Monday, December 23, 2024

ಡಿಕೆಶಿಗೆ ಮಾಜಿ ಸಿಎಂ ಹೆಚ್​​ ಡಿ ಕುಮಾರಸ್ವಾಮಿ ಟಾಂಗ್​​

ಬೆಂಗಳೂರು : ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಜ್ಜಾನೋದಯ ಮಾಡಿಕೊಳ್ಳುವ ಪಂಚರಾಜ್ಯ ಫಲಿತಾಂಶ ಇದಾಗಿದೆ ಎಂದು ಮಾಜಿ CM ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್​​ಗೆ​ ಮುಖಭಂಗ ಹಿನ್ನೆಲೆ ನಗರದಲ್ಲಿಂದು ಮಾತನಾಡಿದ ಅವರು, ಎಕ್ಸಿಟ್ ಪೋಲ್​​ನ ಸಮೀಕ್ಷೆ ಪ್ರಕಾರ ಫಲಿತಾಂಶ ಬರುತ್ತಿದೆ. ಯಾವಗಲೂ ಕಾಂಗ್ರಸ್​​ ಪಕ್ಷವನ್ನು ಹೊಗಳುವ ನಾಯಕರಿಗೆ ಈ ಫಲಿತಾಂಶದಿಂದ ಪ್ರತಿಯೊಬ್ಬರಿಗೂ ಬುದ್ದಿ ಬರಲಿದೆ ಎಂದರು.

ಇನ್ನು BJPಗೆ ಪೈಟ್ ಕೊಡಲು ಜೆಡಿಎಸ್ ಪಕ್ಷವೇ ಸೂಕ್ತ ಎಂಬುದು ಇದೀಗ ಸಾಬೀತಾಗಿದೆ. JDSನ ಮುಗಿಸಲು ಹೋದವರಿಗೆ ಪಾಠ ಕಲಿಸಿದ ಚುನಾವಣಾ ಫಲಿತಾಂಶ ಇದಾಗಿದೆ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದೇ ಬಿಟ್ಟೋ ಎಂತಿದ್ದವರಿಗೆ ಈಗ ಸರಿಯಾಗಿ  ಮುಖಭಂಗವಾಗಿದೆ ಹಾಗೂ ಗೋವಾ, ಪಂಜಾಬ್​​ನಲ್ಲಿ ಸರ್ಕಾರ ರಚನೆ ಮಾಡ್ತೀವಿ ಅಂತ ಹೇಳ್ತಾಯಿದ್ರು ಕರ್ನಾಟಕದಿಂದ ಸೂತ್ರಧಾರರನ್ನ ಗೋವಾಗೆ ಶಾಸಕರ ರಕ್ಷಣೆಗೆ ಇಲ್ಲಿಂದ ಕಳುಹಿಸಿಲ್ವಾ ಎಂದು ಪರೋಕ್ಷವಾಗಿ ಸಿದ್ದು,ಡಿಕೆಶಿಗೆ ಹೆಚ್ ಡಿ ಕೆ ಟಾಂಗ್ ಕೊಟ್ಟಿದ್ದಾರೆ.

ಅಲ್ಲದೇ ನೀರಾವರಿ ವಿಚಾರಗಳನ್ನ ಇಟ್ಕೊಂಡು ಹೋರಾಟ ಮಾಡುತ್ತೇವೆ, ಜನರಿಗೆ ನ್ಯಾಯ ಕೊಡಿಸುತ್ತೇವೆ, ನಮ್ಮ ನೀರು ನಮ್ಮ ಹೋರಾಟ ಎಂದು ಬೀಗುತ್ತಿದ್ದವರಿಗೆ ಈ ಪಂಚರಾಜ್ಯ ಚುನಾವಣೆಯಿಂದ ಬುದ್ದಿ ಬರಲಿದೆ. 5 ರಾಜ್ಯಗಳ ಪರಿಸ್ಥಿತಿ ಬೇರೆ, ನಮ್ಮ ರಾಜ್ಯಗಳ ಪರಿಸ್ಥಿತಿ ಬೇರೆಯಾಗಿದೆ ಹಾಗೂ ಕಾಂಗ್ರೆಸ್​​ನವರು ಗೋವಾ, ಉತ್ತರಖಾಂಡ್ ಸರ್ಕಾರ ರಚನೆಗೆ ರಾಜ್ಯದ ಸೂತ್ರಧಾರರನ್ನೇ ಕರೆಸಿದ್ದಾರೆ ಎಂದು ಹೆಚ್​​ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದ್ರೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ ಎಂದು ಕಂಡುಬರುತ್ತಿದೆ. ರಾಜ್ಯದಲ್ಲಿ ನೀರಾವರಿ ಸಮಸ್ಯಗಳಿವೆ, ಮುಂದಿನ ಒಂದು ವರ್ಷ ನೀರಾವರಿಗಾಗಿ ಕಾರ್ಯಕ್ರಮ ಮಾಡ್ತಾಯಿದ್ದೇವೆ. ಪಂಜಾಬ್ ,ಪಶ್ಚಿಮ ಬಂಗಾಳದ ರಿಸಲ್ಟ್ ನಮಗೆ ಸ್ಪೂರ್ತಿ ತಂದಿದೆ. ಒಂದು ವರ್ಷ ಇದೆ, ನೋಡೋಣ ಏನೆಲ್ಲಾ ಆಗುತ್ತದೆ  ಎಂದು ಹೆಚ್​​ ಡಿ ಕುಮಾರಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES