Wednesday, January 22, 2025

ಅರಣ್ಯ ಇಲಾಖೆ ಬೇಜವಾಬ್ದಾರಿ : ಆನೆ ದಾಳಿಗೆ ರೈತ ಬಲಿ

ಚಾಮರಾಜನಗರ : ಜಮೀನಿನಲ್ಲಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದ್ದು ರೈತ ಸಾವನಪ್ಪಿದ ಘಟನೆ ಚಾಮರಾಜನಗರ ಗಡಿನಾಡು ತಾಳವಾಡಿಯ ಸಮೀಪದ ತಿಗಣಾರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹದೇವ್ ಎಂಬುವವರು ಆನೆ ತುಳಿತದಲ್ಲಿ ಸಾವೀಗಿಡಾಗಿದ್ದಾರೆ. ಈ ಭಾಗದಲ್ಲಿ ಸುಮಾರು ತಿಂಗಳಿಂದಲೂ ಆನೆ ಗಲಾಟೆ ನಡೆಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು ಅಧಿಕಾರಿಗಳು ಮೌನವಾಗಿದ್ದರು, ಆದರಿಂದ ಅರಣ್ಯ ಇಲಾಖೆ ಬೇಜವಾಬ್ದಾರಿಯಿಂದಲೇ ಈ ಅವಘಡ ನಡೆದಿದೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.

ಇನ್ನು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES