ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗಿದ್ದು ಹೀಗಾಗಿ ಬಹಳ ಜನ ಉಕ್ರೇನ್,ಬೇರೆ ಬೇರೆ ಕಡೆ ಹೋಗ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ದುರಾದೃಷ್ಟವಾಗಿ ಅಲ್ಲಿ ಯುದ್ಧ ಪ್ರಾರಂಭವಾಗಿದೆ. ಅಲ್ಲಿ, ದೇಶದ 20 ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಯುದ್ಧ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ಅಲ್ಲಿ ವಿದ್ಯಾಭ್ಯಾಸ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ ಏನು?, ವಿಶೇಷ ಕೋಟಾದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಬೇಕು. ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ಮೋದಿಯವರನ್ನ ವಿಶ್ವಗುರು ಅಂತಾರೆ. ಮಕ್ಕಳಿಗೆ ಸಹಾಯ ಮಾಡುಬಹುದಲ್ಲಾ? ಎಂದು ರಾಮಾಲಿಂಗ ರೆಡ್ಡಿ ಪ್ರಶ್ನಿಸಿದ್ದಾರೆ.