Thursday, January 23, 2025

Election Result: ಮಣಿಪುರದಲ್ಲೂ ಬಿಜೆಪಿ ಮೇಲುಗೈ

ಪಂಚರಾಜ್ಯ ಚುನಾವಣೆಯಲ್ಲಿ  ಮಣಿಪುರದ ಇದುವರೆಗಿನ ಫಲಿತಾಂಶವನ್ನು ನೋಡುವುದಾದರೆ ಬಿಜೆಪಿ ಇದುವರೆಗೂ 30 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಳೆದ ಚುನಾವಣೆಗಿಂತ 9 ಸ್ಥಾನಗಳ ಹೆಚ್ಚುವರಿ ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.

ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕೇವಲ 9 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಕಳೆದ ಚುನಾವಣೆಗಿಂತ 19 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. NPP 9 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, 5 ಕ್ಷೇತ್ರಗಳ ಲಾಭ ಗಳಿಸಿಕೊಂಡಿದೆ. JDU 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಈ ನಾಲಕ್ಕೂ ಸ್ಥಾನಗಳು ಅದಕ್ಕೆ ಬೋನಸ್ ಆಗಿ ದಕ್ಕುವಂತಿವೆ. ಇತರರು 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಅದರಲ್ಲಿ 3 ಸ್ಥಾನಗಳು ಇತರರಿಗೆ ಲಾಭವಾಗಿ ಸಿಗುವಂತಿವೆ.

RELATED ARTICLES

Related Articles

TRENDING ARTICLES