ಪಂಚರಾಜ್ಯಗಳ ಚುನಾವಣೆಯಲ್ಲಿ ಅತ್ಯಂತ ಅಚ್ಚರಿಯ ಫಲಿತಾಂಶ ನೀಡುತ್ತಿರುವ ರಾಜ್ಯವೆಂದರೆ ಪಂಜಾಬ್. ಪಂಜಾಬ್ನಲ್ಲಿ ಆಡಳಿತಾರೂಢ ಕಾಂಗ್ರೆಸ್ಅನ್ನು ಆಮ್ ಆದ್ಮಿ ಪಕ್ಷ ಸಾರಾಸಗಟಾಗಿ ಗುಡಿಸಿ ಹಾಕಿದೆ. ಪಂಜಾಬ್ ಕಾಂಗ್ರೆಸ್ಸಿನ ನಾಯಕರಲ್ಲಿನ ಒಳಜಗಳವೇ ಅದಕ್ಕೆ ಮುಳುವಾಗಿರುವ ಎಲ್ಲಾ ಸಾಧ್ಯತೆಯ ಜೊತೆಗೆ ಕೇಜ್ರಿವಾಲ್ ಆಡಳಿತ ವೈಖರಿಯೂ ಪಂಜಾಬಿಗರ ಮನಸೆಳೆದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಪಂಜಾಬ್ನಲ್ಲಿ ಇದುವರೆಗಿನ ಫಲಿತಾಂಶವನ್ನು ನೋಡುವುದಾದರೆ ಆಮ್ ಆದ್ಮಿ ಪಕ್ಷ 90 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಕಳೆದ ಬಾರಿಯ ಚುನಾವಣಾ ಫಲಿತಾಂಶಕ್ಕೆ ಹೋಲಿಸುವುದಾದರೆ ಈ ಬಾರಿ ಎಎಪಿ 70 ಸ್ಥಾನಗಳ ಹೆಚ್ಚುವರಿ ಲಾಭ ಮಾಡಿಕೊಂಡಿದೆ. ಕಾಂಗ್ರೆಸ್ ಕೇವಲ 15 ಸ್ಥಾನಗಳ ಮುನ್ನಡೆಯನ್ನು ಗಳಿಸಿದ್ದು, 62 ಸ್ಥಾನಗಳನ್ನು ಕಳೆದುಕೊಂಡಿದೆ.
ಅಕಾಲಿ ಶಿರೋಮಣಿ ದಳ 7 ಸ್ಥಾನಗಳನ್ನು ಗಳಿಸಿದ್ದು, ಕಳೆದ ಬಾರಿಯ 8 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ 4 ಸ್ಥಾನಗಳನ್ನು ಗಳಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ 1 ಸ್ಥಾನ ಲಾಭ ಮಾಡಿಕೊಂಡಿದೆ.