್ಯಜಿಸಿ ಹೊಸ ಪಕ್ಷ ರಚಿಸಿದ್ದರು. ಅದಾದ ನಂತರ ಈಗಿನ ಮುಖ್ಯಮಂತ್ರಿ ಚನ್ನಿ ಹಾಗು ಸಿಧುಗೆ ಮುಖ್ಯಮಂತ್ರಿ ಗಾದಿಗಾಗಿ ಭಾರಿ ತಿಕ್ಕಾಟವೇ ನಡೆಯಿತು. ಇದನ್ನೆಲ್ಲ ದೂರದಿಂದಲೇ ಗಮನಿಸುತ್ತಿದ್ದ ಮತದಾರ ಪ್ರಭು ಇದೀಗ ಚುನಾವಣೆಯಲ್ಲಿ ಕಾಂಗ್ರೆಸನ್ನು ತಿರಸ್ಕರಿಸಿ ಆಮ್ ಆದ್ಮಿ ಪಕ್ಷಕ್ಕೆ ಅಭೂತಪೂರ್ವ ಗೆಲುವನ್ನು ನೀಡಿದ್ದಾರೆ. ಇದರೊಂದಿಗೆ ಅಮರೇಂದರ್ ಸಿಂಗ್ ಹಾಗೂ ಸಿಧು ಇಬ್ಬರೂ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದಾರೆ.
The voice of the people is the voice of God …. Humbly accept the mandate of the people of Punjab …. Congratulations to Aap !!!
— Navjot Singh Sidhu (@sherryontopp) March 10, 2022