Wednesday, January 22, 2025

ಬಜೆಟ್​​ನಿಂದ ಜನರಿಗೆ ಸಾಲದ ಪ್ರಮಾಣ ಹೆಚ್ಚಾಗಲಿದೆ : ಎಂ ಲಕ್ಷ್ಮಣ್

ಮೈಸೂರು :ಈ ಬಾರಿಯ ರಾಜ್ಯ ಬಜೆಟ್​​​ನಲ್ಲಿ ಕೇವಲ 27% ಮಾತ್ರ ಜನ ಸಾಮಾನ್ಯರಿಗೆ ತಲುಪುತ್ತದೆ ಎಂದು ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ರಾಜ್ಯ ಬಜೆಟ್​​ನ ಗಾತ್ರ ದೊಡ್ಡದಾಗಿದ್ದರೂ ಕೂಡ ಜನ ಸಾಮಾನ್ಯರಿಗೆ ಹೆಚ್ಚಿನ ಪ್ರಯೋಜ‌ನವಿಲ್ಲ. ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಲದ ಪ್ರಮಾಣ ಏರಿಕೆಯಾಗಿದೆ. ಅಲ್ಲದೇ ಈ ಬಾರಿಯ ಬಜೆಟ್ ಕೇಸರಿ ಬಜೆಟ್ ಆಗಿದೆ. ಈ ಬಾರಿಯ ಬಜೆಟ್ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಕೈಗಾರಿಕಾ ವಿರೋಧಿ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಜನರಿಗೆ ಅನುಕೂಲವಾಗುವ ಅಂಶಗಳು ಈ ಬಾರಿಯ ರಾಜ್ಯ ಬಜೆಟ್​​ನಲ್ಲಿಲ್ಲ. ಕೆ ಆರ್ ಆಸ್ಪತ್ರೆಯ ಉನ್ನತೀಕರಣಕ್ಕೆ 89 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರತಾಪ್ ಸಿಂಹರವರೇ ನೀವು ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದೀರಿ ಎಂದು
ಏರ್​​​ಪೋರ್ಟ್ ವಿಚಾರದಲ್ಲೂ ಸುಳ್ಳು ಹೇಳಿಕೆ ನೀಡುತ್ತಿದ್ದೀರಾ ಎಂದು ಆಕ್ಷೇಪ ತೋರಿಸಿದರು.

ಅಲ್ಲದೇ ರನ್ ವೇ ವಿಸ್ತರಣೆಗಾಗಿ ಈಗಿರುವ ರಾಷ್ಟ್ರೀಯ ಹೆದ್ದಾರಿಯನ್ನು 2 ಕಿ ಮೀ ದೂರದಲ್ಲಿ ನಿರ್ಮಿಸಬೇಕು ಇದು ನಿಮ್ಮ ಕಾಲದಲ್ಲಿ ಸಾಧ್ಯವಾಗುವುದಿಲ್ಲ. ಒಂದೆರಡು ಯೋಜನೆಗಳನ್ನು ಘೋಷಣೆ ಮಾಡಿಸಿ ನಾನೇ ಮಾಡಿಸಿದೆ ಎಂದು ಹೇಳುತ್ತಿದ್ದೀರಾ ಈ ಮೂಲಕ ಬಿಜೆಪಿ ಶಾಸಕರ ಕೊಡುಗೆ ಏನು ಇಲ್ಲವೆಂಬ ಸಂದೇಶವನ್ನು ನೀಡಿದ್ದೀರಾ ಎಂದರು.

ಯುದ್ದಪೀಡಿತ ಉಕ್ರೇನ್​​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಿಚಾರದಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಉಕ್ರೇನ್​​​ನಲ್ಲಿ ನೆಲೆಸಿರುವ ಭಾರತೀಯರ ಮಾಹಿತಿ ನೀಡುವಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಉಕ್ರೇನ್​​ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿಚಾರದಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರದ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES