Monday, December 23, 2024

ಪಂಜಾಬ್​ನಲ್ಲಿ ಆಪ್ ಭರ್ಜರಿ ಮುನ್ನಡೆ

ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷ ಸರಳ ಬಹುಮತ ಪಡೆಯುವತ್ತ ದಾಪುಗಾಲಿಕ್ಕಿದೆ. ಅದು ಇದುವರೆಗಿನ ಫಲಿತಾಂಶದಂತೆ 42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೇವಲ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 3 ಹಾಗೂ ಎಸ್​ಎಡಿ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಆಪ್ ಇದುವರೆಗೂ ಗಳಿಸಿರುವ ಮುನ್ನಡೆಯನ್ನು ಉಳಿಸಿಕೊಂಡು ಅಷ್ಟೂ ಕ್ಷೇತ್ರಗಳನ್ನು ಗೆದ್ದುಕೊಂಡರೆ ಆಪ್ ಪಂಜಾಬ್​ನಲ್ಲಿ ಸ್ವತಂತ್ರ ರಾಜ್ಯದ ರೂಪದಲ್ಲಿ ಸರ್ಕಾರ ರಚಿಸಲಿದೆ. ಇದುವರೆಗೂ ದೆಹಲಿಯ ಸರ್ಕಾರ ರಚಿಸಿದ್ದರೂ ಕೇಂದ್ರ ಸರ್ಕಾರದ ನೆರಳಿನಲ್ಲೇ ಕಾರ್ಯನಿರ್ವಹಿಸುವ ಮುಲಾಜಿನಲ್ಲಿದ್ದ ಕೇಜ್ರಿವಾಲ್ ಈಗ ಒಂದು ಸ್ವತಂತ್ರ ರಾಜ್ಯದ ಅಧಿಪತಿಯಾಗಲಿದ್ದಾರೆ.

RELATED ARTICLES

Related Articles

TRENDING ARTICLES